AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಫಾ ವಿಶ್ವಕಪ್​ನಿಂದ ಬ್ರೆಜಿಲ್ ಔಟ್; ಮೈದಾನದಲ್ಲೇ ಕಣ್ಣೀರಿಟ್ಟು ಶಾಕಿಂಗ್ ಹೇಳಿಕೆ ನೀಡಿದ ನೇಮಾರ್..!

FIFA World Cup 2022: ನಿಜ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ. ಈ ಕ್ಷಣದಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ನಾನು ರಾಷ್ಟ್ರೀಯ ತಂಡದಲ್ಲಿ ಮತ್ತೆ ಆಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ ನಾನು ಮತ್ತೆ ತಂಡಕ್ಕೆ ಹಿಂತಿರುಗುತ್ತೇನೆ ಎಂದು 100 ಪ್ರತಿಶತ ಭರವಸೆ ನೀಡುವುದಿಲ್ಲ ಎಂದು ನೇಮಾರ್ ಹೇಳಿದ್ದಾರೆ.

ಫಿಫಾ ವಿಶ್ವಕಪ್​ನಿಂದ ಬ್ರೆಜಿಲ್ ಔಟ್; ಮೈದಾನದಲ್ಲೇ ಕಣ್ಣೀರಿಟ್ಟು ಶಾಕಿಂಗ್ ಹೇಳಿಕೆ ನೀಡಿದ ನೇಮಾರ್..!
Neymar
TV9 Web
| Updated By: ಪೃಥ್ವಿಶಂಕರ|

Updated on:Dec 10, 2022 | 12:27 PM

Share

ಕಳೆದ ತಿಂಗಳು ಕತಾರ್‌ನಲ್ಲಿ ಫಿಫಾ ವಿಶ್ವಕಪ್ (FIFA World Cup 2022) ಆರಂಭವಾದಾಗ ಯಾವ ತಂಡ ಚಾಂಪಿಯನ್ ಆಗಬಹುದು ಎಂಬುದಕ್ಕೆ ಹಲವು ಜನ ಬ್ರೆಜಿಲ್ ತಂಡದತ್ತ ಬೆರಳು ಮಾಡಿದ್ದರು. ಆದರೆ ಶುಕ್ರವಾರ ನಡೆದ ಕ್ರೊವೇಷಿಯಾ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವುದರೊಂದಿಗೆ ಬ್ರೆಜಿಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ರಾಷ್ಟ್ರೀಯ ತಂಡದ ಪರ ಚಾಂಪಿಯನ್ ಪಟ್ಟಕ್ಕೇರುವ ದಿಗ್ಗಜ ಆಟಗಾರ ನೇಮಾರ್ (Neymar) ಕನಸ್ಸು ಕನಸಾಗಿಯೇ ಉಳಿಯುಂವತ್ತಾಗಿದೆ. ತಂಡ ಸೋತ ಬಳಿಕ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದ ಬ್ರೆಜಿಲ್‌ನ ಕೋಚ್‌ ಟೈಟ್‌ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಆದರೀಗ ನೇಮಾರ್ ನೀಡಿರುವ ಹೇಳಿಕೆ ಅಭಿಮಾನಿಗಳನ್ನು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿದೆ. ಸೋಲಿನ ಬಳಿಕ ಮಾತನಾಡಿದ ನೇಮಾರ್, ಇನ್ನು ಮುಂದೆ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯುವುದು ಗ್ಯಾರಂಟಿ ಇಲ್ಲ ಎಂದು ಹೇಳುವ ಮೂಲಕ ಫುಟ್ಬಾಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಕ್ರೊವೇಷಿಯಾ ವಿರುದ್ಧದ ಸೋಲಿನ ನಂತರ ಮೈದಾನದಲ್ಲೇ ಕಣ್ಣೀರಿಟ್ಟ ನೇಮಾರ್ ಅವರನ್ನು ತಂಡದ ಸಹ ಆಟಗಾರರು ಸಮಾಧಾನಪಡಿಸಲು ಮುಂದಾಗಿದ್ದರು. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 124ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ನೇಮಾರ್ ಏಕಾಂಗಿ ಪ್ರಯತ್ನದಿಂದ ಬ್ರೆಜಿಲ್ ತಂಡವನ್ನು ಕ್ವಾರ್ಟರ್‌ಫೈನಲ್‌ಗೆ ಕರೆತಂದಿದ್ದರು. ಆದರೆ ಅಂತಿಮವಾಗಿ ಕ್ರೊಯೇಷಿಯಾ ವಿರುದ್ಧ ಸೋಲುವುದರೊಂದಿಗೆ ಬ್ರೆಜಿಲ್ ತನ್ನ ವಿಶ್ವಕಪ್ ಪ್ರಯಾಣ ಮುಗಿಸಿದೆ.

ಯಾವುದಕ್ಕೂ ಭರವಸೆ ನೀಡಲಾರೆ

ಪಂದ್ಯದ ಬಳಿಕ ಇಎಸ್‌ಪಿಎನ್‌ನೊಂದಿಗೆ ಮಾತನಾಡಿದ ನೇಮರ್, ನಿಜ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ. ಈ ಕ್ಷಣದಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ನಾನು ರಾಷ್ಟ್ರೀಯ ತಂಡದಲ್ಲಿ ಮತ್ತೆ ಆಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ ನಾನು ಮತ್ತೆ ತಂಡಕ್ಕೆ ಹಿಂತಿರುಗುತ್ತೇನೆ ಎಂದು 100 ಪ್ರತಿಶತ ಭರವಸೆ ನೀಡುವುದಿಲ್ಲ. ಪೆನಾಲ್ಟಿಯಲ್ಲಿ ಗೋಲು ಗಳಿಸದಿರುವುದು ಅತೀವ ನೋವು ತಂದಿದೆ. ಕಳೆದ ವಿಶ್ವಕಪ್‌ನಲ್ಲಿ ಅನುಭವಿಸಿದ ಯಾತನೆಗಿಂತಲೂ, ಈ ವಿಶ್ವಕಪ್​ನ ಸೋಲು ಸಾಕಷ್ಟು ನೋವು ನೀಡಿದೆ. ಈ ಕ್ಷಣವನ್ನು ವಿವರಿಸಲು ಪದಗಳು ಸಿಗುತ್ತಿಲ್ಲ. ನಾವು ಕೊನೆಯ ಕ್ಷಣದವರೆಗು ಗೆಲುವಿಗಾಗಿ ಹೋರಾಡಿದ್ದೇವೆ. ಅಲ್ಲದೆ ನನ್ನ ತಂಡದ ಸದಸ್ಯರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ನೇಮಾರ್ ತಮ್ಮ ನೋವು ತೊಡಿಕೊಂಡಿದ್ದಾರೆ.

IPL 2023: ಆಂಗ್ಲರ ಮೇಲೆ ಹದ್ದಿನ ಕಣ್ಣು; ಮಿನಿ ಹರಾಜಿನಲ್ಲಿ ಈ ಆಟಗಾರರು ಕೋಟಿ ಒಡೆಯರಾಗುವುದು ಗ್ಯಾರಂಟಿ..!

ವಾಸ್ತವವಾಗಿ ಈ ವಿಶ್ವಕಪ್ ಅನ್ನು ನೇಮಾರ್ ಅವರ ಕೊನೆಯ ವಿಶ್ವಕಪ್ ಎಂದು ಪರಿಗಣಿಸಲಾಗಿದೆ. ಏಕೆಂದರೆ 2026ರ ವಿಶ್ವಕಪ್ ವೇಳೆಗೆ ಅವರಿಗೆ 34 ವರ್ಷ ವಯಸ್ಸಾಗಿರಲಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಮುಂದಿನ ವಿಶ್ವಕಪ್ ಆಡುವ ಬಗ್ಗೆ ಅನುಮಾನವಿದೆ.

ಆರಂಭದಲ್ಲಿಯೇ ನೇಮಾರ್​ಗೆ ಇಂಜುರಿ

ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಬ್ರೆಜಿಲ್ ಫಿಫಾದಿಂದ ಹೊರಗುಳಿದಿರುವುದು ತಂಡದ ಅಭಿಮಾನಿಗಳಿಗೆ ಅತ್ಯಂತ ನಿರಾಶಾದಾಯಕ ಕ್ಷಣವಾಗಿತ್ತು. ಇದಕ್ಕೆ ಪೂರಕವಾಗಿ ಅನೇಕ ಅಭಿಮಾನಿಗಳು ಕಣ್ಣೀರು ಸುರಿಸುತ್ತಿರುವುದು ಕಂಡು ಬಂತು. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ನೇಮಾರ್ ಅಮೋಘ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಾಗ ಇದೇ ಕಣ್ಣುಗಳಲ್ಲಿ ಸಂತಸ ತುಂಬಿತ್ತು. ಆದರೆ ಪಂದ್ಯದ ನಂತರ ಅದೇ ಕಣ್ಣಲ್ಲಿ ನೋವಿನ ಕಣ್ಣೀರು ತುಂಬಿತ್ತು.

ಅಲ್ಲದೆ ಈ ವಿಶ್ವಕಪ್​ ನೇಮಾರ್​ಗೆ ವಿಶೇಷವೇನೂ ಆಗಿರಲಿಲ್ಲ. ಏಕೆಂದರೆ ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಂಡಿದ್ದ ನೇಮಾರ್ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಆ ಬಳಿಕ ದಕ್ಷಿಣ ಕೊರಿಯಾ ವಿರುದ್ಧದ 16 ರ ಸುತ್ತಿನ ಪಂದ್ಯದಲ್ಲಿ ನೇಮಾರ್ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Sat, 10 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ