Pradakshina: ಪ್ರದಕ್ಷಿಣೆ ಎಂದರೇನು ? ಯಾವ ದೇವತೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?

ಕಷ್ಟ ಬಂದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ದೇವಾಲಯಕ್ಕೆ ಹೋಗುವುದು ಆಸ್ತಿಕರ ಹವ್ಯಾಸ. ದೇವಾಲಯಕ್ಕೆ ಹೋಗುವುದರಿಂದ ಮನಸ್ಸಿಗೆ ಏನೋ ನೆಮ್ಮದಿ ಪ್ರಾಪ್ತವಾಗುತ್ತದೆ. ನಮ್ಮ ಭಾವನೆ ತಕ್ಕುದಾಗಿ ದೇವಾಲಯಕ್ಕೆ ಹೋಗುವುದು ರೂಢಿ. ದೇವರ ಆಷ್ಟಾಂಗ ಸೇವೆಯಲ್ಲಿ ಬಹುಮುಖ್ಯವಾದದ್ದು ಪ್ರದಕ್ಷಿಣೆ.

Pradakshina: ಪ್ರದಕ್ಷಿಣೆ ಎಂದರೇನು ? ಯಾವ ದೇವತೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 21, 2023 | 10:25 AM

ಕಷ್ಟ ಬಂದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ದೇವಾಲಯಕ್ಕೆ ಹೋಗುವುದು ಆಸ್ತಿಕರ ಹವ್ಯಾಸ. ದೇವಾಲಯಕ್ಕೆ ಹೋಗುವುದರಿಂದ ಮನಸ್ಸಿಗೆ ಏನೋ ನೆಮ್ಮದಿ ಪ್ರಾಪ್ತವಾಗುತ್ತದೆ. ನಮ್ಮ ಭಾವನೆ ತಕ್ಕುದಾಗಿ ದೇವಾಲಯಕ್ಕೆ ಹೋಗುವುದು ರೂಢಿ. ದೇವರ ಆಷ್ಟಾಂಗ ಸೇವೆಯಲ್ಲಿ ಬಹುಮುಖ್ಯವಾದದ್ದು ಪ್ರದಕ್ಷಿಣೆ. ಆದರೆ ನಾವುಗಳು ಅತ್ತಿತ್ತ ನೋಡುತ್ತಾ ಅಥವಾ ಮೊಬೈಲನ್ನು ಬಳಸುತ್ತಾ ಹಾಗೆಯೇ ಅನಪೇಕ್ಷಿತ ಮಾತುಗಳನ್ನಾಡುತ್ತಾ, ಅವರಿವರನ್ನ ದೂರುತ್ತಾ ದೇವಾಲಯದ / ದೇವರ ಸುತ್ತು (ಪ್ರದಕ್ಷಿಣೆ) ತಿರುಗುತ್ತೇವೆ. ಆಗ ನಾವು ಅಲ್ಲಿರುವ ಬಲಿ ಕಲ್ಲನ್ನು, ಬಾವಿಯನ್ನು, ತುಳಸಿ ಗಿಡವನ್ನು ಗಮನಿಸುವುದೇ ಇಲ್ಲ. ಕೆಲವರಂತು ಹೊರಗಿಟ್ಟ ಚಪ್ಪಲಿಯ ಕುರಿತಾಗಿ, ಬಸ್ಸು ವಾಹನದ ಕುರಿತಾಗಿ, ಸಮಯದ ಕುರಿತಾಗಿ ಯೋಚಿಸುತ್ತಾ ಸರ ಸರನೆ ತಿರುಗುತ್ತಾರೆ. ಆದರೆ ಇದೆಲ್ಲಾ ಕೇವಲ ಡಂಬಾಚಾರವಾಗುತ್ತದೆ. ನಿಜವಾದ ಪ್ರದಕ್ಷಿಣೆ ಎಂದರೆ ಹೀಗಿದೆ ನೋಡಿ.

ದಕ್ಷಿಣಾವರ್ತೇನ ದೇವಾದಿಕನುದ್ದಿಷ್ಯ ಭ್ರಮಣಂ ಪ್ರದಕ್ಷಿಣಮ್ ಎಂದು ಹೇಳುತ್ತದೆ ಶಾಸ್ತ್ರ. ಅಂದರೆ ದೇವರ / ಗುರಗಳ ಬಲಭಾಗದಿಂದ ಆರಂಭಿಸಿ ಅವರ ಅನುಗ್ರಹಕ್ಕಾಗಿ ಸುತ್ತುವುದು ಏನಿದೆ ಅದುವೇ ಪ್ರದಕ್ಷಿಣೆ.

ಅಂತಹ ಪ್ರದಕ್ಷಿಣೆ ಹೇಗೆ ಹಾಕಬೇಕು ?

ಆಸನ್ನ ಪ್ರಸವಾ ನಾರೀ ಜಲಪೂರ್ಣಂ ಯಥಾ ಘಟಮ್ |

ಉದ್ವಹಂತೀ ಶನೈಃ ಯಾತಿ ತಥಾ ಕುರ್ಯಾತ್ ಪ್ರದಕ್ಷಿಣಮ್ ||

ಪ್ರಸವಕಾಲ ಸಮೀಪಿಸಿದ ಸ್ತ್ರೀಯು ನೀರು ತುಂಬಿದ ಬಿಂದಿಗೆಯನ್ನು ಯಾವ ರೀತಿ ನಿಧಾನವಾಗಿ ಒಯ್ಯುವಳೋ ಅದೇ ಪ್ರಕಾರವಾಗಿ ಪ್ರದಕ್ಷಿಣೆಯನ್ನು ಮಾಡಬೇಕು ಎಂಬುದು ಶಾಸ್ತ್ರ ನಿರ್ಣಯ.

ಪದಂ ಪದಾಂತರೇ ನ್ಯಸ್ಯ ಕರೌ ಚಲನ ವರ್ಜಿತೌ |

ಸ್ತುತಿಃ ವಾಚಿ ಹೃದಿ ಧ್ಯಾನಂ ಚತುರಂಗಂ ಪ್ರದಕ್ಷಿಣಮ್ ||

ಒಂದು ಹೆಜ್ಜೆಯ ಮೇಲೆ ಮತ್ತೊಂದು ಹೆಜ್ಜೆಯೋ ಎಂಬ ರೀತಿಯಲ್ಲಿ ಪಾದವನ್ನಿಡಬೇಕು. ಕೈಯು ಮುಗಿದಿರಬೇಕು ಅಥವಾ ಯಾವುದೇ ಚಲನವಿಲ್ಲದ ರೀತಿಯಲ್ಲಿರಬೇಕು. ಬಾಯಿಯಲ್ಲಿ ಭಗವಂತನ ನಾಮಸ್ಮರಣೆ ನಡೆಯುತ್ತಿರಬೇಕು. ಹೃದಯದಲ್ಲಿ ಭಗವಂತನ ಸ್ವರೂಪ ಧ್ಯಾನವಿರಬೇಕು. ಈ ರೀತಿ ಮಾಡಿದಲ್ಲಿ ಅದು ನಿಜವಾಗ ಚತುರಂಗ ಪ್ರದಕ್ಷಿಣೆ ಎನಿಸುವುದು ಮತ್ತು ನಿಜವಾದ ಪ್ರದಕ್ಷಿಣೆಯಾಗುವುದು.

ಯಾವ ದೇವತೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ?

ಏಕಂ ದೇವ್ಯಾಂ ರವೌ ಸಪ್ತ ತ್ರೀಣಿ ಕುರ್ಯಾತ್ ವಿನಾಯಕೇ |

ಚತ್ವಾರಿ ಕೇಶವೇ ಕುರ್ಯಾತ್ ಶಿವೇಚ ಅರ್ಧ ಪ್ರದಕ್ಷಿಣಮ್ ||

ಇದನ್ನೂ ಓದಿ:Spiritual: ಆಶೌಚಗಳಲ್ಲಿ ದೇವತಾಕಾರ್ಯಗಳನ್ನು ಮಾಡದಿರಲು ಏನು ಕಾರಣ?

ದುರ್ಗೆಗೆ ಒಂದು ಪ್ರದಕ್ಷಿಣೆ. ಸೂರ್ಯನಿಗೆ ಏಳು ಪ್ರದಕ್ಷಿಣೆ. ಗಣಪತಿಗೆ ಮೂರು ಪ್ರದಕ್ಷಿಣೆ. ವಿಷ್ಣುವಿಗೆ ನಾಲ್ಕು ಪ್ರದಕ್ಷಿಣೆ. ಶಿವನಿಗೆ ಅರ್ಧ ಪ್ರದಕ್ಷಿಣೆ. ಶಿವನಿಗೆ ಅರ್ಧ ಪ್ರದಕ್ಷಿಣೆಯೆಂದರೆ ಶಿವನಿಗೆ ಅಭಿಷೇಕ ಮಾಡಿದ ನೀರು ಬರುವ ಸೂತ್ರವೇನಿದೆ (ಸೋಮಸೂತ್ರ) ಅದನ್ನು ದಾಟಬಾರದು ಎಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಶಿವನ ಪ್ರದಕ್ಷಿಣೆ ಹಾಕುವಾಗ ದಕ್ಷಿಣದಿಂದ ಆರಂಭಿಸಿ ಉತ್ತರದಲ್ಲಿರುವ ಸೋಮ ಸೂತ್ರದ ಬಳಿಯಲ್ಲಿ ಪುನಃ ತಿರುಗಿ ದೇವರ ಮುಂಭಾಗವಾಗಿ ಹೋಗಿ ಸೋಮ ಸೂತ್ರವನ್ನು ಸ್ಪರ್ಶಿಸಿ ಪುನಃ ಬರಬೇಕು ಇದನ್ನು ಅರ್ಧ ಪ್ರದಕ್ಷಿಣೆ ಎನ್ನುತ್ತಾರೆ. ನವಗ್ರಹರಿಗೆ ಒಂಭತ್ತು, ಆಂಜನೇಯನಿಗೆ ನಾಲ್ಕು, ಗುರುವಿಗೆ ಆರು ಈ ರೀತಿಯಾಗಿ ಪ್ರದಕ್ಷಿಣೆಯನ್ನು ಶ್ರದ್ಧೆಯಿಂದ ಮಾಡುವುದು.

ಯಾವುದೇ ಭಗವತ್ಕಾರ್ಯವಿರಲಿ ಅದರಲ್ಲಿ ತರ್ಕವಿಲ್ಲದೇ ಭಕ್ತಿಯಿಂದ ಒಂದೇ ಭಾವದಲ್ಲಿ ಸೇವೆ ಮಾಡಿದರೆ ಪೂರ್ಣಫಲ ಪ್ರಾಪ್ತವಾಗುವುದು. ಇಲ್ಲದಿದ್ದಲ್ಲಿ ಭಾವಕ್ಕೆ ತಕ್ಕ ಫಲ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

Published On - 10:24 am, Tue, 21 February 23

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು