ಸಂಕಷ್ಟ ಚತುರ್ಥಿಯನ್ನು ಶುಭ ದಿನವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಗಣೇಶನಿಗೆ ಸಮರ್ಪಿತವಾಗಿದ್ದು ಆತ ಪ್ರಥಮ ಪೂಜಿತ ಅದಕ್ಕೂ ಮಿಗಿಲಾಗಿ ಸಂಕಟ ಹರಣ ಮಾಡುವ ದೇವ. ಚತುರ್ಥಿ ದಿನದಂದು ವ್ರತಾಚರಣೆ ಮಾಡುವ ಭಕ್ತರನ್ನು ಎಲ್ಲಾ ರೀತಿಯಿಂದಲೂ ಗಣಪ ಕಾಪಾಡಿಕೊಳ್ಳುತ್ತಾನೆ ಹಾಗಾಗಿ ಜನರು ಗಣಪತಿಯ ಆಶೀರ್ವಾದ ಪಡೆಯಲು ಈ ಶುಭ ದಿನದಂದು ವ್ರತಾಚರಣೆ ಮಾಡಿ ಪೂಜೆ ಮಾಡುತ್ತಾರೆ. ಈ ದಿನ ಗಣೇಶನ ಆರಾಧನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಪ್ರತಿ ತಿಂಗಳ ಕೃಷ್ಣ ಪಕ್ಷದ ನಾಲ್ಕನೇ ದಿನವನ್ನು ಸಂಕಷ್ಟ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ಸಂಕಟಹರ ಚತುರ್ಥಿ, ಸಂಕಷ್ಟಹರ ಚತುರ್ಥಿ ಎಂದೂ ಕರೆಯಲಾಗುತ್ತದೆ. ಇನ್ನು ಈ ಸಂಕಷ್ಟ ಚತುರ್ಥಿ ಮಂಗಳವಾರ ಬಂದರೆ ಅದನ್ನು ಅತಿ ಶ್ರೇಷ್ಠ ಮತ್ತು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣೇಶನ ದೇವಳದಲ್ಲಿ ಈ ದಿನ ಗಣಹೋಮ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.
ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ಜ. 29ರಂದು ಆಚರಣೆ ಮಾಡಲಾಗುತ್ತದೆ. ಚತುರ್ಥಿ ತಿಥಿ ಜ. 29ರಂದು ಬೆಳಿಗ್ಗೆ 06:10ಕ್ಕೆ ಪ್ರಾರಂಭವಾಗುತ್ತದೆ. ಜ. 30ರಂದು ಬೆಳಿಗ್ಗೆ 08:54ಕ್ಕೆ ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ. ಚಂದ್ರೋದಯ ಸಮಯ ಜ. 29ರ ರಾತ್ರಿ 08:39ಕ್ಕೆ.
ಇದನ್ನೂ ಓದಿ: ವಿಭುವನ ಸಂಕಷ್ಟ ಚತುರ್ಥಿ ಯಾವಾಗ? ಸಮಯ, ಆಚರಣೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.
2. ಮನೆಯನ್ನು ಅದರಲ್ಲಿಯೂ ವಿಶೇಷವಾಗಿ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
3. ಗಣೇಶನ ವಿಗ್ರಹವನ್ನು ಇಟ್ಟು, ಅಲಂಕಾರ ಮಾಡಿ ತುಪ್ಪದ ದೀಪ ಹಚ್ಚಿ.
4. ಹಳದಿ ಬಣ್ಣದ ಹೂವು, ದುರ್ವೆ ಮತ್ತು ಬೂಂದಿ ಲಡ್ಡುಗಳನ್ನು ಅರ್ಪಿಸಿ.
5. ಸಂಕಷ್ಟಿ ಕಥೆಯನ್ನು ಪಠಿಸಿ, ದೇವರಿಗೆ ಆರತಿ ಮಾಡಿ.
6. ಆ ದಿನ ಸಂಜೆಯೂ ಗಣೇಶನಿಗೆ ಪೂಜೆ ಮಾಡಬೇಕು.
7. ಉಪವಾಸ ಮಾಡುವವರು ಸಂಜೆ ಪೂಜಾ ವಿಧಿಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಉಪವಾಸವನ್ನು ಮುರಿಯಬೇಕು.
8. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ. ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಮತ್ತು ಮಾಂಸ ಆಹಾರ ಪದಾರ್ಥಗಳನ್ನು ತಿನ್ನಬೇಡಿ.
ಈ ದಿನ ಯಾವ ಮಂತ್ರವನ್ನು ಪಠಣ ಮಾಡಬೇಕು?
-ಓಂ ಗಣಪತಯೇ ನಮಃ
-ವಕ್ರ ತುಂಡಾ ಮಹಾಕಾಯ ಸೂರ್ಯಕೋಟಿ ಸಮಪ್ರಭಾ
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದಾ
-ಓಂ ಶ್ರೀಂ ಗಂ ಸೌಭ್ಯಾಯ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ
-ಓಂ ಸುಮುಖಾಯ ನಮಃ
-ಓಂ ವಕ್ರತುಂಡಾಯ ಹುಂ
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ