Panchmukhi Avatar: ಚಿರಂಜೀವಿ ಆಂಜನೇಯನಿಗೆ ಪಂಚಮುಖಿ ಅವತಾರವನ್ನು ತಾಳುವ ಸಂದರ್ಭ ಏಕೆ ಬರುತ್ತದೆ? ಆ ಮುಖಗಳ ಸಂಕೇತವೇನು?

ಪಂಚಮುಖಿ ಹನುಮಂತನ ವಿಗ್ರಹಗಳು ತುಂಬಾ ಅಪರೂಪ. ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ಅನೇಕ ತೊಂದರೆಗಳು ನಿವಾರಣೆಯಾಗುವುದು. ದುಷ್ಟಶಕ್ತಿಗಳು ಹತ್ತಿರವೂ ಸುಳಿಯುವುದಿಲ್ಲ. ನಾಲ್ಕನೆಯದು ವರಹಾ ರೂಪ - ಇದು ಉತ್ತರದಿಕ್ಕಿನಲ್ಲಿದೆ. ಧನ ಸಂಪತ್ತು, ಸುಖ- ಸಂತೋಷ, ನೆಮ್ಮದಿ ಕೊಡುವುದರ ಜೊತೆಗೆ ಗ್ರಹಗಳ ಭಾದೆ ನಿವಾರಣೆ ಮಾಡುತ್ತಾನೆ.

Panchmukhi Avatar: ಚಿರಂಜೀವಿ ಆಂಜನೇಯನಿಗೆ ಪಂಚಮುಖಿ ಅವತಾರವನ್ನು ತಾಳುವ ಸಂದರ್ಭ ಏಕೆ ಬರುತ್ತದೆ? ಆ ಮುಖಗಳ ಸಂಕೇತವೇನು?
ಆಂಜನೇಯನಿಗೆ ಪಂಚಮುಖಿ ಅವತಾರವನ್ನು ತಾಳುವ ಸಂದರ್ಭ ಏಕೆ ಬರುತ್ತದೆ?
Follow us
ಸಾಧು ಶ್ರೀನಾಥ್​
|

Updated on: Jul 20, 2024 | 6:06 AM

Significance of Panchmukhi avatar: ರಾಮಾಯಣದಲ್ಲಿ, ಶ್ರೀರಾಮನ ಜೊತೆ ಕೇಳಿ ಬರುವ ಹೆಸರು ಆಂಜನೇಯ. ರಾಮನ ಭಕ್ತನಾದ ಹನುಮಂತನು ಭಕ್ತರಿಗೆ ಕಲಿಯುಗದ ಶಕ್ತಿಯುತ ದೇವರಾಗಿದ್ದಾನೆ. ಪಂಚಮುಖಿ ಆಂಜನೇಯ ಭಕ್ತರ ಎಲ್ಲಾ ನೋವುಗಳನ್ನು ನಾಶ ಪಡಿಸುತ್ತಾನೆ. ಸೀತಾಮಾತೆಯನ್ನು ರಾವಣ ಅಪಹರಣ ಮಾಡಿದ ನಂತರದಲ್ಲಿ ಅನೇಕ ಘಟನೆಗಳು ನಡೆದು, ಕೊನೆಯದಾಗಿ ರಾಮನ ಸೈನ್ಯ ವಾನರರು ಮತ್ತು ರಾವಣನ ಸೇನೆಯ ನಡುವೆ ಭೀಕರ ಕದನವಾಗುತ್ತದೆ. ಯುದ್ಧದಲ್ಲಿ ರಾವಣನ ತಮ್ಮ ಕುಂಭಕರ್ಣ ಹಾಗೂ ಮಗ ಇಂದ್ರಜಿತು ಮರಣ ಹೊಂದುತ್ತಾರೆ.

ಇದರಿಂದ ಕಂಗೆಟ್ಟ ರಾವಣನಿಗೆ ಸೋಲಿನ ಭಯ ಆವರಿಸಿತು. ಹೇಗಾದರೂ ಮಾಡಿ ರಾಮನನ್ನು ಸೋಲಿಸಬೇಕೆಂದು ಹಟತೊಟ್ಟು ಪಾತಾಳದ ಅಧಿಪತಿಯಾಗಿದ್ದ ತನ್ನ ಸಹೋದರ ಅಹಿರಾವಣನ ಸಹಾಯ ಕೇಳಿದನು. ಈ ವಿಷಯ ರಾವಣನ ತಮ್ಮ ವಿಭೀಷಣನಿಗೆ ತಿಳಿಯಿತು. ಅವನು ರಾಮ ಲಕ್ಷ್ಮಣರನ್ನು ಯಾರೂ ನೋಡದಂತೆ ತಡೆಯಬೇಕೆಂದು ಹನುಮಂತನಿಗೆ ಹೇಳಿದನು. ಹನುಮಂತನು ತನ್ನ ಬಾಲವನ್ನು ದೊಡ್ಡದಾಗಿ ವಿಸ್ತರಿಸಿಕೊಂಡ ಕೋಟೆ ಕಟ್ಟಿ ಅದರಲ್ಲಿ ರಾಮ ಲಕ್ಷ್ಮಣರನ್ನು ಮುಚ್ಚಿಟ್ಟನು.

ಆದರೆ ಅಹಿರಾವಣನು ಮಾಯಾವಿ. ಆದ್ದರಿಂದ ಅಹಿರಾವಣ ವಿಭೀಷಣನ ವೇಶದಲ್ಲಿ ಬಂದು, ರಾಮನನ್ನು ನೋಡಬೇಕೆಂದು ಹೇಳಿ, ಮೋಸದಿಂದ ರಾಮ-ಲಕ್ಷ್ಮಣರನ್ನು ಅಪಹರಿಸಿಕೊಂಡು ಹೋಗಿ ಪಾತಾಳದಲ್ಲಿ ಇಡುತ್ತಾನೆ.

ಇದನ್ನು ತಿಳಿದ ಹನುಮಂತನು ಪಾತಾಳಲೋಕಕ್ಕೆ ಹೊರಡುತ್ತಾನೆ. ಪಾತಾಳದ ಬಾಗಿಲಲ್ಲಿ ವಿಚಿತ್ರ ಪ್ರಾಣಿಯೊಂದು ಎದುರಾಗುತ್ತದೆ. ಅದರ ಮುಖ ವಾನರ ನಂತೆ, ದೇಹ ಮೀನಿನಂತೆ ಇರುತ್ತದೆ. ಅವನೇ ಪಾತಾಳದ ದ್ವಾರಪಾಲಕ ಮಕರಧ್ವಜ. ಅವನು ಹನುಮಂತನ ಮಗನಾಗಿದ್ದನು. ಲಂಕಾದಹನ ಮಾಡಿದ ನಂತರ ಉರಿತಾಪ ತಾಳಲಾರದೆ ಹನುಮಂತನು ಸಮುದ್ರಕ್ಕೆ ಜಿಗಿದನು. ಆಗ ಅವನ ದೇಹದಿಂದ ಬಿದ್ದ ಬೆವರ ಹನಿಯನ್ನು ಒಂದು ಮೀನು ನುಂಗಿತು. ಮೀನಿನಿಂದ ಮಕರಧ್ವಜ ಹುಟ್ಟಿದನು. ಅವನು ಮಹಾಪರಾಕ್ರಮಿ, ವೀರನು ಆಗಿದ್ದನು ನೋಡಿದ ಅಹಿರಾವಣನು ಪಾತಾಳಲೋಕದ ದ್ವಾರಪಾಲಕನ ಜವಾಬ್ದಾರಿ ಕೊಟ್ಟನು.

Also Read:  No Entry for Men Devotees: ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಹನುಮಂತನಿಗೆ ದಿವ್ಯ ದೃಷ್ಟಿಯಿಂದ ಇದು ಅರಿವಾಗುತ್ತದೆ. ಮಕರಧ್ವಜನಿಗೆ ಪಾತಾಳದ ಒಳಗೆ ಹೋಗಲು ಬಿಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಮಕರಧ್ವಜ ನನ್ನ ಕರ್ತವ್ಯವನ್ನು ಮಾಡುತ್ತೇನೆ, ಬಿಡುವುದಿಲ್ಲ ಎನ್ನುತ್ತಾನೆ.

ಆಗ ಹನುಮಂತನು ಅವನೊಡನೆ ಹೊರಾಡಿ ಅವನನ್ನು ಒಂದು ಕಂಬಕ್ಕೆ ಕಟ್ಟಿಹಾಕಿ ನಂತರ ಪಾತಾಳಲೋಕಕ್ಕೆ ಬರುತ್ತಾನೆ. ಅಹಿರಾವಣನನ್ನು ಸಂಹರಿಸಲು ಪಾತಾಳಲೋಕದ ಐದು ದಿಕ್ಕಿನಲ್ಲಿ ಇಟ್ಟಿರುವ ಐದು ದೀಪಗಳನ್ನು ಒಂದೇ ಬಾರಿಗೆ ಆರಿಸಬೇಕು. ಆಗ ಮಾತ್ರ ಅಹಿರಾವಣನನ್ನು ಸಂಹರಿಸಲು ಸಾಧ್ಯ ಎಂಬುದನ್ನು ತಿಳಿದಿದ್ದ ಹನುಮಂತನು, ಶ್ರೀರಾಮನನ್ನು ಮನಸ್ಸಿನಲ್ಲಿ ಸ್ಮರಿಸಿ ಪಂಚಮುಖಿ ಅವತಾರವನ್ನು ತಾಳುತ್ತಾನೆ. ಹಾಗೂ ತನ್ನ ಐದು ಮುಖಗಳಿಂದ ಪಾತಾಳದ 5 ದಿಕ್ಕಿನಲ್ಲಿದ್ದ ಐದು ದೀಪಗಳನ್ನು ಒಂದೇ ಸಲಕ್ಕೆ ಆರಿಸಿ ಅಹಿರಾವಣನನ್ನು ಸಂಹಾರ ಮಾಡುತ್ತಾನೆ. ನಂತರ ಬಂಧಿಸಿಟ್ಟಿದ್ದ ರಾಮಲಕ್ಷ್ಮಣರನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ಯುದ್ಧಭೂಮಿಗೆ ಬರುತ್ತಾನೆ.

Significance of Panchmukhi avatar: ಆಂಜನೇಯನ ಪಂಚಮುಖಗಳು – ಹನುಮಂತ, ಗರುಡ, ವರಹಾ, ನರಸಿಂಹ, ಮತ್ತು ಹಯಗ್ರೀವ

೧. ವಾನರ ರೂಪ ಹನುಮಂತನ ಮುಖ – ಪೂರ್ವದ ಕಡೆ ಇದ್ದು, ಸಾತ್ವಿಕತೆ, ಪವಿತ್ರತೆ ಹಾಗೂ ಸಂತೋಷವನ್ನು ಕೊಡುವುದು.

೨. ಎರಡನೇ ರೂಪ ನರಸಿಂಹನ ರೂಪ – ದಕ್ಷಿಣದ ಕಡೆ ಮುಖ ಮಾಡಿರುವ ನರಸಿಂಹನು ಭಕ್ತರ ಎಲ್ಲಾ ವಿಧದ ಭಯ, ಪಾಪಗಳು, ಆತ್ಮಗಳು ಮತ್ತು ದೆವ್ವಗಳ ಪರಿಣಾಮಗಳನ್ನು ತೆಗೆದು ಹಾಕುತ್ತಾನೆ ಮತ್ತು ಅನುಗ್ರಹಿಸುತ್ತಾನೆ.

೩. ಮೂರನೆಯದು ಗರುಡನ ಮುಖ – ಇದು ಪಶ್ಚಿಮ ದಿಕ್ಕಿಗೆ ಇದ್ದು, ಭಕ್ತರ ಎಲ್ಲಾ ವಿಧದ ಕಾಯಿಲೆಗಳು, ನಕಾರಾತ್ಮಕತೆಗಳು ಮಾಟ- ಮಂತ್ರ, ವಿಷ ಮತ್ತು ಭಯವನ್ನು ತೆಗೆದುಹಾಕುತ್ತಾನೆ.

Also Read: Political Crime Thriller: ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

೪. ನಾಲ್ಕನೆಯದು ವರಹಾ ರೂಪ – ಇದು ಉತ್ತರದಿಕ್ಕಿನಲ್ಲಿದೆ. ಧನ ಸಂಪತ್ತು, ಸುಖ- ಸಂತೋಷ, ನೆಮ್ಮದಿ ಕೊಡುವುದರ ಜೊತೆಗೆ ಗ್ರಹಗಳ ಭಾದೆ ನಿವಾರಣೆ ಮಾಡುತ್ತಾನೆ.

೫. ಐದನೆಯ ಮುಖ ಹಯಗ್ರೀವ – ಇದು ಊರ್ಧ್ವ ಮುಖವಾಗಿದೆ ಅಂದರೆ ಮೇಲ್ಮುಖವಾಗಿ ಇದ್ದು, ಭಕ್ತರು, ಜನರ ಅಭಿಮಾನವನ್ನು ಪಡೆಯುವಲ್ಲಿ, ಭಕ್ತರ ಮಾತುಗಳು ಆ ಸಮಯಕ್ಕೆ ಸರಿಯಾಗಿ ಮಾರ್ಪಾಡಾಗುತ್ತದೆ. ಜ್ಞಾನ, ಉತ್ತಮ ಸ್ನೇಹಿತರು, ಬುದ್ಧಿವಂತಿಕೆ, ಒಳ್ಳೆಯ ಮಕ್ಕಳು ಹಾಗೂ ಸದ್ಗತಿಯನ್ನು ಕೊಡುತ್ತದೆ. ಹಾಗೆ ಈ ರೂಪವು ಅವರ ಎಲ್ಲಾ ಆಸೆಗಳನ್ನು ಬಹುಬೇಗ ಈಡೇರಿಸುತ್ತದೆ.

ಪಂಚಮುಖಿ ಹನುಮಂತನ ವಿಗ್ರಹಗಳು ತುಂಬಾ ಅಪರೂಪ. ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ಅನೇಕ ತೊಂದರೆಗಳು ನಿವಾರಣೆಯಾಗುವುದು. ದುಷ್ಟಶಕ್ತಿಗಳು ಹತ್ತಿರವೂ ಸುಳಿಯುವುದಿಲ್ಲ.

ಪಂಚಮುಖಿ ​ಆಂಜನೇಯ ಮಂತ್ರ:

ಓಂ ನಮೋ ಭಗವತೇ ಪಂಚವದನಾಯ ಮಹಾಬಲ ಪ್ರಚಂಡ ಸಕಲ ಬ್ರಹ್ಮಾಂಡ ನಾಶಕಾಯ ಸಕಲ ಭೂತ ಪ್ರೇತ ಪಿಶಾಚ ಶಾಕಿನಿ ಡಾಕಿನಿ ಯಕ್ಷಿಣಿ ಪೂತನಾ ಮಹಾಮಾರಿ ಸಕಲ ವಿಘ್ನ ನಿವಾರಣಾಯ ಸ್ವಾಹ ಓಂ ಆಂಜನೇಯಾಯ ವಿದ್ಮಹೇ! ಮಹಾಬಲಾಯ ಧೀಮಹೀ! ತನ್ನೋ ಹನುಮಾನ್ ಪ್ರಚೋದಯಾತ್ !! (ಆಶಾ ನಾಗಭೂಷಣ, ನಿತ್ಯಸತ್ಯ)

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್