ಕೌರವರ ನಾಶದ ಸಂಕಲ್ಪ ಶಕುನಿಯಿಂದ ಮಾಡಲ್ಪಟ್ಟಿತ್ತೇ? ಏನೀ ಶಕುನಿ ಸಂಕಲ್ಪ?

ಮಹಾಭಾರತವೆನ್ನುವುದು ಅತ್ಯಂತ ತಾತ್ತ್ವಿಕವಾದ ಇತಿಹಾಸ. ಇಲ್ಲಿ ಜ್ಞಾನ- ವಿಜ್ಞಾನ , ತಂತ್ರ- ಪ್ರತಿತಂತ್ರಗಳು ಅದ್ಭುತವೆಂಬಂತೆ ನಡೆದಿದೆ. ಕೆಲವೊಂದು ಊಹಿಸಲೂ ಸಾಧ್ಯವಿಲ್ಲವೆಂಬಂತೆ ನಡೆದುಬಿಟ್ಟಿದೆ. ಮಹಾ ಎಂದರೆ ಮಹತ್ತರವಾದದ್ದು ಎಂದರ್ಥ. ಭಾ ಎಂದರೆ ಜ್ಞಾನವೆಂದರ್ಥ. ರತ ಎಂದರೆ ಆಸಕ್ತನಾದವನು/ಳು ಎಂದರ್ಥ.

ಕೌರವರ ನಾಶದ ಸಂಕಲ್ಪ ಶಕುನಿಯಿಂದ ಮಾಡಲ್ಪಟ್ಟಿತ್ತೇ? ಏನೀ ಶಕುನಿ ಸಂಕಲ್ಪ?
ಸಾಂದರ್ಭಿಕ ಚಿತ್ರ Image Credit source: google image
Follow us
ಅಕ್ಷಯ್​ ಪಲ್ಲಮಜಲು​​
|

Updated on:Jan 21, 2023 | 11:30 AM

ಮಹಾಭಾರತವೆನ್ನುವುದು (mahabharata) ಅತ್ಯಂತ ತಾತ್ತ್ವಿಕವಾದ ಇತಿಹಾಸ. ಇಲ್ಲಿ ಜ್ಞಾನ- ವಿಜ್ಞಾನ , ತಂತ್ರ- ಪ್ರತಿತಂತ್ರಗಳು ಅದ್ಭುತವೆಂಬಂತೆ ನಡೆದಿದೆ. ಕೆಲವೊಂದು ಊಹಿಸಲೂ ಸಾಧ್ಯವಿಲ್ಲವೆಂಬಂತೆ ನಡೆದುಬಿಟ್ಟಿದೆ. ಮಹಾ ಎಂದರೆ ಮಹತ್ತರವಾದದ್ದು ಎಂದರ್ಥ. ಭಾ ಎಂದರೆ ಜ್ಞಾನವೆಂದರ್ಥ. ರತ ಎಂದರೆ ಆಸಕ್ತನಾದವನು/ಳು ಎಂದರ್ಥ. ತಾತ್ಪರ್ಯವೆಂದರೆ ಮಹತ್ತರವಾದ ಜ್ಞಾನದಲ್ಲಿ ಆಸಕ್ತರಾಗುವುದು ಅಥವಾ ಆಗಿ ಎಂಬ ಭಾವವನ್ನು ಈ ಮಹಾಭಾರತ ಎಂಬ ಹೆಸರು ನೀಡುತ್ತದೆ. ಮಹಾಭಾರವೆಂದಾಕ್ಷಣ ಕಣ್ಣಮುಂದೆ ಬರುವುದು ಪಾಂಡವ – ಕೌರವರ ಯುದ್ಧ. ಶ್ರೀಕ್ರಷ್ಣನ ಜಾಣ್ಮೆ, ಶಕುನಿಯ ತಂತ್ರ . ಹಾಗೇ ಇನ್ನೂ ಕೆಲವು ಅಂಶಗಳು. ಆದರೆ ಕಂಡೂ ಕಾಣದಂತಾದ ಕೆಲವು ಮಾರ್ಮಿಕ ಘಟನೆಗಳು ಮಹಾಭಾರತದಲ್ಲಿ ನಡೆದಿದೆ. ಅದರಲ್ಲಿ ಒಂದು ಈ ಶಕುನಿಯ ಸಂಕಲ್ಪ. ಏನೀ ಸಂಕಲ್ಪ? ಎಂದು ಹೇಳುವುದಾದರೆ ಅದುವೇ ಕುರುವಂಶದ ಅಥವಾ ಕೌರವರ ನಾಶ. ಈಗ ನಿಮಗೆ ಗೊಂದಲವೆನಿಸಬಹುದು ಸೋದರಮಾವನಾದ ಶಕುನಿಯಿಂದಲೇ ಈ ಸಂಕಲ್ಪವೇ ಎಂದು. ವಿಷಯ ಕಹಿ ಆದರೂ ಹೌದು ಎನ್ನಲೇಬೇಕು. ಅದಕ್ಕೆ ಕಾರಣ ಹೀಗಿದೆ ನೋಡಿ –

ಗಾಂಧಾರದ ರಾಜ ಸುಬಲ. ಅವನಿಗೆ ನೂರು ಜನ ಗಂಡು ಮಕ್ಕಳು. ಆಮೇಲೆ ಗಾಂಧಾರಿಯೆಂಬ ಹೆಣ್ಣುಮಗಳು. ಈ ಗಾಂಧಾರಿಯು ಅತ್ಯಂತ ಸುಂದರಿ ಮತ್ತು ಉತ್ತಮ ಪಾಂಡಿತ್ಯವುಳ್ಳವಳಾಗಿದ್ದಳು. ಇವಳ ಕಿರಿಯಣ್ಣ ಶಕುನಿಗೆ ಇವಳ ಮೇಲೆ ಅಪಾರವಾದ ಪ್ರೀತಿ. ಇಷ್ಟಾದರೂ ಗಾಂಧಾರಿಗೆ ಕಂಕಣ ಬಲ ಕೂಡಿ ಬರುವುದೇ ಇಲ್ಲ. ಕಾರಣವೇನೆಂದರೆ ಇವಳಿಗೆ ಕುಜದೋಷವಿತ್ತು. ಕುಜದೋಷವಿದ್ದರೆ ವಿಧವೆಯಾಗುವ ಸಂಭವವಿರುತ್ತದೆ.ಇದರ ಕುರಿತಾಗಿ ಮಹಾರಾಜ ಸುಬಲನು ಜ್ಯೌತಿಷಿಗಳ ಸಲಹೆಯಂತೆ ಒಂದು ಆಡಿನೊಂದಿಗೆ ಅವಳ ವಿಹಾವವನ್ನು ಮಾಡಿ ನಂತರ ಆ ಆಡನ್ನು ಸಂಹರಿಸುತ್ತಾನೆ. ಇದರಿಂದ ವಿಧವೆಯಾದ ಗಾಂಧಾರಿಯ ವಿಚಾರವನ್ನು ಯಾರಿಗೂ ತಿಳಿಯಂದಂತೆ ಗೌಪ್ಯವಾಗಿ ಇಡುತ್ತಾನೆ ಮಹಾರಾಜ. ಕಾಲಾ ನಂತರ ಅಂಬಿಕೆಯು ತನ್ನ ಮಗನಾದ ಧೃತರಾಷ್ಟ್ರನಿಗೆ ಗಾಂಧಾರಿಯನ್ನು ತಂದುಕೊಳ್ಳುವ ಇಚ್ಛೆಯನ್ನು ಭೀಷ್ಮನಿಗೆ ನಿವೇದಿಸುತ್ತಾಳೆ. ಭೀಷ್ಮನ ಪರಾಕ್ರಮಕ್ಕೆ ಬೆದರಿ ಕುರುಡನಾದರೂ ಧೃತರಾಷ್ಟ್ರನಿಗೆ ತನ್ನ ಮಗಳನ್ನು ಕೊಡಲು ಒಪ್ಪುತ್ತಾನೆ. ವಿವಾಹೂ ನಡೆಯುತ್ತದೆ.

ವಿವಾಹೋತ್ತರದಲ್ಲಿ ಗಾಂಧಾರಿಯ ವಿಧವಾ ವಿಷಯವು ಧೃತರಾಷ್ಟ್ರನಿಗೆ ತಿಳಿಯುತ್ತದೆ. ಇದರಿಂದ ಕುಪಿತನಾದ ಅವನು ಗಾಂಧಾರಿಗೆ ಮನಬಂದಂತೆ ನಿಂದಿಸುತ್ತಾನೆ. ಹಾಗೆಯೇ ಅವಳ ನೂರು ಜನ ಸಹೋದರರನ್ನು ಕಾರಾಗೃಹಕ್ಕೆ ಹಾಕಿಸುತ್ತಾನೆ ಅಲ್ಲದೇ ಅವರಿಗೆ ಒಬ್ಬರಿಗಾಗುವಷ್ಟು ಮಾತ್ರ ಆಹಾರವನ್ನು ನೀಡಲು ಆದೇಶ ಮಾಡುತ್ತಾನೆ. ರಾಜಾ ಸುಬಲನ ಸೂಚನೆಯಂತೆ ಅವರೆಲ್ಲಾ ಒಟ್ಟಾಗಿ ಸೇರಿ ಅವರಲ್ಲಿ ಅತ್ಯಂತ ಚಾಣಾಕ್ಷ ಮತಿಯುಳ್ಳ ಶಕುನಿಗೆ ಈ ಆಹಾರವನ್ನು ನೀಡುತ್ತಾರೆ. ಮತ್ತು ನಾವು ಯಾವ ರೀತಿ ಸಾಯುತ್ತಿದ್ದೇವೋ ಅದೇ ರೀತಿ ಧೃತರಾಷ್ಟ್ರನ ಮಕ್ಕಳೂ ಸಾಯಬೇಕು ಎಂದು ಶಕುನಿಗೆ ಬೋಧಿಸುತ್ತಾರೆ.

ಇದನ್ನು ಓದಿ:Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?

ತನ್ನ ಸಹೋದರರ ಜೀವನ್ಮರಣ ಹೋರಾಟವನು ನೋಡುತ್ತಾ ಬಂದ ಶಕುನಿಯು ಅಚಲವಾದ ಸಂಕಲ್ಪವನ್ನು ಮಾಡಿಯೇ ಬಿಡುತ್ತಾನೆ. ಅದೇ ಕೌರವ ನಾಶ ಮಾಡುವೇ ಎಂದು. ಅದಕ್ಕಾಗಿ ಸುಬಲನು ತನ್ನ ದೇಹದ ಮೂಳೆಗಳನ್ನು ನೀನು ಪಗಡೆಯಾಗಿ ಬಳಸಿಕೊ. ಅದರಲ್ಲಿ ನನ್ನ ಆತ್ಮಶಕ್ತಿಯಿರುತ್ತದೆ. ನೀನು ಬಯಸಿದಂತೆ ಅದು ಕಾರ್ಯಗಳಲ್ಲಿ ನಿನಗೆ ಸಹಕರಿಸುತ್ತದೆ ಎಂದು ಹೇಳಿ ಪ್ರಾಣತ್ಯಾಗ ಮಾಡುತ್ತಾನೆ. ಈ ರೀತಿಯ ಮಹತ್ತರವಾದ ಸಂಕಲ್ಪದೊಂದಿಗೆ ಶಕುನಿಯು ತನ್ನ ಸೂಕ್ಷ್ಮತನದಿಂದ ಧುರ್ಯೋಧನನ ಆಪ್ತನಾಗಿ ಕಾರ್ಯ ಆರಂಭಿಸುತ್ತಾನೆ. ಧುರ್ಯೋಧನನಿಗೆ ಪಾಂಡವರೊಂದಿಗೆ ಮತ್ತು ತನ್ನ ತಂದೆಯಾದ ಧೃತರಾಷ್ಟ್ರನ ಮೇಲೂ ದ್ವೇಷ ಬೆಳೆಯುವಂತೆ ಮಾಡುತ್ತಾನೆ ಈ ಶಕುನಿ.

ಈ ರೀತಿಯಾಗಿ ತನ್ನ ನೂರು ಸಹೋದರರ ಮತ್ತು ತನ್ನ ತಂದೆಯ ಸಾವಿಗೆ ಕಾರಣನಾದ ಧೃತರಾಷ್ಟ್ರನ ಮೇಲೆ ಅವನ ನೂರು ಮಕ್ಕಳನ್ನು ನಾಶ ಮಾಡಿಸುವುದರ ಮೂಲಕ ಸೇಡುತೀರಿಸಿಕೊಳ್ಳುತ್ತಾನೆ ಶಕುನಿ. ಪಗಡೆಯಾಟದ ರೂವಾರಿ ಶಕುನಿ, ದ್ರೌಪದಿ ವಸ್ತ್ರಾಪಹರಣದ ರೂವಾರಿ ಶಕುನಿ, ದ್ರೋಣ, ಭೀಷ್ಮರ ಕೆಣಕಿ ಅವರ ಮರಣಕ್ಕೆ ಪರೋಕ್ಷ ಕಾರಣ ಶಕುನಿ, ಇವೆಲ್ಲದರಿಂದ ಕೌರವರ ನಾಶಕ್ಕೂ ಕಾರಣ ಶಕುನಿಯೇ ಎಂದರೆ ಅಲ್ಲ. ಶಕುನಿಯಲ್ಲಿದ್ದ ಅಂತರಂಗ ನೋವು; ಅದರಿಂದ ಹತ್ತಿಕೊಂಡ ಸೇಡಿನಬೆಂಕಿ ಇಡೀ ಕುರುವಂಶವನ್ನೇ ಸುಟ್ಟಿತು ಅಲ್ಲವೇ?

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Sat, 21 January 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್