Sign In

By signing in or creating an account, you agree with Associated Broadcasting Company's Terms & Conditions and Privacy Policy.

JioCinema Cricket: ಜಿಯೋಸಿನಿಮಾದ ಮತ್ತೊಂದು ಡಿಜಿಟಲ್ ಕ್ರಿಕೆಟ್ ಇನಿಂಗ್ಸ್ ಶುರು, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ, ಜಿಯೋಸಿನಿಮಾದಲ್ಲಿ ನೇರಪ್ರಸಾರ!

JioCinema Free Live Stream: ಟಾಟಾ ಐಪಿಎಲ್-2023ರಲ್ಲಿ ಹೊಸ ದಾಖಲೆ ಬರೆದ ಬಳಿಕ ಜಿಯೋಸಿನಿಮಾ ಈಗ ಕ್ರಿಕೆಟ್ ಪ್ರೇಮಿಗಳಿಗೆ ಕೆರಿಬಿಯನ್​ ದ್ವೀಪಗಳಲ್ಲಿ ನಡೆಯಲಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಎಲ್ಲ ಮೂರು ಪ್ರಕಾರದ ಕ್ರಿಕೆಟ್ ಸರಣಿಗಳ ರೋಚಕ ಮನರಂಜನೆ ಒದಗಿಸಲಿದೆ.

JioCinema Cricket: ಜಿಯೋಸಿನಿಮಾದ ಮತ್ತೊಂದು ಡಿಜಿಟಲ್ ಕ್ರಿಕೆಟ್ ಇನಿಂಗ್ಸ್ ಶುರು, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ, ಜಿಯೋಸಿನಿಮಾದಲ್ಲಿ ನೇರಪ್ರಸಾರ!
ಜಿಯೋಸಿನಿಮಾದ ಮತ್ತೊಂದು ಡಿಜಿಟಲ್ ಕ್ರಿಕೆಟ್ ಇನಿಂಗ್ಸ್ ಶುರು
Follow us
ಸಾಧು ಶ್ರೀನಾಥ್​
|

Updated on:Jun 14, 2023 | 5:24 PM

ಮುಂಬೈ: ಮುಂಬರುವ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ-2023ರಲ್ಲಿ (India west Indies Cricket tour) ಒಂದು ತಿಂಗಳ ಕಾಲ ನಡೆಯಲಿರುವ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯ ನೇರಪ್ರಸಾರದ ಡಿಜಿಟಲ್ ಹಕ್ಕುಗಳನ್ನು (digital rights) ಜಿಯೋಸಿನಿಮಾ (JioCinema) ಸ್ವಾಧೀನಪಡಿಸಿಕೊಂಡಿರುವುದಾಗಿ ಇಂದು ಘೋಷಿಸಲಾಗಿದೆ. ಎಲ್ಲ ಮೂರು ಪ್ರಕಾರದ ಕ್ರಿಕೆಟ್ ಸರಣಿಗಳನ್ನು ಒಳಗೊಂಡ ದ್ವಿಪಕ್ಷೀಯ ಪ್ರವಾಸ, ಜುಲೈ 12ರಿಂದ ಡೊಮಿನಿಕಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. ಬಳಿಕ ಟ್ರಿನಿಡಾಡ್​ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಟೆಸ್ಟ್ ಸರಣಿಯ ಮೂಲಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​​​ನ 2023-25ರ ಆವೃತ್ತಿಯಲ್ಲೂ ಅಭಿಯಾನ ಆರಂಭಿಸಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 27ರಂದು ಆರಂಭಗೊಳ್ಳಲಿದೆ. ಬಾರ್ಬಡೋಸ್ ಮತ್ತು ಟ್ರಿನಿಡಾಡ್​​ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ. ಐದು ಪಂದ್ಯಗಳ ಟಿ20 ಸರಣಿಯು ಆಗಸ್ಟ್ 3ರಂದು ಟ್ರಿನಿಡಾಡ್​​ನಲ್ಲಿ ಶುರುವಾಗಲಿದೆ. 2 ಮತ್ತು 3ನೇ ಪಂದ್ಯಗಳು ಗಯಾನಾದಲ್ಲಿ ನಡೆದರೆ, ಕೊನೆಯ 2 ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿವೆ (JioCinema Cricket).

ಟಾಟಾ ಐಪಿಎಲ್ 2023ರ (IPL 2023) ಸಮಯದಲ್ಲಿ ಅಭೂತಪೂರ್ವ ಮಟ್ಟದ ನಿಶ್ಚಯ, ವೀಕ್ಷಣೆ ಮತ್ತು ಏಕಕಾಲಿಕತೆಯನ್ನು ಸ್ಥಾಪಿಸಿದ ಹಾಗೂ ಎಲ್ಲಾ ದಾಖಲೆಗಳನ್ನು ಛಿದ್ರಗೊಳಿಸಿದ ನಂತರ ಜಿಯೋಸಿನಿಮಾ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕ್ರೀಡೆಯನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಉಚಿತವಾಗಿ ಪ್ರಸ್ತುತ ಪಡಿಸುವುದನ್ನು ಮುಂದುವರಿಸಲಿದೆ. ವೀಕ್ಷಕರು ಕನ್ನಡ, ಇಂಗ್ಲಿಷ್, ಹಿಂದಿ, ಭೋಜ್‌ಪುರಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳ ವೀಕ್ಷಕ ವಿವರಣೆಯೊಂದಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ವೀಕ್ಷಿಸಬಹುದಾಗಿದೆ. ದ್ವಿಪಕ್ಷೀಯ ಸರಣಿಯೊಂದನ್ನು ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

‘ಜಿಯೋಸಿನಿಮಾದ ತಡೆರಹಿತ ಸ್ಟ್ರೀಮಿಂಗ್ ಅನುಭವದಿಂದಾಗಿ, ಹಿಂದೆಂದೂ ಕೇಳರಿಯದ ಬೆರಗುಗೊಳಿಸುವಂಥ ಮಾನದಂಡ ನಿರ್ಮಾಣವಾಯಿತು. ಕ್ರೀಡೆಯು ಡಿಜಿಟಲ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆಯುವಂತಾಗಲು ನಾವು ತಾಂತ್ರಿಕ ಸಾಮರ್ಥ್ಯದ ಗಡಿಗಳನ್ನು ದೂರ ತಳ್ಳಿದೆವು. ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ- 2023ರೊಂದಿಗೆ ನಾವು ಮುಂದೆ ಸಾಗುತ್ತಿದ್ದೇವೆ ಮತ್ತು ನಮ್ಮ ವೀಕ್ಷಕರಿಗೆ ವಿಶ್ವ ದರ್ಜೆಯ ಪ್ರಸ್ತುತಿಯನ್ನು ನೀಡುತ್ತೇವೆ’ ಎಂದು ವಯಾಕಾಮ್18ನ ಸ್ಟ್ರಾಟಜಿ, ಪಾಲುದಾರಿಕೆ ಮತ್ತು ಸ್ವಾಧೀನಗಳ ಕ್ರೀಡಾ ಮುಖ್ಯಸ್ಥ ಹರ್ಷ್ ಶ್ರೀವಾಸ್ತವ ಹೇಳಿದರು.

ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ ವೇಳಾಪಟ್ಟಿ

ಟಾಟಾ ಐಪಿಎಲ್ 2023 ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಡಿಜಿಟಲ್ ಈವೆಂಟ್ ಆಗಿದೆ. ಜಿಯೋಸಿನಿಮಾದಲ್ಲಿ 12 ಕೋಟಿಗೂ ಹೆಚ್ಚು ವೀಕ್ಷಕರು ಇದುವರೆಗೆ ಅತ್ಯಂತ ರೋಮಾಂಚಕವಾದ ಟಾಟಾ ಐಪಿಎಲ್ ಫೈನಲ್‌ ಪಂದ್ಯವನ್ನು ವೀಕ್ಷಿಸಿದರು. ಟಾಟಾ ಐಪಿಎಲ್ 2023ರ ರೋಚಕತೆ ಮತ್ತು ಮನರಂಜನೆಯು ಫೈನಲ್‌ನಲ್ಲಿ ಹೊಸ ಎತ್ತರಕ್ಕೆ ಏರಿತು. ಇದೇ ವೇಳೆ ಜಿಯೋಸಿನಿಮಾದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಪಂದ್ಯವನ್ನು ಏಕಕಾಲದಲ್ಲಿ 3.21 ಕೋಟಿ ಮಂದಿ ವೀಕ್ಷಿಸಿದ ಮೂಲಕ ಹೊಸ ವಿಶ್ವ ದಾಖಲೆ ಸ್ಥಾಪನೆಯಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Wed, 14 June 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ