AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಗೋವಿಗೆ ಕೈಯಿಂದ ಆಹಾರ ತಿನ್ನಿಸುವುದರಿಂದ ಆಗುವ ದೈವಿಕ ಮತ್ತು ಜ್ಯೋತಿಷ್ಯ ಲಾಭಗಳು

Benefits of Feeding Cows: ಗೋವುಗಳನ್ನು ಭಗವಂತನ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಕೈಯಿಂದ ಗೋವುಗಳಿಗೆ ಆಹಾರ ನೀಡುವುದು ನವಗ್ರಹ ದೋಷ ನಿವಾರಣೆ ಮತ್ತು ಅದೃಷ್ಟ ಹೆಚ್ಚಿಸಲು ಸಹಕಾರಿ. ಬೆಲ್ಲ-ಬಾಳೆಹಣ್ಣಿನಿಂದ ರಾಹು-ಕೇತು, ಹಸಿರು ಹುಲ್ಲಿನಿಂದ ಬುಧನ ಅನುಗ್ರಹ ಪ್ರಾಪ್ತವಾಗುತ್ತದೆ. ಈ ಪುಣ್ಯ ಕಾರ್ಯದಿಂದ ಮಾನಸಿಕ ನೆಮ್ಮದಿ ಹಾಗೂ ಸಮೃದ್ಧಿ ಲಭಿಸುತ್ತದೆ.

Daily Devotional: ಗೋವಿಗೆ ಕೈಯಿಂದ ಆಹಾರ ತಿನ್ನಿಸುವುದರಿಂದ ಆಗುವ ದೈವಿಕ ಮತ್ತು ಜ್ಯೋತಿಷ್ಯ ಲಾಭಗಳು
ಗೋವಿಗೆ ಆಹಾರ ತಿನ್ನಿಸುತ್ತಿರುವ ಸಂದರ್ಭಿಕ ಚಿತ್ರ
ಅಕ್ಷತಾ ವರ್ಕಾಡಿ
| Edited By: |

Updated on:Nov 11, 2025 | 11:59 AM

Share

ಗೋವಿಗೆ ಕೈಯಿಂದ ಆಹಾರ ತಿನ್ನಿಸುವುದರಿಂದ ಆಗುವ ದೈವಿಕ ಮತ್ತು ಜ್ಯೋತಿಷ್ಯ ಲಾಭಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಪಶು, ಪ್ರಾಣಿ, ಪಕ್ಷಿ ಸೇರಿದಂತೆ ಪ್ರಕೃತಿಯ ಎಲ್ಲ ಜೀವಿಗಳು ಭಗವಂತನ ಸ್ವರೂಪಗಳಾಗಿವೆ. ಅದರಲ್ಲಿಯೂ ಅನಾದಿ ಕಾಲದಿಂದಲೂ ಗೋವನ್ನು ಮೂರು ಕೋಟಿ ಅಥವಾ ಮೂವತ್ತಮೂರು ಕೋಟಿ ದೇವತೆಗಳ ಸ್ವರೂಪವೆಂದು ಪೂಜಿಸಲಾಗುತ್ತದೆ. ನಮ್ಮ ಕಣ್ಣೆದುರಿಗಿರುವ ಈ ದೈವೀ ಸ್ವರೂಪ ಮನುಕುಲದ ಒಳಿತಿಗೆ ನೆರವಾಗುತ್ತದೆ. ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ಮಹಾಲಕ್ಷ್ಮಿಯ ಸ್ವರೂಪ ಮತ್ತು ಕಾಮಧೇನುವಿನ ಪ್ರತೀಕವೂ ಆಗಿದೆ.

ನಮ್ಮ ಸ್ವಂತ ಕೈಗಳಿಂದ ಗೋವಿಗೆ ಆಹಾರವನ್ನು ನೀಡಿದಾಗ, ಅದರ ಫಲಗಳು ಅಪಾರ. ಇದು ನಮ್ಮ ಜಾತಕ ಚಕ್ರವನ್ನು ಬದಲಾಯಿಸಿ, ಕಷ್ಟ, ನಷ್ಟ, ಸುಖ, ದುಃಖಗಳ ನಡುವೆ ನೀತಿಯಿಂದ ಮತ್ತು ಧರ್ಮದಿಂದ ಬದುಕುವವರಿಗೆ ಭಗವಂತ ನೀಡಿದ ಒಂದು ಮಹತ್ವದ ಅವಕಾಶ. ಗೋಸೇವೆ ಮಾಡುವುದರಿಂದ ನವಗ್ರಹಗಳ ಕಾಟದಿಂದ ಮುಕ್ತಿ ದೊರೆಯುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಜ್ಯೋತಿಷ್ಯದ ಪ್ರಕಾರ, ಗೋವಿಗೆ ವಿವಿಧ ರೀತಿಯ ಆಹಾರ ನೀಡುವುದರಿಂದ ಸಿಗುವ ಲಾಭಗಳು:

  • ಗೋವಿಗೆ ಗೋಧಿಯ ರೊಟ್ಟಿ ಕೊಟ್ಟರೆ ಸೂರ್ಯನ ಅನುಗ್ರಹ ಪ್ರಾಪ್ತವಾಗಿ, ಆರೋಗ್ಯ ಉತ್ತಮವಾಗಿರುತ್ತದೆ.
  • ಬೆಲ್ಲ ಮತ್ತು ಬಾಳೆಹಣ್ಣನ್ನು ಗೋವಿಗೆ ನೀಡಿದಾಗ ರಾಹು-ಕೇತುಗಳ ಕಾಟ ಕಡಿಮೆಯಾಗುತ್ತದೆ.
  • ಹಸಿರು ಹುಲ್ಲನ್ನು ಕೈಯಿಂದ ಗೋವಿಗೆ ತಿನ್ನಿಸುವುದರಿಂದ ಬುಧನ ಅನುಗ್ರಹ ಲಭಿಸುತ್ತದೆ. ಚಿಕ್ಕ ಮಕ್ಕಳಿಗೆ ಹುಲ್ಲನ್ನು ಮುಟ್ಟಿಸಿ ಗೋವಿಗೆ ನೀಡಿದರೆ, ಅವರಲ್ಲಿ ಜ್ಞಾನ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ. ಓದಿದ್ದನ್ನು ಮರೆಯುವ ಸಮಸ್ಯೆಗೆ ಇದು ಪರಿಹಾರ.
  • ಬಾಳೆಹಣ್ಣುಗಳನ್ನು ನೀಡಿದರೆ ಗುರುವಿನ ಅನುಗ್ರಹ ಪ್ರಾಪ್ತವಾಗುತ್ತದೆ.
  • ಸಿಹಿ ತಿಂಡಿ, ಸಿಹಿ ರೊಟ್ಟಿ ಅಥವಾ ನೀರನ್ನು ಗೋವಿಗೆ ನೀಡಿದರೆ ಚಂದ್ರನ ಅನುಗ್ರಹ ಸಿಗುತ್ತದೆ. ಇದು ಮಾನಸಿಕ ಜರ್ಝರಿತಗೊಂಡವರಿಗೆ ನೆಮ್ಮದಿ ನೀಡುತ್ತದೆ.
  • ನೆನೆಸಿದ ಬೇಳೆಗಳು ಮತ್ತು ಬೆಲ್ಲವನ್ನು ನೀಡಿದಾಗ ಮಂಗಳನ ಅನುಗ್ರಹ ಲಭಿಸಿ, ವಿವಾಹ ಅಥವಾ ಮಕ್ಕಳ ವಿಷಯದಲ್ಲಿ ಶುಭ ಫಲಗಳು ದೊರೆಯುತ್ತವೆ.

ಇದನ್ನೂ ಓದಿ: ಬಡ್ಡಿ ವ್ಯಾಪಾರ ಮಾಡುವುದು ಶುಭವೇ, ಅಶುಭವೇ? ಧರ್ಮಶಾಸ್ತ್ರಗಳು ಹೇಳುವುದೇನು?

ಗೋವಿಗೆ ಕೈಯಿಂದ ಆಹಾರ ನೀಡುವಾಗ ನಮ್ಮ ಕೈಯಲ್ಲಿರುವ ರೇಖೆಗಳು ಕೂಡ ಧನಾತ್ಮಕವಾಗಿ ಬದಲಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಸಾಡೇಸಾತಿ ಶನಿ, ಪಂಚಮ ಶನಿ, ಅರ್ಧಾಷ್ಟಮ ಶನಿಯಂತಹ ಗ್ರಹಗಳ ದೋಷಗಳ ಪ್ರಭಾವವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲಿ ಯಾವ ಯಜ್ಞಕ್ಕೂ ಗೋಗ್ರಾಸವಿಲ್ಲದೆ ಪ್ರಾರಂಭಿಸುತ್ತಿರಲಿಲ್ಲ. ಗೋಗ್ರಾಸವನ್ನು ಇಟ್ಟು ಯಜ್ಞಗಳನ್ನು ಮಾಡುತ್ತಿದ್ದರು.

ನಿಮ್ಮ ಮನೆಯಲ್ಲಿ ಶ್ರೀಕೃಷ್ಣನ ಫೋಟೋ, ಸುತ್ತಲೂ ಗೋವುಗಳಿರುವ ಚಿತ್ರವನ್ನು ಇಟ್ಟುಕೊಂಡರೆ ಸಾಕಷ್ಟು ಶುಭಗಳು ಮತ್ತು ಒಳ್ಳೆಯದಾಗುತ್ತವೆ. ಅಂತಿಮವಾಗಿ, ವಾರಕ್ಕೆ ಒಮ್ಮೆಯಾದರೂ ಗೋವಿಗೆ ಕೈಯಿಂದ ಆಹಾರವನ್ನು ನೀಡಿದರೆ, ಇದು ಯಾವುದೇ ಪೂಜೆ ಅಥವಾ ಯಜ್ಞಗಳನ್ನು ಮಾಡಿದಷ್ಟೇ ಫಲವನ್ನು ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Tue, 11 November 25

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು