Asian Hockey Championship: 3-1 ಗೋಲುಗಳಿಂದ ಬದ್ಧವೈರಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ ಹಾಕಿ ತಂಡ!

Asian Hockey Championship: ಏಷ್ಯನ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಪಂದ್ಯಾವಳಿಯಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ.

Asian Hockey Championship: 3-1 ಗೋಲುಗಳಿಂದ ಬದ್ಧವೈರಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ ಹಾಕಿ ತಂಡ!
ಭಾರತ ಹಾಕಿ ತಂಡ
TV9kannada Web Team

| Edited By: pruthvi Shankar

Dec 17, 2021 | 5:35 PM

ಏಷ್ಯನ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಪಂದ್ಯಾವಳಿಯಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ. ಒಲಿಂಪಿಕ್ ಕಂಚಿನ ಪದಕ ವಿಜೇತ ತಂಡವು ನೆರೆಯ ದೇಶವನ್ನು 3-1 ಗೋಲುಗಳಿಂದ ಸೋಲಿಸಿದೆ. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ ಎರಡು ಮತ್ತು ಆಕಾಶದೀಪ್ ಸಿಂಗ್ ಒಂದು ಗೋಲು ಗಳಿಸಿದರು. ಭಾರತದ ಗೋಲ್‌ಕೀಪರ್ ಸೂರಜ್ ಕರ್ಕರೆ ಅಮೋಘ ಆಟ ಪ್ರದರ್ಶಿಸಿ ಪಂದ್ಯದಲ್ಲಿ ಹಲವು ಅತ್ಯುತ್ತಮ ಸೇವ್‌ಗಳನ್ನು ಮಾಡಿದರು. ಕೊರಿಯಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಭಾರತ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಅಂತರದಿಂದ ಸೋಲಿಸಿತ್ತು.

ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿತು ಮತ್ತು ಹರ್ಮನ್‌ಪ್ರೀತ್ ಸಿಂಗ್ ಎರಡನ್ನೂ ಗೋಲುಗಳಾಗಿ ಪರಿವರ್ತಿಸಿದರು. ಪೆನಾಲ್ಟಿ ಕಾರ್ನರ್ ವಿಷಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಟೂರ್ನಿಯಲ್ಲಿ 100 ಪರ್ಸೆಂಟೈಲ್ ದಾಖಲೆಯೊಂದಿಗೆ ಆಡುತ್ತಿದ್ದಾರೆ. ಭಾರತದ ಪರ ಆಕಾಶ್ ದೀಪ್ ಸಿಂಗ್ ಅವರು ಪಂದ್ಯದ ಏಕೈಕ ಫೀಲ್ಡ್ ಗೋಲು ಗಳಿಸಿದರು.

ಕೊರಿಯಾ ವಿರುದ್ಧ ಪಂದ್ಯ ಹೀಗಿತ್ತು ಟೋಕಿಯೊ ಒಲಿಂಪಿಕ್ಸ್ ಬಳಿಕ ಮೊದಲ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ, ಕೊರಿಯಾ ವಿರುದ್ಧ 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಟೀಮ್ ಇಂಡಿಯಾ ಒಂದು ಹಂತದಲ್ಲಿ 2-0 ಮುನ್ನಡೆಯಲ್ಲಿತ್ತು ಆದರೆ ಕೊರಿಯಾ ಅರ್ಧ ಸಮಯದ ನಂತರ ಅದ್ಭುತ ಪುನರಾಗಮನದೊಂದಿಗೆ ಪಂದ್ಯ ಡ್ರಾ ಮಾಡಿಕೊಂಡಿತ್ತು. ಭಾರತದ ಪರ ಲಲಿತ್ ಉಪಾಧ್ಯಾಯ ಮತ್ತು ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿದರು. ಮತ್ತೊಂದೆಡೆ, ಕೊರಿಯಾ ಪೆನಾಲ್ಟಿ ಕಾರ್ನರ್‌ನಲ್ಲಿ ಎರಡೂ ಗೋಲುಗಳನ್ನು ಗಳಿಸಿತು. ಕೊರಿಯಾ ಪರ ಜೊಂಗ್ಯುನ್ ಜಾಂಗ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, 46ನೇ ನಿಮಿಷದಲ್ಲಿ ಸುಂಗ್‌ಯುನ್ ಕಿಮ್ ಮತ್ತೊಂದು ಗೋಲು ದಾಖಲಿಸಿದರು.

ಭಾರತವು 2011 ರಲ್ಲಿ ಟೂರ್ನಮೆಂಟ್‌ನ ಆರಂಭದಿಂದಲೂ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಇದು 2016 ರಲ್ಲಿ ಕ್ವಾಂಟನ್ ಮತ್ತು 2018 ರಲ್ಲಿ ಮಸ್ಕತ್‌ನಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಡಿಸೆಂಬರ್ 19 ರಂದು ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ವಿರುದ್ಧ ನಡೆಯಲಿದೆ. ಡಿಸೆಂಬರ್ 21 ರಂದು ಸೆಮಿಫೈನಲ್ ಮತ್ತು ಡಿಸೆಂಬರ್ 22 ರಂದು ಫೈನಲ್ ನಡೆಯಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada