Mysuru Dasara 2022: ಈ ಬಾರಿಯ ಮೈಸೂರು ದಸರಾದಲ್ಲಿ ಸಾವರ್ಕರ್ ಹವಾ, ವಸ್ತು ಪ್ರದರ್ಶನದಲ್ಲಿ ಸಾವರ್ಕರ್ ಕಲಾಕೃತಿ

ದಸರೆಯಲ್ಲೂ ಸಾವರ್ಕರ್ ಕಿಚ್ಚು ಸದ್ದು ಮಾಡಲಿದೆ. ದಸರಾ ವಸ್ತು ಪ್ರದರ್ಶನದಲ್ಲಿ ಸಾವರ್ಕರ್ ಅವರ ಮರಳು ಕಲಾಕೃತಿಗೆ ಸಿದ್ಧತೆ ನಡೆದಿದೆ.

Mysuru Dasara 2022: ಈ ಬಾರಿಯ ಮೈಸೂರು ದಸರಾದಲ್ಲಿ ಸಾವರ್ಕರ್ ಹವಾ, ವಸ್ತು ಪ್ರದರ್ಶನದಲ್ಲಿ ಸಾವರ್ಕರ್ ಕಲಾಕೃತಿ
ವೀರ್​ ಸಾವರ್ಕರ್
TV9kannada Web Team

| Edited By: Ayesha Banu

Sep 22, 2022 | 8:58 AM

ಮೈಸೂರು: ಇತ್ತೀಚೆಗೆ ರಾಜ್ಯದ ಹಿಂದೂ ಮುಸ್ಲೀಮರಲ್ಲಿ ಸಾವರ್ಕರ್ v/s ಟಿಪ್ಪು ಸುಲ್ತಾನ್ ಕಿಚ್ಚು ಹೆಚ್ಚಾಗಿತ್ತು. ಹೀಗಾಗಿ ರಾಜ್ಯಾದ್ಯಂತ ಸಾವರ್ಕರ್(Veer Savarkar) ಅಭಿಯಾನಗಳನ್ನು ನಡೆಸಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ರವಾನಿಸುವ ಕೆಲಸವಾಗಿತ್ತು. ಗಣೇಶೋತ್ಸವ ಸೇರಿದಂತೆ ಬಹುತೇಕ ಹಿಂದೂ ಕಾರ್ಯಕ್ರಮಗಳಲ್ಲಿ ಸಾವರ್ಕರ್​ ಅವರನ್ನು ವೀರರಾಗಿ ಮಾಡಲಾಗಿತ್ತು. ಸದ್ಯ ಈಗ ವಿಶ್ವವಿಖ್ಯಾತ ಮೈಸೂರು ದಸರಾ 2022ರಲ್ಲೂ( Mysuru Dasara 2022) ವಿನಾಯಕ ದಾಮೋದರ ಸಾವರ್ಕರ್ ಹವಾ ಎದ್ದಿದೆ.

ದಸರೆಯಲ್ಲೂ ಸಾವರ್ಕರ್ ಕಿಚ್ಚು ಸದ್ದು ಮಾಡಲಿದೆ. ದಸರಾ ವಸ್ತು ಪ್ರದರ್ಶನದಲ್ಲಿ ಸಾವರ್ಕರ್ ಅವರ ಮರಳು ಕಲಾಕೃತಿಗೆ ಸಿದ್ಧತೆ ನಡೆದಿದೆ. ಈ ಬಾರಿ ದಸರಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಲಾಕೃತಿಗಳ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದ್ದು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಾವರ್ಕರ್ ಶಿಲ್ಪ ಕಲಾಕೃತಿ, ಮಹಾತ್ಮ ಗಾಂಧೀಜಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕಲಾಕೃತಿಗಳು ಸಿದ್ಧವಾಗುತ್ತಿವೆ. ಇನ್ನು ವಿಶೇಷವೆಂದರೆ ಅಪ್ಪು ಸರಣಿ ಕಲಾಕೃತಿ ಪ್ರದರ್ಶನ ಕಾಣಲಿದೆ. ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಬಾಲ್ಯದಿಂದ ಇಲ್ಲಿನ ವರೆಗಿನ ಸಿನಿಮಾಗಳ ಪ್ರಸಿದ್ಧ ಪಾತ್ರಗಳ ಕಲಾಕೃತಿ ನಿರ್ಮಾಣ ಮಾಡಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada