Krishna Janmashtami: ಕೃಷ್ಣ ಜನ್ಮಾಷ್ಟಮಿಯ ದಿನ ಹಸುವಿಗೆ ಮೇವು ಹಾಕುವುದರಿಂದ ಸಿಗುತ್ತೇ ವಿಶೇಷ ಲಾಭ

ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಗೊಲ್ಲ ಕೃಷ್ಣನಿಗೆ ಹಸುಗಳೆಂದರೆ ಪ್ರಾಣ. ಜನ್ಮಾಷ್ಟಮಿ ದಿನದಂದು ಹಸುಗಳಿಗೆ ಗೋಗ್ರಾಸ ಅಂದರೆ ಮೇವನ್ನು ಕೊಡಬೇಕು. ಹೀಗೆ ಮಾಡುವುದರಿಂದ ಗೋಮಾತೆಯ ಆಶೀರ್ವಾದದ ಜೊತೆಗೆ ಶ್ರೀಕೃಷ್ಣನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಸುವಿಗೆ ಬೆಲ್ಲ ತಿನ್ನಿಸಬೇಕು. ಇದರಿಂದ ಗೋಮಾತೆ ಸುಪ್ರಸನ್ನಳಾಗಿ ಆಶೀರ್ವಾದ ಮಾಡುತ್ತಾಳೆ.

Krishna Janmashtami: ಕೃಷ್ಣ ಜನ್ಮಾಷ್ಟಮಿಯ ದಿನ ಹಸುವಿಗೆ ಮೇವು ಹಾಕುವುದರಿಂದ ಸಿಗುತ್ತೇ ವಿಶೇಷ ಲಾಭ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 06, 2023 | 12:43 PM

ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ(Krishna Janmashtami) ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಈ ಬಾರಿ 2023 ರ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಏಕೆಂದರೆ ಅಷ್ಟಮಿ ತಿಥಿಯು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 03:37 ಕ್ಕೆ ಪ್ರಾರಂಭವಾಗಲಿದೆ ಮತ್ತು ಅದು ಸೆಪ್ಟೆಂಬರ್ 7 ರಂದು ಸಂಜೆ 04:14 ಕ್ಕೆ ಕೊನೆಗೊಳ್ಳುತ್ತದೆ. ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 09:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಇದು ಸೆಪ್ಟೆಂಬರ್ 7 ರಂದು ಬೆಳಗ್ಗೆ 10:25 ಕ್ಕೆ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ, ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರ ಎರಡನ್ನೂ ಪರಿಗಣಿಸಿ, 2023 ರ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತದೆ ಮತ್ತು ದಹಿ ಹಂಡಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ.

ಇಂದು ಹಸುವಿಗೆ ಮೇವು ಹಾಕಿದರೆ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತೆ

ಹಸುವಿಗೆ ಪ್ರತಿ ದಿನ ಮೇವನ್ನು ಕೊಡಬೇಕು. ಇದು ಪ್ರತಿ ದಿನ ಆಗದಿದ್ದರೆ ಕೃಷ್ಣ ಜನ್ಮಾಷ್ಟಮಿಯ ದಿನವಾದರೂ ಹಸುವಿಗೆ ಗೋಗ್ರಾಸ ಅಂದರೆ ಮೇವನ್ನು ಕೊಡಬಹುದು. ಹೀಗೆ ಮಾಡುವುದರಿಂದ ಗೋಮಾತೆಯ ಆಶೀರ್ವಾದದ ಜೊತೆಗೆ ಶ್ರೀಕೃಷ್ಣನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಸುವಿಗೆ ಬೆಲ್ಲ ತಿನ್ನಿಸಬೇಕು. ಇದರಿಂದ ಗೋಮಾತೆ ಸುಪ್ರಸನ್ನಳಾಗಿ ಆಶೀರ್ವಾದ ಮಾಡುತ್ತಾಳೆ. ಎಲ್ಲಿ ಹಸುಗಳು ಖುಷಿಖುಷಿಯಾಗಿರುತ್ತವೋ ಅಲ್ಲೆಲ್ಲಾ ನಕಾರಾತ್ಮಕ ಭಾವಗಳು ತನ್ನಿಂತಾನೇ ನಾಶಗೊಳ್ಳುತ್ತವೆ. ಕೃಷ್ಣ ಜನ್ಮಾಷ್ಟಮಿ ದಿನ ಹಸುಗಳ ಮೈತೊಳೆದು, ಸ್ನಾನ ಮಾಡಿಸುವುದು ಉತ್ಕೃಷ್ಟವಾಗಿರುತ್ತದೆ. ಇದರಿಂದ ಶ್ರೀಕೃಷ್ಣನನ್ನು ಸಂಪ್ರೀತಗೊಳಿಸುವುದರ ಜೊತೆಗೆ 33 ಕೋಟಿ ದೇವ – ದೇವತೆಯನ್ನು ಆರಾಧಿಸಿದಂತಾಗುತ್ತದೆ.

ಹಲವು ಭಕ್ತರು ಜನ್ಮಾಷ್ಟಮಿ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಜನ್ಮಾಷ್ಟಮಿ ವೇಳೆ ಉಪವಾಸ ಮಾಡುವ ಭಕ್ತರು, ಇದನ್ನು ಅಂತ್ಯಗೊಳಿಸುವುದನ್ನು ಸಹ ಸೂಕ್ತ ಸಮಯದಲ್ಲಿ ಮಾಡಬೇಕು. ಜನ್ಮಸ್ಥಾಮಿಯ ಮರುದಿನ ಸೂರ್ಯೋದಯದ ನಂತರ ಉಪವಾಸವನ್ನು ಅಂತ್ಯಗೊಳಿಸಲಾಗುತ್ತದೆ. ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಮುಗಿದ ನಂತರ ಅಂತ್ಯಗೊಳಿಸಬೇಕು.

ಜನ್ಮಾಷ್ಟಮಿಯ ಹಿಂದಿರುವ ದಂತಕಥೆ ಏನು?

ಎಲ್ಲಾ ಪೌರಾಣಿಕ ಹಬ್ಬಗಳಂತೆ, ಜನ್ಮಾಷ್ಟಮಿಯ ಹಿಂದೆಯೂ ಒಂದು ಕುತೂಹಲಕಾರಿ ಕಥೆ ಇದೆ. ದಂತಕಥೆಯ ಪ್ರಕಾರ, ಮಥುರಾ ಸಾಮ್ರಾಜ್ಯವು ಕಂಸ ರಾಜನ ಆಳ್ವಿಕೆಯಲ್ಲಿ ಸೊರಗಿಹೋಗಿತ್ತು. ಅವನು ಸಾಕಷ್ಟು ಕ್ರೂರನಾಗಿದ್ದು ತನ್ನ ಸಹೋದರಿ ರಾಜಕುಮಾರಿ ದೇವಕಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ದೇವಕಿ ವಾಸುದೇವನನ್ನು ಮದುವೆಯಾದ ಬಳಿಕ ಪ್ರೀತಿ ಬದಲಾಯಿತು. ದೇವಕಿ ವಾಸುದೇವನನ್ನು ಮದುವೆಯಾದ ದಿನ ಪ್ರಬಲವಾದ ಮೋಡವು ಇದ್ದಕ್ಕಿದ್ದಂತೆ ಭವಿಷ್ಯಜ್ಞಾನದೊಂದಿಗೆ ಘರ್ಜಿಸಿ, ಇವರಿಬ್ಬರಿಗೆ ಜನಿಸಿದ ಎಂಟನೇ ಮಗ, ರಾಜ ಕಂಸ ಸಾವಿಗೆ ಕಾರಣ ಎಂದು ಭವಿಷ್ಯ ನುಡಿಯಿತು.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದು ಯಾವ ಮಂತ್ರ ಜಪಿಸಬೇಕು?

ಇದನ್ನು ಕೇಳಿದ ಕಂಸ ಆಕ್ರೋಶಗೊಂಡನು. ದೇವಕಿ ಮತ್ತು ವಾಸುದೇವ ಅವರನ್ನು ತಕ್ಷಣ ಜೈಲಿಗೆ ಹಾಕುವಂತೆ ಆದೇಶಿಸಿದ್ದನು. ಅಲ್ಲದೆ, ದಂಪತಿಗೆ ಜನಿಸಿದ ಮೊದಲ ಆರು ಮಕ್ಕಳನ್ನು ಕೊಂದುಹಾಕಿದನು. ಅದೃಷ್ಟವಶಾತ್, ರಾಜಕುಮಾರಿ ದೇವಕಿಯ ಏಳನೇ ಮಗುವಾಗಿ ಬಲರಾಮ ಹುಟ್ಟಿದನು. ಆತ, ಗರ್ಭದಲ್ಲಿದ್ದಾಗಲೇ, ವೃಂದಾವನದ ರಾಜಕುಮಾರಿ ರೋಹಿಣಿಗೆ ಅತೀಂದ್ರಿಯವಾಗಿ ವರ್ಗಾಯಿಸಲಾಯಿತ್ತು.

ಇನ್ನು, ಎಂಟನೇ ಮಗುವಿನ (ಭಗವಾನ್ ಕೃಷ್ಣ) ಜನನದ ನಂತರ, ವೃಂದಾವನದಲ್ಲಿ ನಂದ ಮತ್ತು ಯಶೋಧರಿಗೆ ಮಗುವನ್ನು ನೀಡಲು ದೇವರುಗಳು ವಾಸುದೇವನಿಗೆ ಮಾರ್ಗದರ್ಶನ ನೀಡಿದರು. ವರ್ಷಗಳ ನಂತರ, ಶ್ರೀಕೃಷ್ಣನು ಕಂಸನನ್ನು ಕೊಂದು ಮಥುರಾ ಸಾಮ್ರಾಜ್ಯವನ್ನು ತನ್ನ ಕ್ರೌರ್ಯದ ಸಂಕೋಲೆಗಳಿಂದ ಮುಕ್ತಿಗೊಳಿಸಿದನು.

ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ.

ವೇ!!ಶ್ರೀ!! ಕುಮಾರಸ್ವಾಮಿ, ಬೆಂಗಳೂರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ