Australian Open 2023: ಆಸ್ಟ್ರೇಲಿಯಾ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿದ ಸಾನಿಯಾ-ಬೋಪಣ್ಣ

| Updated By: ಝಾಹಿರ್ ಯೂಸುಫ್

Updated on: Jan 25, 2023 | 9:31 PM

Australian Open 2023: 2009 ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಹಾಗೆಯೇ ಇದುವರೆಗೆ 7 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಸಾನಿಯಾ ಮಿರ್ಜಾ ಟ್ರೋಫಿಯೊಂದಿಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.

Australian Open 2023: ಆಸ್ಟ್ರೇಲಿಯಾ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿದ ಸಾನಿಯಾ-ಬೋಪಣ್ಣ
Rohan Bopanna - Sania Mirza
Follow us on

Australian Open 2023: ಭಾರತದ ಟೆನಿಸ್ ತಾರೆಗಳಾದ ಸಾನಿಯಾ ಮಿರ್ಜಾ (Sania Mirza) ಮತ್ತು ರೋಹನ್ ಬೋಪಣ್ಣ (Rohan Bopanna) ಜೋಡಿ ಆಸ್ಟ್ರೇಲಿಯನ್ ಓಪನ್ 2023 ರ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸೆಮಿಫೈನಲ್‌ನಲ್ಲಿ ಸಾನಿಯಾ-ರೋಹನ್ ಬ್ರಿಟನ್‌ನ ಆನ್‌ ಸ್ಕುಪ್‌ಸ್ಕಿ ಮತ್ತು ಅಮೆರಿಕದ ಡಿ ಕರಾವ್‌ಜಿಕ್‌ ಜೋಡಿಯನ್ನು 7-6, 6-7, 10-6 ಅಂತರದಲ್ಲಿ ಮಣಿಸಿದರು. ಈ ಮೂಲಕ ಭಾರತೀಯ ತಾರೆಯರು ಫೈನಲ್​ಗೆ ಎಂಟ್ರಿ ಕೊಟ್ಟರು. ವಿಶೇಷ ಎಂದರೆ ಇದು ಸಾನಿಯಾ ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್
ಟೂರ್ನಿಯಾಗಿದೆ.

ಈ ಟೂರ್ನಿ ಆರಂಭಕ್ಕೂ ಮುನ್ನವೇ ಅವರು ನಿವೃತ್ತಿ ಘೋಷಿಸಿದ್ದರು. ಇದೀಗ ಫೈನಲ್ ಪ್ರವೇಶಿಸಿರುವುದರಿಂದ ಪ್ರಶಸ್ತಿಯೊಂದಿಗೆ ಗ್ರ್ಯಾಂಡ್ ಸ್ಲಾಮ್​ಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಈ ಟೂರ್ನಿಯ ಬಳಿಕ ಸಾನಿಯಾ ಮಿರ್ಜಾ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಫೆಬ್ರವರಿ 19 ರಂದು ಪ್ರಾರಂಭವಾಗುವ WTA 1000 ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ಅವರು ವೃತ್ತಿ ಬದುಕಿ ವಿದಾಯ ಹೇಳಲಿದ್ದಾರೆ.

ಡಬಲ್ಸ್​ನಿಂದ ಔಟ್:

ಇದನ್ನೂ ಓದಿ
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ಮಹಿಳೆಯರ ಡಬಲ್ಸ್‌ನಿಂದ ಸಾನಿಯಾ ಮಿರ್ಜಾ ಈಗಾಗಲೇ ಹೊರಬಿದ್ದಿದ್ದಾರೆ. ಈ ಬಾರಿ ಸಾನಿಯಾ ಕಜಕಿಸ್ತಾನ್ ಜೊತೆಗಾರ್ತಿ ಅನ್ನಾ ಡ್ಯಾನಿಲಿನಾ ಅವರೊಂದಿಗೆ ಮಹಿಳಾ ಡಬಲ್ಸ್​ನಲ್ಲಿ ಕಣಕ್ಕಿಳಿದಿದ್ದರು. ಆದರೆ ಈ ಜೋಡಿಯು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಬೆಲ್ಜಿಯಂನ ಅಲಿಸನ್ ವ್ಯಾನ್ ಯುಟ್ವಾಂಕ್ ಮತ್ತು ಉಕ್ರೇನ್‌ನ ಅನ್ಹೆಲಿನಾ ಕಲಿನಿನಾ ವಿರುದ್ಧ 4-6, 6-4, 2-6 ಅಂತರದಿಂದ ಸೋಲನುಭವಿಸಿತು.

ಪ್ರಶಸ್ತಿ ಸುತ್ತಿನಲ್ಲಿ ಸಾನಿಯಾ:

ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಎರಡನೇ ಬಾರಿಗೆ ಒಟ್ಟಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಲು ಕೇವಲ ಒಂದು ಗೆಲುವಿನ ದೂರದಲ್ಲಿದ್ದಾರೆ. ಇಬ್ಬರೂ 6 ವರ್ಷಗಳ ಹಿಂದೆ 2017 ರಲ್ಲಿ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಇನ್ನು 2009 ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಹಾಗೆಯೇ ಇದುವರೆಗೆ 7 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಸಾನಿಯಾ ಮಿರ್ಜಾ ಟ್ರೋಫಿಯೊಂದಿಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.