Asia Cup 2025: ಭಾರತದ ಕೊನೆಯ ಲೀಗ್ ಪಂದ್ಯಕ್ಕೆ ಅಖಾಡ ಸಜ್ಜು; ಎದುರಾಳಿ ಯಾರು?
IND vs OMA Asia Cup 2025 Live Streaming: ಭಾರತ ತಂಡವು 2025ರ ಏಷ್ಯಾಕಪ್ನಲ್ಲಿ ಯುಎಇ ಮತ್ತು ಪಾಕಿಸ್ತಾನವನ್ನು ಸೋಲಿಸಿ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡ ಒಮಾನ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಈ ಪಂದ್ಯ ಔಪಚಾರಿಕವಾಗಿದ್ದರೂ, ಭಾರತ ತನ್ನ ಅಭಿಯಾನವನ್ನು ಮುಂದುವರಿಸಲು ಸಿದ್ಧವಾಗಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದು.

2025 ರ ಏಷ್ಯಾಕಪ್ನಲ್ಲಿ Asia Cup 2025 ಟೀಂ ಇಂಡಿಯಾ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಸೂರ್ಯಕುಮಾರ್ ಪಡೆ ಸೂಪರ್ 4 ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮೊದಲು ಯುಎಇ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಅದರ ನಂತರ, ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಇದೀಗ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ. ಒಮಾನ್ ಈಗಾಗಲೇ ಸೂಪರ್ ಫೋರ್ ರೇಸ್‌ನಿಂದ ಹೊರಬಿದ್ದಿದ್ದು, ಈ ಪಂದ್ಯ ಎರಡೂ ತಂಡಗಳಿಗೆ ಕೇವಲ ಔಪಚಾರಿಕವಾಗಿದೆ.
ಭಾರತ ಹಾಗೂ ಒಮಾನ್ ನಡುವಿನ ಏಷ್ಯಾಕಪ್ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ಒಮಾನ್ ನಡುವಿನ ಈ ಪಂದ್ಯ ಸೆಪ್ಟೆಂಬರ್ 19 ರಂದು ನಡೆಯಲಿದೆ.
ಭಾರತ ಹಾಗೂ ಒಮಾನ್ ನಡುವಿನ ಏಷ್ಯಾಕಪ್ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಒಮಾನ್ ನಡುವಿನ ಈ ಪಂದ್ಯ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಹಾಗೂ ಒಮಾನ್ ನಡುವಿನ ಏಷ್ಯಾಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7:30 ಕ್ಕೆ ನಡೆಯಲಿದೆ.
ಭಾರತ ಹಾಗೂ ಒಮಾನ್ ನಡುವಿನ ಏಷ್ಯಾಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಬಹುದು. ಇದನ್ನು ಸೋನಿಲೈವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ನೇರಪ್ರಸಾರ ಮಾಡಲಾಗುತ್ತದೆ .
Asia Cup 2025: ಹ್ಯಾಂಡ್‌ಶೇಕ್ ಮಾಡದಂತೆ ಸೂಚಿಸಿದ್ದೇ ಎಸಿಸಿ..! ಸ್ಫೋಟಕ ಮಾಹಿತಿ ಬಹಿರಂಗ
ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ , ತಿಲಕ್ ವರ್ಮಾ , ಹಾರ್ದಿಕ್ ಪಾಂಡ್ಯ , ಶಿವಂ ದುಬೆ , ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ , ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ
ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ಆಶಿಶ್ ಒಡೆದಾರ, ವಿನಾಯಕ್ ಶುಕ್ಲಾ, ಹಮ್ಮದ್ ಮಿರ್ಜಾ (ವಾಕ್), ಅಮೀರ್ ಕಲೀಂ, ಹಸ್ನೈನ್ ಶಾ, ಕರಣ್ ಸೋನಾವಾಲೆ, ಮೊಹಮ್ಮದ್ ನದೀಮ್, ಆರ್ಯನ್ ಬಿಷ್ತ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಸಮಯ್ ಶ್ರೀವಾಸ್ತವ, ಶಕೀಲ್ ಅಹ್ಮದ್, ಮೊಹಮ್ಮದ್ ಇಮ್ರಾನ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
