AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಎಲ್ಲವೂ ಬಂದ್; ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತ ಫ್ರಾಂಚೈಸಿಗಳು

IPL Privacy Clampdown: ಬಿಸಿಸಿಐನ ಕಟ್ಟುನಿಟ್ಟಿನ ಸೂಚನೆಗಳ ನಂತರ ಐಪಿಎಲ್ ಫ್ರಾಂಚೈಸಿಗಳು ತಂಡದ ಗೌಪ್ಯತೆ ಕಾಪಾಡಲು ಹಲವು ಕ್ರಮಗಳನ್ನು ಜಾರಿಗೊಳಿಸಿವೆ. ಡ್ರೆಸ್ಸಿಂಗ್ ರೂಮ್‌ಗೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಆಟಗಾರರಿಗೆ ವ್ಲಾಗ್ ಮಾಡಲು ನಿರ್ಬಂಧ ವಿಧಿಸಲಾಗಿದೆ. ಅರ್ಷದೀಪ್ ಸಿಂಗ್ ವ್ಲಾಗ್ ವಿವಾದದ ನಂತರ ಈ ಕ್ರಮ ಇನ್ನಷ್ಟು ಬಲಗೊಂಡಿದೆ. ಹನಿ ಟ್ರ್ಯಾಪ್ ಅಪಾಯಗಳನ್ನು ತಪ್ಪಿಸಲು ಹಾಗೂ ತಂಡದ ಮಾಲೀಕರ ನಡೆವಳಿಕೆಗೂ ಬಿಸಿಸಿಐ ಹೊಸ ನಿಯಮಗಳನ್ನು ರೂಪಿಸಿದೆ.

IPL 2026: ಎಲ್ಲವೂ ಬಂದ್; ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತ ಫ್ರಾಂಚೈಸಿಗಳು
Ipl 2026
ಪೃಥ್ವಿಶಂಕರ
|

Updated on: May 08, 2026 | 6:02 PM

Share

ತಂಡದ ಬಸ್​ಗಳಲ್ಲಿ ಹಾಗೂ ಡ್ರೆಸಿಂಗ್ ರೂಮ್​ಗಳಲ್ಲಿ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ದೂರನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿ ಎಲ್ಲಾ ಫ್ರಾಂಚೈಸಿಗಳಿಗೆ ಖಡಕ್ ಸಂದೇಶ ಕಳುಹಿಸಿತ್ತು. ಇದರ ಜೊತೆಗೆ ತಂಡದ ಗೌಪತ್ಯೆಯನ್ನು ಕಾಪಾಡಿಕ್ಕೊಳ್ಳುವಂತೆ ಹಾಗೂ ಡ್ರೆಸಿಂಗ್ ರೂಮ್ ಸಂಭಾಷಣೆ ಹೊರಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟಪ್ಪಣೆಯನ್ನು ಹೊರಡಿಸಿತ್ತು. ಇದೀಗ ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತುಕೊಂಡಿರುವ ಐಪಿಎಲ್ (IPL) ಫ್ರಾಂಚೈಸಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಅದರಂತೆ ಆಟಗಾರರು ವ್ಲಾಗ್ ಮಾಡುವುದನ್ನು ನಿಷೇಧಿಸಿವೆ. ಹಾಗೆಯೆ ಕೆಲವು ಫ್ರಾಂಚೈಸಿಗಳು ಡ್ರೆಸಿಂಗ್ ರೂಮ್​ಗೆ ಅಪರಿಚಿತರ ಪ್ರವೇಶವನ್ನು ನಿಷೇಧಿಸಿವೆ ಎಂದು ವರದಿಯಾಗಿದೆ.

ವ್ಲಾಗ್ ಮಾಡುವುದಕ್ಕೆ ತಡೆ

ಇದರ ಪರಿಣಾಮವಾಗಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್​ ವ್ಲಾಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಅರ್ಷದೀಪ್ ಪಂದ್ಯ ಮುಗಿದ ನಂತರ ತಂಡದ ಆಟಗಾರರೊಂದಿಗೆ ಸಂವಹನ ನಡೆಸುವುದು. ಹಾಗೆಯೇ ತಂಡದ ವಿಮಾನ ಪ್ರಯಾಣದಲ್ಲಿ, ತಂಡ ವಾಸ್ತವ್ಯ ಹೂಡಿರುವ ಹೋಟೆಲ್‌ಗಳಲ್ಲಿಯೂ ತಮಾಷದಾಯಕ ವೀಡಿಯೊಗಳನ್ನು ಚಿತ್ರೀಕರಿಸಿ ಅವುಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಬಿಡುತ್ತಿರುತ್ತಾರೆ.

ಅದರಂತೆ ಇತ್ತೀಚೆಗೆ ಪಂಜಾಬ್ ಕಿಂಗ್ಸ್‌ ತಂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋವನ್ನು ಅರ್ಷದೀಪ್ ಚಿತ್ರೀಕರಿಸಿದ್ದರು. ಈ ವಿಡಿಯೋದಲ್ಲಿ ಯುಜ್ವೇಂದ್ರ ಚಾಹಲ್ ವ್ಯಾಪಿಂಗ್ ಮಾಡುತ್ತಿರುವುದು ರೆಕಾರ್ಡ್​ ಆಗಿತ್ತು. ವೈರಲ್ ಆದ ಬಳಿಕ ಈ ವೀಡಿಯೊ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಾಗಾಗಿ ಅರ್ಷದೀಪ್​ಗೆ ವ್ಲಾಗ್ ಮಾಡದಂತೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.

ಬಿಸಿಸಿಐ ಖಡಕ್ ಎಚ್ಚರಿಕೆ

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ, ಆಟಗಾರರ ಕುಟುಂಬ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗಳು ತಂಡಕ್ಕೆ ಸಂಬಂಧಪಟ್ಟ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಸಹ ನಿಷೇಧಿಸಿದೆ. ಹನಿ ಟ್ರಾಪ್‌ಗಳ ಅಪಾಯದಿಂದಾಗಿ ಐಪಿಎಲ್‌ನಲ್ಲಿ ಆಟಗಾರರು, ಸಹಾಯಕ ಸಿಬ್ಬಂದಿ ಸದಸ್ಯರು ಮತ್ತು ತಂಡದ ಅಧಿಕಾರಿಗಳ ಹೋಟೆಲ್ ಕೋಣೆಗಳಿಗೆ ಅಪರಿಚಿತರು ಪ್ರವೇಶಿಸುವುದನ್ನು ಬಿಸಿಸಿಐ ನಿಷೇಧಿಸಿದೆ. ಇದರ ಜೊತೆಗೆ ತಂಡದ ಮಾಲೀಕರಿಗೂ ಬಿಸಿಸಿಐ ಸೂಕ್ಷ್ಮ ಎಚ್ಚರಿಕೆಗಳನ್ನು ನೀಡಿದೆ.

IPL 2026: ಉಚಿತ ಟಿಕೆಟ್​ಗಳ ಬೇಡಿಕೆಯಿಂದಲೇ ಫೈನಲ್ ಪಂದ್ಯ ಶಿಫ್ಟ್; ಬಿಸಿಸಿಐ ಸ್ಪಷ್ಟನೆ

ಅದರಂತೆ ಐಪಿಎಲ್ ಫ್ರಾಂಚೈಸ್ ಮಾಲೀಕರು ಮತ್ತು ಅವರ ಪ್ರತಿನಿಧಿಗಳು ಪಂದ್ಯಗಳ ಸಮಯದಲ್ಲಿ ಡಗೌಟ್, ಡ್ರೆಸ್ಸಿಂಗ್ ರೂಮ್ ಅಥವಾ ಮೈದಾನದಲ್ಲಿ ಆಟಗಾರರು ಅಥವಾ ತಂಡದ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದನ್ನು ಅಥವಾ ದೈಹಿಕವಾಗಿ ಸಮೀಪಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಎಲ್ಲಾ ಮಾಲೀಕರು ಪ್ರೋಟೋಕಾಲ್ ಅನ್ನು ಪಾಲಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ