Ramayan: ರಾವಣನ ಶವ ಎಲ್ಲಿದೆ?; ಆತನ ಸಾವಿನ ಕುರಿತ ರಹಸ್ಯವೇನು?

ಸುಮಾರು 10 ಸಾವಿರ ವರ್ಷಗಳ ಹಿಂದೆ ರಾಮನಿಂದ ಕೊಲ್ಲಲ್ಪಟ್ಟ ರಾವಣನ ಶವದ ಬಗ್ಗೆ ಸಾಕಷ್ಟು ಕುತೂಹಲಗಳು ಹಾಗೂ ಕತೆಗಳಿವೆ. ಹಾಗಾದರೆ, ನಿಜಕ್ಕೂ ರಾವಣದ ಮೃತದೇಹ ಇನ್ನೂ ಇದೆಯಾ? ರಾವಣ ಸತ್ತಿದ್ದು ಹೇಗೆ? ಆತನ ಅಂತ್ಯಕ್ರಿಯೆ ಯಾಕೆ ನಡೆಯಲಿಲ್ಲ? ಎಂಬಿತ್ಯಾದಿ ಕುತೂಹಲಕ್ಕೆ ಉತ್ತರ ಇಲ್ಲಿದೆ.

Ramayan: ರಾವಣನ ಶವ ಎಲ್ಲಿದೆ?; ಆತನ ಸಾವಿನ ಕುರಿತ ರಹಸ್ಯವೇನು?
ರಾವಣನ ಶವ ಇರುವ ಬೆಟ್ಟ
Follow us
ಸುಷ್ಮಾ ಚಕ್ರೆ
|

Updated on: Jan 20, 2024 | 2:50 PM

ರಾಮಾಯಣ (Ramayan) ಮಹಾಕಾವ್ಯದ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇದೆ. ರಾಮಾಯಣ ನಿಜಕ್ಕೂ ನಡೆದ ಘಟನೆಗಳ ಕತೆಯಾ? ಅಥವಾ ಅದೊಂದು ಕಾಲ್ಪನಿಕ ಕತೆಯಾ? ಎಂಬ ಗೊಂದಲ ಹಲವರಲ್ಲಿದೆ. ರಾಮಾಯಣಕ್ಕೆ ಸಂಬಂಧಿಸಿದ ರಹಸ್ಯಗಳನ್ನು ತಿಳಿದುಕೊಳ್ಳಲು ಬಯಸುವವರಿಗೆ ಅನೇಕ ಸಾಕ್ಷಿಗಳು ಕೂಡ ಇವೆ. ಇಂದಿಗೂ ಶ್ರೀಲಂಕಾದಲ್ಲಿ (Sri Lanka) ರಾಮಾಯಣ ಮತ್ತು ರಾಮನಿಗೆ (Shri Ram) ಸಂಬಂಧಿಸಿದ ಅನೇಕ ಪುರಾವೆಗಳು ಇವೆ ಎಂದು ನಂಬಲಾಗಿದೆ. ಶ್ರೀಲಂಕಾದಲ್ಲಿರುವ ಹಲವು ಸ್ಥಳಗಳು ಭಗವಾನ್ ಶ್ರೀರಾಮ ಮತ್ತು ರಾವಣನಿಗೆ (Ravan) ಸಂಬಂಧಿಸಿದ ಅನೇಕ ಸತ್ಯಗಳನ್ನು ಹೇಳುತ್ತವೆ.

ರಾಮಾಯಣಕ್ಕೆ ಸಂಬಂಧಿಸಿದ ಸುಮಾರು 50 ಸ್ಥಳಗಳು ಭೂಮಿಯ ಮೇಲಿವೆ ಎಂದು ಸಂಶೋಧನೆಯೊಂದು ಹೇಳಿದೆ. ಈ ಸಂಶೋಧನೆಯ ಪ್ರಕಾರ, ಇಂದಿಗೂ ರಾವಣನ ಮೃತ ದೇಹವು ಶ್ರೀಲಂಕಾದ ಬೆಟ್ಟದಲ್ಲಿ ನಿರ್ಮಿಸಲಾದ ಗುಹೆಯಲ್ಲಿ ಸುರಕ್ಷಿತವಾಗಿದೆ! ಈ ಗುಹೆಯು ಶ್ರೀಲಂಕಾದ ರಾಗ್ಲಾದ ದಟ್ಟವಾದ ಕಾಡಿನ ಮಧ್ಯದಲ್ಲಿದೆ. ಪ್ರಭು ಶ್ರೀರಾಮನಿಂದ ರಾವಣ ಸತ್ತು 10 ಸಾವಿರಕ್ಕೂ ಹೆಚ್ಚು ವರ್ಷಗಳು ಕಳೆದಿವೆ ಎಂದು ಹೇಳಲಾಗುತ್ತದೆ. ಆದರೂ ರಾವಣನ ಶವ ಹೇಗೆ ಇರಲು ಸಾಧ್ಯ? ಎಂಬ ಅಚ್ಚರಿ ನಿಮಗೆ ಮೂಡಬಹುದು. ಅದರ ಹಿಂದೆ ಕೂಡ ಕುತೂಹಲಕಾರಿ ಕತೆಯಿದೆ.

ಇದನ್ನೂ ಓದಿ: Ramayan: ಸೀತೆಯ ಅಗ್ನಿಪರೀಕ್ಷೆ ನಡೆದಿದ್ದು ಎಲ್ಲಿ?

ರಾವಣನ ದೇಹವನ್ನು ಇರಿಸಲಾಗಿರುವ ಗುಹೆಯು ರಾಗ್ಲಾ ಅರಣ್ಯದಲ್ಲಿ ಬೆಟ್ಟದ ಮೇಲಿನ 8 ಸಾವಿರ ಅಡಿ ಎತ್ತರದ ಬಂಡೆಯ ಕೆಳಗಿದೆ. ಇಲ್ಲಿ ರಾವಣನ ದೇಹವನ್ನು ಮಮ್ಮಿ (ಶವವನ್ನು ಸಂರಕ್ಷಿಸಿಡುವ ಈಜಿಪ್ಟಿಯನ್ನರ ಶೈಲಿ) ಮತ್ತು ಶವಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಆ ಶವ ಸಾವಿರಾರು ವರ್ಷ ಕಳೆದರೂ ಕೆಡದಿರುವ ಹಾಗೆ ಅದರ ಮೇಲೆ ವಿಶೇಷ ರೀತಿಯ ಲೇಪನವನ್ನು ಹಚ್ಚಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯವೆಂಬುದರ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ.

ಶ್ರೀಲಂಕಾದ ಅಂತಾರಾಷ್ಟ್ರೀಯ ರಾಮಾಯಣ ಸಂಶೋಧನಾ ಕೇಂದ್ರವು ಈ ಸಂಶೋಧನೆಯನ್ನು ಮಾಡಿದೆ. ಅದರ ಪ್ರಕಾರ, ಈ ಬೆಟ್ಟದಲ್ಲಿರುವ ಬೃಹತ್ ಬಂಡೆಯೊಳಗೆ ರಾವಣನ ದೇಹವನ್ನು 18 ಅಡಿ ಉದ್ದ ಮತ್ತು 5 ಅಡಿ ಅಗಲದ ಶವಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಈ ಶವಪೆಟ್ಟಿಗೆಯ ಕೆಳಗೆ ರಾವಣನ ರಾಜ್ಯದಲ್ಲಿದ್ದ ಅಮೂಲ್ಯ ನಿಧಿ ಕೂಡ ಇದೆ ಎಂದು ಹೇಳಲಾಗುತ್ತದೆ. ಈ ನಿಧಿಯನ್ನು ಭಯಾನಕ ಸರ್ಪಗಳು ಮತ್ತು ಅನೇಕ ಭಯಂಕರ ಪ್ರಾಣಿಗಳು ಕಾಪಾಡುತ್ತಿವೆ ಎಂದು ಸಂಶೋಧನೆ ತಿಳಿಸಿದೆ.

ರಾವಣನ ಶವಕ್ಕೆ ಯಾಕೆ ಸಂಸ್ಕಾರ ಸಿಗಲಿಲ್ಲ?:

ಲಂಕೆಯ ರಾಜ ರಾವಣ ರಾಮನ ಪತ್ನಿ ಸೀತೆಯನ್ನು ಅಪಹರಣ ಮಾಡಿರುತ್ತಾನೆ. ಆಗ ಭಗವಾನ್ ರಾಮನು ರಾವಣನನ್ನು ಕೊಂದು ಆಕೆಯನ್ನು ಕರೆತರುತ್ತಾನೆ. ಆಗ ರಾಮ ಬ್ರಾಹ್ಮಣನಾಗಿದ್ದ ರಾವಣನ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ವಿಭೀಷಣನಿಗೆ ಒಪ್ಪಿಸುತ್ತಾನೆ. ಆದರೆ ವಿಭೀಷಣ ಸಿಂಹಾಸನವೇರುವ ಆತುರದಲ್ಲಿ ರಾವಣನ ಅಂತಿಮ ಸಂಸ್ಕಾರ ಮಾಡದೆ ದೇಹವನ್ನು ಹಾಗೆಯೇ ಅಲ್ಲಿಯೇ ಬಿಟ್ಟು ಹೋಗುತ್ತಾನೆ.

ಇದನ್ನೂ ಓದಿ: Ramayan: ದಂಡಕಾರಣ್ಯವೆಂಬುದು ನಿಜವಾಗಿಯೂ ಇದೆಯಾ? ಅಲ್ಲಿಗೆ ಹೋಗುವುದು ಹೇಗೆ?

ಬಳಿಕ, ನಾಗಕುಲದ ಜನರು ರಾವಣನ ಮೃತದೇಹವನ್ನು ತೆಗೆದುಕೊಂಡು ಹೋದರು. ಅವರು ರಾವಣನ ಸಾವು ಕ್ಷಣಿಕ, ಆತನ ಮತ್ತೆ ಜೀವ ಪಡೆಯುತ್ತಾನೆ ಎಂದು ನಂಬಿದ್ದರು. ಆದರೆ, ರಾವಣ ಮತ್ತೆ ಜೀವ ಪಡೆಯಲಿಲ್ಲ. ಹೀಗಾಗಿ, ಅವರು ರಾವಣನ ದೇಹವನ್ನು ಮಮ್ಮಿಯಾಗಿ ಮಾಡಿ, ಬೃಹತ್ ಬೆಟ್ಟದ ಕೆಳಗೆ ಹೂತಿಟ್ಟರು ಎಂಬ ನಂಬಿಕೆಯಿದೆ.

ರಾವಣನ ಶವ ಇದೆ ಎನ್ನಲಾದ ಶ್ರೀಲಂಕಾದ ರಾಗ್ಲಾ ಅರಣ್ಯದ ನಡುವಿನ ಎತ್ತರದ ಪರ್ವತದಲ್ಲೇ ಆತ ತಪಸ್ಸು ಮಾಡಿದ ಗುಹೆಯೂ ಇದೆ ಎನ್ನಲಾಗುತ್ತದೆ. ಆ ಗುಹೆಯಲ್ಲೇ ರಾವಣನ ಶವವನ್ನು ಇರಿಸಲಾಗಿದೆ ಎಂದು ಸಂಶೋಧನೆ ತಿಳಿಸಿದೆ. ರಾಗ್ಲಾದ ಈ ದಟ್ಟವಾದ ಕಾಡು ಮತ್ತು ಗುಹೆಗೆ ಹೋಗುವುದು ಸುಲಭವಲ್ಲ. ಈ ಗುಹೆಯು ರಾಗ್ಲಾ ಪ್ರದೇಶದಲ್ಲಿ 8000 ಅಡಿ ಎತ್ತರದಲ್ಲಿದೆ. ಆದರೆ, ಸಂಶೋಧನೆ ನಡೆದಿದ್ದರೂ ರಾವಣನ ಶವ ನಿಜವಾಗಿಯೂ ಅಲ್ಲಿಯೇ ಇದೆಯೇ? ಅಥವಾ ಇದು ಜನರ ನಂಬಿಕೆಯೇ? ಎಂಬುದಕ್ಕೆ ಸೂಕ್ತವಾದ ಪುರಾವೆಗಳಿಲ್ಲ.

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ