ನಿಮ್ಮ ಎಂಟರ್ಟೈನ್ಮೆಂಟ್ ಅಡ್ಡೆ Airtel Xstream Fiber; ಅಸೀಮಿತ ಸಾಧ್ಯತೆಗಳು ನಿಮ್ಮೆದುರು

ಏರ್ಟೆಲ್ Xstream Fiberನ ಜನಪ್ರಿಯತೆಗೆ ಕಾರಣವಾಗಿರುವ ಒಂದು ಅಂಶವೆಂದರೆ, ಒಂದೇ ಸ್ಥಳದಲ್ಲಿ ಎಲ್ಲಾ ಒಟಿಟಿ ಚಾನಲ್​ಗಳನ್ನು ಪಡೆಯಬಹುದು. ಬೇರೆ ಬೇರೆ ಸಬ್​ಸ್ಕ್ರಿಪ್ಷನ್​ಗಳನ್ನು ನಿರ್ವಹಿಸುವ ಅವಶ್ಯಕತೆ ಇರುವುದಿಲ್ಲ. ಇಲ್ಲಿಯೇ ಎಲ್ಲವೂ ಲಭ್ಯ ಇರುತ್ತದೆ.

ನಿಮ್ಮ ಎಂಟರ್ಟೈನ್ಮೆಂಟ್ ಅಡ್ಡೆ Airtel Xstream Fiber; ಅಸೀಮಿತ ಸಾಧ್ಯತೆಗಳು ನಿಮ್ಮೆದುರು
ಏರ್ಟೆಲ್ ಎಕ್ಸ್​ಟ್ರೀಮ್ ಫೈಬರ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Apr 08, 2024 | 4:07 PM

ನಿರಂತರ ಮೀಟಿಂಗ್​ಗಳು, ಬೆಚ್ಚಿಸುವ ಇಮೇಲ್​ಗಳು, ಇಡೀ ವಾರ ನೀವು ಹೈರಾಣವಾಗಿರಬಹುದು? ಈ ಎಲ್ಲಾ ಜಂಜಾಟಗಳನ್ನು ಮನಸ್ಸಿನಿಂದ ಕಿತ್ತಾಕಿ, ವೀಕೆಂಡ್​ನಲ್ಲಿ ಸಂಪೂರ್ಣ ವಿಶ್ರಾಂತಿ ಮತ್ತು ಮನರಂಜನೆ ಪಡೆಯಲು ನೀವು ಹಾತೊರೆಯುತ್ತಿರಬಹುದು, ಏನಂತೀರಿ? ಯಾವ ಶೋ ಬೇಕೆಂದು ನೀವು ಹುಡುಕುವುದರಲ್ಲೇ ಸಮಯ ಕಳೆದುಹೋಗಬಹುದು. ಹಾಗೆ ಹುಡುಕಿದರೂ ನೀವು ಈ ಹಿಂದೆ ನೂರಾರು ಬಾರಿ ನೋಡಿರುವ ಶೋ ರೀತಿಯ ಮತ್ತೊಂದು ಶೋ ನಿಮಗೆ ಸಿಗಬಹುದು. ಇದರ ಬದಲು ನಿಮ್ಮ ಮನರಂಜನೆಯ ಅವಶ್ಯಕತೆಗಳು ನಿಮಗೆ ಸುಲಭವಾಗಿ ಸಿಗುವಂತಿದ್ದರೆ ಹೇಗಿರುತ್ತದೆ?

ಈಗ Airtel Xstream Fiberನಿಂದ ಇದು ಸಾಧ್ಯ.

ವೀಕೆಂಡ್​ನಲ್ಲಿ ನಿಮ್ಮ ಮನರಂಜನಾ ಅಗತ್ಯತೆಗಳನ್ನು ಸರಳಗೊಳಿಸಬೇಕೆಂದರೆ ವಿವಿಧ ಒಟಿಟಿ ಸಬ್​ಸ್ಕ್ರಿಪ್ಷನ್​ಗಳನ್ನು ನಿರ್ವಹಿಸುವುದು ತಲೆನೋವಿನ ಅನುಭವವಾಗಬಹುದು. ಏರ್ಟೆಲ್ Xstream Fiber ನಿಮಗೆ ಈ ತಲೆನೋವು ನಿವಾರಿಸುತ್ತದೆ. ಒಂದೇ ಸ್ಥಳದಲ್ಲಿ ನಿಮ್ಮ ಎಲ್ಲಾ ಮನರಂಜನೆಯನ್ನು ಕ್ರೋಢೀಕರಿಸುತ್ತದೆ. ‘ಎಂಟರ್ಟೈನ್ಮೆಂಟ್ ಜೋರ್ದಾರ್, ಆರ್ ಯೂ ತೈಯಾರ್’ ಎನ್ನುತ್ತಾ ಏರ್ಟೆಲ್ Xstream Fiber ನಿಮಗೆ ಅತ್ಯುತ್ತಮ ಎಂಟರ್ಟೈನ್ಮೆಂಟ್ ಹಬ್ ಆಗುತ್ತದೆ. ಇಲ್ಲಿ ನಾವು ಸಿನಿಮಾ, ಶೋ, ಲೈವ್ ಟಿವಿ ಚಾನಲ್ ಮತ್ತು ನಿಮ್ಮ ನೆಚ್ಚಿನ ಕ್ರೀಡೆಗಳ ಒಂದು ಲೈಬ್ರರಿ ಸೃಷ್ಟಿ ಆಗುವುದರ ಬಗ್ಗೆ ಮಾತನಾಡುತ್ತಿದ್ದೇವೆ.

Airtel Xstream Fiber ಸರಿಯಾದ ಆಯ್ಕೆ ಯಾಕೆ?

ಒಂದೇ ಸ್ಥಳದಲ್ಲಿ ನಿಮ್ಮ ಎಲ್ಲಾ ಮನರಂಜನೆ: ಏರ್ಟೆಲ್ Xstream Fiberನ ಜನಪ್ರಿಯತೆಗೆ ಕಾರಣವಾಗಿರುವ ಒಂದು ಅಂಶವೆಂದರೆ, ಒಂದೇ ಸ್ಥಳದಲ್ಲಿ ಎಲ್ಲಾ ಒಟಿಟಿ ಚಾನಲ್​ಗಳನ್ನು ಪಡೆಯಬಹುದು. ಬೇರೆ ಬೇರೆ ಸಬ್​ಸ್ಕ್ರಿಪ್ಷನ್​ಗಳನ್ನು ನಿರ್ವಹಿಸುವ ಅವಶ್ಯಕತೆ ಇರುವುದಿಲ್ಲ. ಇಲ್ಲಿಯೇ ಎಲ್ಲವೂ ಲಭ್ಯ ಇರುತ್ತದೆ. 350ಕ್ಕೂ ಹೆಚ್ಚು ಟಿವಿ ಚಾನಲ್​ಗಳನ್ನು ನೀಡುವ ಡಿಟಿಎಚ್ ಪ್ಯಾಕೇಜ್ ಪಡೆಯುವ ಅವಕಾಶವೂ ಇದೆ. ಹಾಗೆಯೇ, ಡಿಸ್ನೀ+ ಹಾಟ್​ಸ್ಟಾರ್, ಝೀ5, ಅಮೇಜಾನ್ ಪ್ರೈಮ್ ವಿಡಿಯೋ ಇತ್ಯಾದಿ ಸ್ಟ್ರೀಮಿಂಗ್ ಸರ್ವಿಸ್ ಅನ್ನು ಹೈಸ್ಪೀಡ್ ಇಂಟರ್ನೆಟ್​ನಲ್ಲಿ ನೋಡುವ ಅವಕಾಶ ಸಿಗುತ್ತದೆ. Airtel Xstream Fiber ನಿಮಗೆ ಏನೆಲ್ಲಾ ಅನುಕೂಲ ತರುತ್ತದೆ ಎಂದು ನಿಖರವಾಗಿ ತಿಳಿಯಬಯಸುವಿರಾ? ಇಲ್ಲಿ ವೀಕ್ಷಿಸಿ:

ಸೂಪರ್-ಫಾಸ್ಟ್ ಸ್ಪೀಡ್: Airtel Xstream Fiber ಮೂಲಕ ನೀವು ಮಿಂಚಿನ ವೇಗದ ಇಂಟರ್ನೆಂಟ್ ಸ್ಪೀಡ್ ಪಡೆಯಬಹುದು. ನಿಮ್ಮ ನೆಚ್ಚಿನ ಸಿನಿಮಾಗಳನ್ನು ಹೈಸ್ಟ್ರೀಮ್​ನಲ್ಲಿ ನೋಡಬಹುದು. ಅಥವಾ ಟ್ರೆಂಡಿಂಗ್​ನಲ್ಲಿರುವ ಟಿವಿ ಸೀರೀಸ್​ನ ಎಲ್ಲಾ ಎಪಿಸೋಡ್​ಗಳನ್ನು ಕ್ಷಣಗಳಲ್ಲಿ ಡೌನ್​ಲೋಡ್ ಮಾಡಬಹುದು. ಇಷ್ಟೇ ಅಲ್ಲ, ಅಂತರ್ಜಾಲವನ್ನು ಯಾವುದೇ ತೊಡಕು ಇಲ್ಲದೇ ಸುಲಭವಾಗಿ ಬ್ರೌಸ್ ಮಾಡಬಹುದು.

ಮಕ್ಕಳಿಗೆ ಸುರಕ್ಷಿತ ಮನರಂಜನೆ: Airtel Xstream Fiberನಲ್ಲಿ ಪೇರಂಟಲ್ ಕಂಟ್ರೋಲ್ ವ್ಯವಸ್ಥೆ ಇದೆ. ಹೀಗಾಗಿ, ವೀಕ್ಷಕರಿಗೆ ಇದು ಮೊದಲ ಆಯ್ಕೆ ಎನಿಸಿದೆ. ನಿಮ್ಮ ಮಕ್ಕಳು ಏನು ನೋಡುತ್ತಿದ್ದಾರೆ ಎಂದು ನೀವು ಚಿಂತೆ ಪಡಬೇಕಿಲ್ಲ. ಬಹಳ ಸುಲಭವಾಗಿ ಈ ಪೇರೆಂಟಲ್ ಕಂಟ್ರೋಲ್ ಅನ್ನು ರಚಿಸಬಹುದು, ಬಳಸಬಹುದು. ನಿಮ್ಮ ಮಕ್ಕಳು ಯಾವುದನ್ನು ನೋಡಬಹುದು ಎಂದು ಗಡಿ ನಿರ್ಮಿಸಬಹುದು. ಮಕ್ಕಳು ಮನರಂಜನಾ ಜಗತ್ತನ್ನು ಸುರಕ್ಷಿತವಾಗಿ ಅನ್ವೇಷಿಸಬಹುದು. ಈಗ ನೀವು ಎಂಟರ್ಟೈನ್ಮೆಂಟ್, ಸುರಕ್ಷತೆಯ ಜೊತೆಗೆ ಎಂದು ಹೇಳಬಹುದು.

ಅಸೀಮಿತ ಮನರಂಜನೆ: ಏರ್ಟೆಲ್ Xstream Fiber ಯಾವುದೋ ಒಂದಕ್ಕೆ ಸೀಮಿತವಾದುದಲ್ಲ. ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್​ಟಾಪ್​ನಲ್ಲೂ ಫೇವರಿಟ್ ಶೋ ಅನ್ನು ಸ್ಟ್ರೀಮ್ ಮಾಡಿಕೊಂಡು ನೋಡಬಹುದು. ನೀವು ರುಚಿಕರ ಊಟಕ್ಕೆ ಪ್ಲಾನ್ ಮಾಡಿದ್ದು, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಫಿನಾಲೆ ಕಾರ್ಯಕ್ರಮವನ್ನೂ ಮಿಸ್ ಮಾಡಬಾರದು ಎಂದಿದ್ದರೆ ನಿಮ್ಮೊಂದಿಗೆ ಎಂಟರ್ಟೈನ್ಮೆಂಟ್ ಅನ್ನೂ ಜೊತೆಗೆ ತೆಗೆದುಕೊಂಡು ಹೋಗಿ.

ಏನು ವೀಕ್ಷಿಸಬೇಕು ಎಂದು ತಿಳಿಯದ ಸ್ಥಿತಿ ಬರುವುದಿಲ್ಲ: Airtel Xstream Fiberನ ವಿಶೇಷತೆ ಏನು ಗೊತ್ತಾ, ಇದು ನಿಮಗೆ ಎನು ಬೇಕು ಎಂಬುದನ್ನು ಸುಲಭವಾಗಿ ಹುಡುಕಲು ನಿಮಗೆ ಸಹಾಯವಾಗುತ್ತದೆ. ಅದರ ಸ್ಮಾರ್ಟ್ ರೆಕಮೆಂಡೇಶನ್ ಫೀಚರ್ ನೀವು ಇಷ್ಟ ಪಡುವ ಮತ್ತು ವೀಕ್ಷಿಸಬಯಸುವ ಸಿನಿಮಾ ಮತ್ತು ಶೋಗಳನ್ನು ಶಿಫಾರಸು ಮಾಡುತ್ತದೆ. ವೀಕೆಂಡ್ ಎಂಟರ್ಟೈನ್ಮೆಂಟ್​ಗೆ ಏನು ಬೇಕು ಎಂದು ಹುಡುಕಲು ವ್ಯಯಿಸುವ ಸಮಯವನ್ನು ಉಳಿಸಿ, ಹೆಚ್ಚೆಚ್ಚು ಕಾಲ ಮನರಂಜನೆ ಪಡೆಯಿರಿ.

ಕೊನೆಯದಾಗಿ….

ಅತ್ಯುತ್ತಮ ಎಂಟರ್ಟೈನ್ಮೆಂಟ್ ಅಡ್ಡೆಯಾಗಿರುವ Airtel Xstream Fiber ಬಹಳ ವಿಸ್ತೃತವಾದ ಕಂಟೆಂಟ್ ಅನ್ನು ಆನಂದಿಸಲು ನಿಮಗೆ ಒನ್ ಸ್ಟಾಪ್ ಸಲ್ಯೂಶನ್ ಆಗಿದೆ. ಹೈಸ್ಪೀಡ್ ಕನೆಕ್ಟಿವಿಟಿಯನ್ನು ಇದು ನೀಡುತ್ತದೆ. ನಿಮ್ಮ ಕುಟುಂಬದ ವೀಕ್ಷಣಾ ಅನುಭವ ಸುಭದ್ರವಾಗಿದೆ ಎಂಬ ಮನಃಶಾಂತಿಯೂ ನಿಮಗೆ ಇರುತ್ತದೆ. ಇದರಿಂದ ‘ಎಂಟರ್ಟೈನ್ಮೆಂಟ್ ಜೋರ್ದಾರ್, ಆರ್ ಯೂ ತೈಯಾರ್?’ ಅನುಭವ ನಿಸ್ಸಂಶಯವಾಗಿ ನಿಮ್ಮದಾಗಿರುತ್ತದೆ. ಜೊತೆಗೆ, ಕೇವಲ 699 ರೂನಿಂದ ಪ್ಲಾನ್​ಗಳು ಶುರುವಾಗುತ್ತವೆ. ಇದರೊಂದಿಗೆ Airtel Xstream Fiber ಉತ್ಕೃಷ್ಟ ಮನರಂಜನೆ ಜೊತೆಗೆ ಕಡಿಮೆ ವೆಚ್ಚದ ಭಾಗ್ಯವನ್ನೂ ನೀಡುತ್ತದೆ.

ಏರ್ಟೆಲ್ ಬ್ರಾಡ್​ಬ್ಯಾಂಡ್​ನ ವಿವಿಧ ಸೇವೆಗಳನ್ನು ಅನ್ವೇಷಿಸಿ, ಅಸೀಮಿತ ಮನರಂಜನೆ ಪಡೆಯಿರಿ. ಏರ್ಟೆಲ್​ನ ವೆಬ್​ಸೈಟ್​ಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಿರಿ. ಈಗಲೇ ಸಬ್ಸ್​​ಕ್ರಿಪ್ಷನ್​ಗೆ ಸೈನಪ್ ಅಗಿರಿ.

(ಇದು ಪ್ರಾಯೋಜಿತ ಬರಹ)

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ