Personal Finance: ಈ ಮೂರು ಸಮಯದಲ್ಲಿ ಹಣ ಖರ್ಚು ಮಾಡಬೇಡಿ, ಯಾಕೆ ಗೊತ್ತಾ!?
Vastu Tips and spending money: ಹಣವನ್ನು ಖರ್ಚು ಮಾಡುವ ವಿಷಯದಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು.. ಹಣವನ್ನು ಯಾವಾಗ ಖರ್ಚು ಮಾಡಬೇಕು? ಯಾವಾಗ ಖರ್ಚು ಮಾಡಬಾರದು ಎಂದು ಈಗ ತಿಳಿಯೋಣ. ಹೀಗೆ ಮಾಡುವುದರಿಂದ ನಿಮಗೆ ಲಾಭವೇ ಹೊರತು ನಷ್ಟವಾಗುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದನ್ನು ಈಗ ನೋಡೋಣ.
ಹಣದ ವಿಚಾರದಲ್ಲಿ ನಾವು ಬಹಳ ಜಾಗರೂಕರಾಗಿರುತ್ತೇವೆ. ಅದರಲ್ಲಿಯೂ ಖರ್ಚಿನ ವಿಷಯ ಬಂದಾಗ ಎಚ್ಚರಿಕೆಯಿಂದ ಖರ್ಚು ಮಾಡುತ್ತೇವೆ. ಆದರೆ ಕೆಲವರು ತಮಗೆ ಇಷ್ಟ ಬಂದಂತೆ ಹಣ ಖರ್ಚು ಮಾಡುತ್ತಾರೆ. ಹಣದ ಮೌಲ್ಯ/ ಬೆಲೆಯೇ ಗೊತ್ತಿರುವುದಿಲ್ಲ ಅಂತಹವರಿಗೆ. ಹೀಗೆ ಮಾಡುವುದರಿಂದ ಮುಂದೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ವಾಸ್ತು ಶಾಸ್ತ್ರವನ್ನು ಪಾಲಿಸಿದರೆ ಆರ್ಥಿಕವಾಗಿ ಸದೃಢರಾಗುತ್ತೀರಿ. ವಾಸ್ತು ಶಾಸ್ತ್ರವು ಕೇವಲ ಮನೆ ನಿರ್ಮಾಣದಲ್ಲಿ ಮಾತ್ರವಲ್ಲ.. ನಾವು ದಿನನಿತ್ಯ ಮಾಡುವ ಕೆಲವು ಪ್ರಮುಖ ಕೆಲಸಗಳಲ್ಲಿಯೂ ಕೆಲವೊಂದು ನಿಯಮ ಪಾಲಿಸಲು ಸೂಚಿಸುತ್ತದೆ. ಅದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹಣವನ್ನು ಖರ್ಚು ಮಾಡುವ ವಿಷಯದಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು.. ಹಣವನ್ನು ಯಾವಾಗ ಖರ್ಚು ಮಾಡಬೇಕು? ಯಾವಾಗ ಖರ್ಚು ಮಾಡಬಾರದು ಎಂದು ಈಗ ತಿಳಿಯೋಣ. ಹೀಗೆ ಮಾಡುವುದರಿಂದ ನಿಮಗೆ ಲಾಭವೇ ಹೊರತು ನಷ್ಟವಾಗುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದನ್ನು ಈಗ ನೋಡೋಣ.
ಇಷ್ಟಾನುಸಾರ ಯಾವಾಗ ಅಂದ್ರೆ ಆವಾಗ ಖರ್ಚು ಮಾಡಬಾರದು: ಹೆಚ್ಚಿನ ಜನರು ಸಮಯ ಸಿಕ್ಕಿದರೆ ಸಾಕು, ಅವಕಾಶ ಸಿಕ್ಕಿದರೆ ಸಾಕು, ಸಾಧ್ಯವಾದಾಗಲೆಲ್ಲಾ, ಇಷ್ಟಾನುಸಾರ ಯಾವಾಗ ಅಂದ್ರೆ ಆವಾಗ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಹಾಗೆಲ್ಲಾ ಹಣವನ್ನು ಖರ್ಚು ಮಾಡಬಾರದು. ವಾಸ್ತು ಶಾಸ್ತ್ರ ಕೂಡ ಇದನ್ನೇ ಹೇಳುತ್ತದೆ. ಹಣ ಖರ್ಚು ಮಾಡಲು ಸಮಯವಿದೆ ಎಂದು ವಾಸ್ತು ಹೇಳುತ್ತದೆ.
ಬ್ರಹ್ಮ ಮುಹೂರ್ತದಲ್ಲಿ.. ಬ್ರಹ್ಮ ಮುಹೂರ್ತದಲ್ಲಿ ಅನೇಕರಿಗೆ ಗೊತ್ತಿಲ್ಲದೆ ಹಣ ಖರ್ಚು ಮಾಡುತ್ತಾರೆ. ಹಾಗೆಲ್ಲಾ ಮಾಡಬೇಡಿ. ಬ್ರಹ್ಮ ಮುಹೂರ್ತ ಎಂದರೆ ಸೂರ್ಯೋದಯಕ್ಕೆ ಒಂದೂವರೆ ಗಂಟೆಯ ಮುಹೂರ್ತ. ಈ ಸಮಯದಲ್ಲಿ ಹಣವನ್ನು ಖರ್ಚು ಮಾಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಸೂರ್ಯೋದಯದಲ್ಲಿ.. ಹಾಗೆಯೇ ಸೂರ್ಯೋದಯದ ಸಮಯದಲ್ಲಿ ಹಣವನ್ನು ವ್ಯರ್ಥ ಮಾಡಬಾರದು. ಆವಶ್ಯಕತೆಗಳಿಗೆ ಮಾತ್ರ ಯೋಚಿಸಿ ಖರ್ಚು ಮಾಡುವಂತೆ ವಾಸ್ತು ಶಾಸ್ತ್ರ ಹೇಳುತ್ತದೆ.
ಸೂರ್ಯಾಸ್ತದ ಸಮಯದಲ್ಲಿ… ಸೂರ್ಯಾಸ್ತದ ಸಮಯದಲ್ಲೂ ಹೆಚ್ಚು ಹಣವನ್ನು ಖರ್ಚು ಮಾಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಏಕೆಂದರೆ ಈ ಸಮಯದಲ್ಲಿ ಹಣದ ಶಕ್ತಿ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ನೀವು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಮೂರು ಸಮಯದಲ್ಲಿ ಹಣವನ್ನು ಖರ್ಚು ಮಾಡುವಾಗ ಯೋಚಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗೆ ಮಾಡುವುದರಿಂದ ಹಣ ಕೈಯಲ್ಲಿ ಉಳಿಯುತ್ತದೆ. ಹಣಕಾಸಿನ ತೊಂದರೆಗಳು ದೂರವಾಗುತ್ತವೆ. ಹಣಕಾಸಿನ ಸಮಸ್ಯೆಗಳೂ ಕಡಿಮೆಯಾಗುತ್ತವೆ.
ಮತ್ತಷ್ಟು ಪ್ರೀಮಿಯಂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ