AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ? ಬಿಸಿಸಿಐ ಹೇಳುವುದೇನು?

ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ? ಬಿಸಿಸಿಐ ಹೇಳುವುದೇನು?

ಪೃಥ್ವಿಶಂಕರ
|

Updated on: Jul 08, 2026 | 7:16 PM

Share

India's Asia Cup Trophy Missing: ಕಳೆದ ವರ್ಷ ಏಷ್ಯಾಕಪ್ ಗೆದ್ದರೂ ಟೀಂ ಇಂಡಿಯಾಗೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಬಿಸಿಸಿಐ ಹಾಗೂ ಎಸಿಸಿ ನಡುವೆ ಮಾತುಕತೆ ನಡೆದಿದ್ದರೂ, ಎಸಿಸಿ ಟ್ರೋಫಿ ಹಸ್ತಾಂತರಿಸಿಲ್ಲ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಎಸಿಸಿ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಪದೇ ಪದೇ ಮನವಿ ಮಾಡಿದರೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದಿದ್ದಾರೆ. ಟ್ರೋಫಿ ಸಿಗದಿದ್ದರೂ ಭಾರತವೇ ವಿಜೇತರು ಎಂಬುದು ಜಗತ್ತಿಗೆ ತಿಳಿದಿದೆ.

ಕಳೆದ ವರ್ಷ ನಡೆದಿದ್ದ ಏಷ್ಯಾಕಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟೀಂ ಇಂಡಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಆದರೆ ಏಷ್ಯಾಕಪ್ ಟ್ರೋಫಿ ಇದುವರೆಗೂ ಟೀಂ ಇಂಡಿಯಾದ ಕೈ ಸೇರಿಲ್ಲ. ಈ ವಿಚಾರವಾಗಿ ಬಿಸಿಸಿಐ ಹಾಗೂ ಎಸಿಸಿ ನಡುವೆ ಸಾಕಷ್ಟು ಮಾತುಗಕೆತಗಳು ನಡೆದ ಹೊರತಾಗಿಯೂ ಟ್ರೋಫಿಯನ್ನು ಟೀಂ ಇಂಡಿಯಾಕ್ಕೆ ಹಸ್ತಾಂತರಿಸುವ ಕೆಲಸವನ್ನು ಎಸಿಸಿ ಮಾಡಿಲ್ಲ. ಇದೀಗ ಏಷ್ಯಾಕಪ್ ಟ್ರೋಫಿಗೆ ಸಂಬಂಧಿಸಿದಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ರಾಜೀವ್ ಶುಕ್ಲಾ, ‘ಏಷ್ಯಾ ಕಪ್ ಟ್ರೋಫಿಗೆ ಸಂಬಂಧಿಸಿದಂತೆ, ನಾವು ಎಸಿಸಿ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಟ್ರೋಫಿಯನ್ನು ಹಸ್ತಾಂತರಿಸುವಂತೆ ಪದೇ ಪದೇ ವಿನಂತಿಸಿದ್ದೇವೆ. ಆದರೆ ನಮಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಸಿಸಿ ಅಧ್ಯಕ್ಷರು ಟ್ರೋಫಿಯನ್ನು ಹಸ್ತಾಂತರಿಸದಿದ್ದರೆ ಏನು ವ್ಯತ್ಯಾಸವಾಗುತ್ತದೆ? ಹೇಳಿ. ಏಕೆಂದರೆ ಏಷ್ಯಾಕಪ್ ಗೆದ್ದಿರುವುದು ನಾವು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹೀಗಾಗಿ ನಮಗೆ ಟ್ರೋಫಿ ಸಿಗದಿದ್ದರೂ, ನಾವೇ ವಿಜೇತರು ಎಂಬುದನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.

Follow Us