ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ರಮೇಶ ಜಾರಕಿಹೊಳಿ ಹೇಳಿದ್ದೇನು ಗೊತ್ತಾ?
ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದಲ್ಲಿ ರೇಸ್ನಲ್ಲಿ ಸತೀಶ್ ಜಾರಕಿಹೊಳಿಗೆ (Satish Jarkiholi) ಕೊನೆ ಕ್ಷಣದಲ್ಲಿ ಕೈತಪ್ಪಿದೆ. ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಈ ಎರಡರಲ್ಲಿ ಒಂದು ಆಫರ್ ನೀಡಲಾಗಿತ್ತು. ಆದ್ರೆ, ಸತೀಸ್ ಜಾರಕಿಹಿಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ಹೈಕಮಾಂಡ್ ಅಂತಿಮವಾಗಿ ಸತೀಶ್ ಜಾರಕಿಹೊಳಿ ಬದಲಿಗೆ ಬಿಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟಕಟ್ಟಿದೆ. ಇನ್ನು ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ರಮೇಶ್ ಜಾರಕಿಹೊಳಿ (Ramesh Jarkiholi) ಖುಷಿ ಪಟ್ಟಿದ್ದಾರೆ.
ದಾವಣಗೆರೆ, (ಜೂನ್ 14): ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದಲ್ಲಿ ರೇಸ್ನಲ್ಲಿ ಸತೀಶ್ ಜಾರಕಿಹೊಳಿಗೆ (Satish Jarkiholi) ಕೊನೆ ಕ್ಷಣದಲ್ಲಿ ಕೈತಪ್ಪಿದೆ. ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಈ ಎರಡರಲ್ಲಿ ಒಂದು ಆಫರ್ ನೀಡಲಾಗಿತ್ತು. ಆದ್ರೆ, ಸತೀಸ್ ಜಾರಕಿಹಿಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ಹೈಕಮಾಂಡ್ ಅಂತಿಮವಾಗಿ ಸತೀಶ್ ಜಾರಕಿಹೊಳಿ ಬದಲಿಗೆ ಬಿಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟಕಟ್ಟಿದೆ. ಇನ್ನು ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ರಮೇಶ್ ಜಾರಕಿಹೊಳಿ (Ramesh Jarkiholi) ದೇವರು ಒಳ್ಳೆಯದು ಮಾಡಿದ್ದಾನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿಂದು ಮಾತನಾಡಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗದೇ ಇರುವುದು ಒಳ್ಳೆಯದಾಗಿದೆ. ಕಾರಣ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸತೀಶ್ ಜಾರಕಿಹೊಳಿ ಕೆಪಿಸಿಸಿ ಆಧ್ಯಕ್ಷ ಆಗದೇ ಇರುವುದು ದೇವರೇ ಒಳ್ಳೆಯದನ್ನ ಮಾಡಿದ್ದಾನೆ. ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ನೀಡಿದ್ದರೇ ನಮಗ ತೊಂದರೆ ಆಗುತ್ತಿತ್ತು ಎಂದಿದ್ದಾರೆ.
