ಕಬ್ಬಿಣದ ಹೆಂಚನ್ನು ಶನಿವಾರ ಖರೀದಿಸಬಾರದು ಏಕೆ? ಶುಭ ಫಲಕ್ಕಾಗಿ ಇಡಬೇಕಾದ ಸರಿಯಾದ ದಿಕ್ಕು ಇಲ್ಲಿದೆ!

ಅಡುಗೆಮನೆಯಲ್ಲಿ ಬಳಸುವ ಕಬ್ಬಿಣದ ಹೆಂಚು ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಮನೆಯ ಸಕಾರಾತ್ಮಕ ಶಕ್ತಿ ಹಾಗೂ ನವಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಇದು, ಶುಭ ಪ್ರಭಾವ ಬೀರುತ್ತದೆ. ಹೆಂಚು ಖರೀದಿಸಲು ಮಂಗಳವಾರ ಶುಭ, ಶನಿವಾರ ಅಶುಭ. ಸಂಗ್ರಹಿಸುವಾಗಲೂ ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಕಬ್ಬಿಣದ ಹೆಂಚನ್ನು ಶನಿವಾರ ಖರೀದಿಸಬಾರದು ಏಕೆ? ಶುಭ ಫಲಕ್ಕಾಗಿ ಇಡಬೇಕಾದ ಸರಿಯಾದ ದಿಕ್ಕು ಇಲ್ಲಿದೆ!
ಕಬ್ಬಿಣದ ಹೆಂಚು ಖರೀದಿಸಲು ಶುಭ ದಿನ
Image Credit source: indiamart.com

Updated on: Sep 20, 2026 | 1:27 PM

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಗೃಹೋಪಯೋಗಿ ವಸ್ತುಗಳು ಮನೆಯಲ್ಲಿರುವ ಸಕಾರಾತ್ಮಕ ಶಕ್ತಿ ಹಾಗೂ ನವಗ್ರಹಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮನೆಯ ಪ್ರಮುಖ ಭಾಗವಾದ ಅಡುಗೆಮನೆಯಲ್ಲಿ ಬಳಸುವ ಕಬ್ಬಿಣದ ಹೆಂಚು (ದೋಸೆ ಅಥವಾ ರೊಟ್ಟಿ ಪ್ಯಾನ್) ಖರೀದಿಸುವುದು, ಬಳಸುವುದು ಮತ್ತು ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಸೂಚಿಸಲಾಗಿದೆ. ಅಡುಗೆಮನೆಯಲ್ಲಿ ಈ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಅಭಿವೃದ್ಧಿ ನೆಲೆಸುತ್ತದೆ.

ಶನಿ ಮತ್ತು ಮಂಗಳ ಗ್ರಹಗಳೊಂದಿಗೆ ಕಬ್ಬಿಣದ ಸಂಬಂಧ:

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಕಬ್ಬಿಣದ ಲೋಹವು ಶನಿ ದೇವರಿಗೆ ನೇರವಾಗಿ ಸಂಬಂಧಿಸಿದೆ. ಅದೇ ಸಮಯದಲ್ಲಿ, ಅಗ್ನಿ ಅಂಶ ಮತ್ತು ಕಬ್ಬಿಣದ ಶಕ್ತಿಯು ಮಂಗಳ ಗ್ರಹಕ್ಕೂ ಸಂಬಂಧಿಸಿರುತ್ತದೆ. ಈ ಕಾರಣದಿಂದಾಗಿಯೇ ಕಬ್ಬಿಣದ ಪಾತ್ರೆಗಳನ್ನು ಖರೀದಿಸಲು ಮತ್ತು ಬಳಸಲು ನಿರ್ದಿಷ್ಟ ದಿನಗಳನ್ನು ಸೂಚಿಸಲಾಗಿದೆ. ನಿಯಮಗಳ ಪ್ರಕಾರ ಕಬ್ಬಿಣದ ಹೆಂಚನ್ನು ಬಳಸುವುದು ಶನಿದೇವ ಮತ್ತು ಮಂಗಳ ಗ್ರಹದ ಶುಭ ಪ್ರಭಾವವನ್ನು ಹೆಚ್ಚಿಸಿ, ಮನೆಯಲ್ಲಾಗುವ ಕೌಟುಂಬಿಕ ಕಲಹಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಕಬ್ಬಿಣದ ಹೆಂಚು ಖರೀದಿಸಲು ಶುಭ ದಿನ ಮತ್ತು ನಿಷೇಧಿತ ದಿನ:

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ಮಂಗಳವಾರ ಕಬ್ಬಿಣದ ಹೆಂಚನ್ನು ಖರೀದಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಮಂಗಳವಾರವು ಮಂಗಳ ಗ್ರಹಕ್ಕೆ ಸಂಬಂಧಿಸಿದ್ದು, ಈ ದಿನ ಹೊಸ ಪ್ಯಾನ್ ಅನ್ನು ಮನೆಗೆ ತರುವುದು ಶ್ರೇಷ್ಠ. ಆದರೆ, ಯಾವುದೇ ಕಾರಣಕ್ಕೂ ಶನಿವಾರದಂದು ಕಬ್ಬಿಣದ ಹೆಂಚು ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಶನಿವಾರದಂದು ಕಬ್ಬಿಣವನ್ನು ಮನೆಗೆ ತರುವುದರಿಂದ ಶನಿ ದೋಷ ಉಂಟಾಗಿ, ಆರ್ಥಿಕ ನಷ್ಟ ಹಾಗೂ ಮನೆಯಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಅಡುಗೆಮನೆಯಲ್ಲಿ ಹೆಂಚು ಬಳಸುವ ಮತ್ತು ಇಡುವ ವಾಸ್ತು ನಿಯಮಗಳು:

ಹೊಸ ಹೆಂಚನ್ನು ಮನೆಗೆ ತಂದ ನಂತರ, ಅದನ್ನು ಶನಿವಾರದಂದು ಮೊದಲ ಬಾರಿಗೆ ಬಳಕೆಗೆ ತರುವುದು ಸೂಕ್ತ. ಬಳಸುವ ಮೊದಲು ಅದನ್ನು ಚೆನ್ನಾಗಿ ತೊಳೆದು, ಅದರ ಮೇಲೆ ಸ್ವಲ್ಪ ಹಸಿ ಹಾಲನ್ನು ಹಚ್ಚಿ ನಂತರ ಬಳಸುವುದು ಶುಭ ತರುತ್ತದೆ. ಹೆಂಚನ್ನು ಯಾವಾಗಲೂ ಅಡುಗೆಮನೆಯ ದಕ್ಷಿಣ ಅಥವಾ ಪಶ್ಚಿಮ ಮೂಲೆಯಲ್ಲಿ ಇಡಬೇಕು. ಜೊತೆಗೆ, ಪ್ಯಾನ್ ಅನ್ನು ಎಂದಿಗೂ ತಲೆಕೆಳಗಾಗಿ ಅಥವಾ ನೇತುಹಾಕಿ ಇಡಬಾರದು; ಅದನ್ನು ನೇರವಾಗಿ ಅಥವಾ ಲಂಬವಾಗಿ, ಜನರ ದೃಷ್ಟಿಗೆ ತಕ್ಷಣ ಬೀಳದಂತೆ ಮರೆಮಾಚಿ ಇಡುವುದು ಉತ್ತಮ. ಮುಖ್ಯವಾಗಿ, ಅತಿಯಾಗಿ ಕಾಯ್ದಿರುವ ಬಿಸಿ ಪ್ಯಾನ್ ಮೇಲೆ ತಕ್ಷಣವೇ ನೀರನ್ನು ಸುರಿಯಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us