AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದು ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ

Australia vs Bangladesh ODI: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಅಂತರದಲ್ಲಿ ಸೋತಿದ್ದ ಆಸ್ಟ್ರೇಲಿಯಾ, ಕ್ಲೀನ್ ಸ್ವೀಪ್ ತಪ್ಪಿಸಲು ಕೊನೆಯ ಪಂದ್ಯ ಗೆದ್ದಿತು. ಕೂಪರ್ ಕೊನೊಲಿ ಅವರ 149 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 275 ರನ್ ಗುರಿಯನ್ನು ಕೊನೆಯ ಓವರ್‌ನಲ್ಲಿ ಬೆನ್ನಟ್ಟಿ ರೋಚಕ ಜಯ ಸಾಧಿಸಿತು. ಬಾಂಗ್ಲಾದೇಶ 274 ರನ್ ಗಳಿಸಿತ್ತು, ಲಿಟನ್ ದಾಸ್, ತೌಹಿದ್ ಹೃದಯ್ ಪ್ರಮುಖ ರನ್ ಗಳಿಸಿದ್ದರು.

ಬಾಂಗ್ಲಾ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದು ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ
Ban Vs Aus
ಪೃಥ್ವಿಶಂಕರ
|

Updated on:Jun 14, 2026 | 8:04 PM

Share

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ (Australia vs Bangladesh ODI) ತಂಡ 2-0 ಅಂತರದಿಂದ ಏಕದಿನ ಸರಣಿ ಸೋತಿತ್ತು. ಆದರೆ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಲು ಆಸ್ಟ್ರೇಲಿಯಾ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಕೂಪರ್ ಕನೋಲಿ (Cooper Connolly) ಅವರ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಕೊನೆಯ ಓವರ್​ನಲ್ಲಿ ಗುರಿ ಬೆನ್ನಟ್ಟಿ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 274 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 50ನೇ ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

274 ರನ್​ ಕಲೆಹಾಕಿದ ಬಾಂಗ್ಲಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕ ಸೌಮ್ಯ ಸರ್ಕಾರ್ ನಾಲ್ಕು ಎಸೆತಗಳಲ್ಲಿ ಎರಡು ರನ್ ಗಳಿಸಿ ಔಟಾದರು. ತಾಂಜಿದ್ ಹಸನ್ ಕೂಡ 20 ಎಸೆತಗಳಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್ ಕೂಡ 24 ರನ್​ಗಳಿಗೆ ಅಂತ್ಯವಾಯಿತು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಿಟನ್ ದಾಸ್ ಅರ್ಧಶತಕ ಗಳಿಸಿ ಬಾಂಗ್ಲಾದೇಶದ ಇನ್ನಿಂಗ್ಸ್ ಸ್ಥಿರಗೊಳಿಸಿದರು.

ಲಿಟನ್ ದಾಸ್ 78 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿದರೆ, ತೌಹಿದ್ ಹೃದಯ್ ಕೂಡ 88 ಎಸೆತಗಳಲ್ಲಿ 83 ರನ್ ಗಳಿಸಿ ಲಿಟನ್​ಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ, ಮೊಸದ್ದೇಕ್ ಹೊಸೈನ್ ಕೂಡ 51 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡವನ್ನು 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 274 ರನ್​ಗಳಿಗೆ ಕೊಂಡೊಯ್ದರು.

IND vs AFG: ಏಕದಿನದಲ್ಲಿ 37 ವರ್ಷಗಳ ಹಳೆಯ ದಾಖಲೆ ಮುರಿದ ರೋಹಿತ್ ಶರ್ಮಾ

149 ರನ್ ಬಾರಿಸಿದ ಕೊನೊಲಿ

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕಳಪೆ ಆರಂಭವನ್ನು ಪಡೆಯಿತು. ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಆದರೆ ಮತ್ತೊಬ್ಬ ಆರಂಭಿಕ ಕೂಪರ್ ಕೊನೊಲಿ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 149 ರನ್ ಬಾರಿಸಿದರು. ಆದಾಗ್ಯೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮ್ಯಾಟ್ ರೆನ್‌ಶಾ ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಅಲೆಕ್ಸ್ ಕ್ಯಾರಿ ಕೂಡ 16 ಎಸೆತಗಳಲ್ಲಿ 8 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ 29 ರನ್​ಗಳಿಗೆ ಸುಸ್ತಾದರು. ಗ್ರೀನ್ ಇನ್ನಿಂಗ್ಸ್ 27 ರನ್​ಗಳಿಗೆ ಅಂತ್ಯವಾದರೆ ಆಲಿವರ್ ಪೀಕ್ ಕೂಡ 27 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಆಸ್ಟ್ರೇಲಿಯಾ 49.3 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಪಂದ್ಯವನ್ನು ಒಂದು ವಿಕೆಟ್​ನಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Sun, 14 June 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ
ಶಾಂತಿ ಮಾತುಕತೆ ಅಂತಿಮವಾಗಿಲ್ಲ, ಇವತ್ತೇ ಸಹಿ ಹಾಕಲ್ಲ ಎಂದ ಇರಾನ್
ಶಾಂತಿ ಮಾತುಕತೆ ಅಂತಿಮವಾಗಿಲ್ಲ, ಇವತ್ತೇ ಸಹಿ ಹಾಕಲ್ಲ ಎಂದ ಇರಾನ್
ರಸ್ತೆಯಲ್ಲಿ ಕಸಗುಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ರಸ್ತೆಯಲ್ಲಿ ಕಸಗುಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್