
ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026 (CWG 2026) ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್ ತಲುಪಿದ್ದ ಎಲ್ಲಾ 10 ಭಾರತೀಯ ಬಾಕ್ಸರ್‌ಗಳು ಭರ್ಜರಿ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಅದ್ಭುತ ಪ್ರದರ್ಶನದಿಂದಾಗಿ ಎಲ್ಲರಿಗೂ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದ್ದು, ಭಾರತಕ್ಕೆ ಬಾಕ್ಸಿಂಗ್ ಒಂದರಲ್ಲೇ 10 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಸುವರ್ಣ ಅವಕಾಶ ಒದಗಿಬಂದಿದೆ.
ಆಗಸ್ಟ್ 1 ರಂದು (ಶನಿವಾರ) ನಡೆಯಲಿರುವ ಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಮುಖಾಮುಖಿ ವಿವರ ಇಲ್ಲಿದೆ:
ಒಂದು ವೇಳೆ ಫೈನಲ್ ತಲುಪಿರುವ ಎಲ್ಲಾ 10 ಬಾಕ್ಸರ್‌ಗಳು ಚಿನ್ನದ ಪದಕ ಗೆದ್ದರೆ, ಭಾರತದ ಚಿನ್ನದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಈ ಹದಿನೈದು ಪದಕಗಳೊಂದಿಗೆ ಭಾರತ ಕಾಮನ್‌ವೆಲ್ತ್ ಗೇಮ್ಸ್ನ ಮೆಡಲ್ ಲಿಸ್ಟ್ನಲ್ಲಿ 4ನೇ ಸ್ಥಾನಕ್ಕೇರಬಹುದು.
ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್ ಟೂರ್ನಿ!
ಅಂದರೆ, ಪ್ರಸ್ತುತ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಭಾರತವು ಇಂದು ಬಾಕ್ಸಿಂಗ್ ಫೈನಲ್‌ಗಳಲ್ಲಿ ಗೆದ್ದು 10 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ ಮೆಡಲ್ ಲಿಸ್ಟ್ನಲ್ಲಿ ಏಕಾಏಕಿ 4ನೇ ಸ್ಥಾನಕ್ಕೇರಲಿದೆ! ಇದೇ ಕಾರಣಕ್ಕೆ ಇಂದಿನ ಈ ಐತಿಹಾಸಿಕ ಬಾಕ್ಸಿಂಗ್ ಹಣಾಹಣಿಯನ್ನು ಇಡೀ ಕ್ರೀಡಾಲೋಕವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದೆ.