FIFA World Cup 2022: ಬಂಧನವಾಗಿದ್ದ ಯುಎಸ್ ಪತ್ರಕರ್ತ ಗ್ರಾಂಟ್ ವಾಲ್ ಕತಾರ್‌ನಲ್ಲಿ ನಿಧನ

LGBTQ ಸಮುದಾಯವನ್ನು ಬೆಂಬಲಿಸಲು ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿದ್ದಕ್ಕಾಗಿ ಕತಾರ್‌ನಲ್ಲಿ ಬಂಧನಕ್ಕೊಳಗಾದ US ಪತ್ರಕರ್ತ ಗ್ರಾಂಟ್ ವಾಲ್ ಅವರು FIFA ವಿಶ್ವಕಪ್ ವರದಿ ಮಾಡುವಾಗ ನಿಧನರಾದರು ಎಂದು ಅವರ ಸಹೋದರ ತಿಳಿಸಿದ್ದಾರೆ

FIFA World Cup 2022: ಬಂಧನವಾಗಿದ್ದ ಯುಎಸ್ ಪತ್ರಕರ್ತ ಗ್ರಾಂಟ್ ವಾಲ್ ಕತಾರ್‌ನಲ್ಲಿ ನಿಧನ
journalist Grant Wall
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 10, 2022 | 10:51 AM

ಕತಾರ್‌: LGBTQ ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿದ್ದಕ್ಕಾಗಿ ಕತಾರ್‌ನಲ್ಲಿ ಬಂಧನಕ್ಕೊಳಗಾದ US ಪತ್ರಕರ್ತ ಗ್ರಾಂಟ್ ವಾಲ್ ಅವರು FIFA ವಿಶ್ವಕಪ್ ವರದಿ ಮಾಡುವಾಗ ನಿಧನರಾದರು ಎಂದು ಅವರ ಸಹೋದರ ತಿಳಿಸಿದ್ದಾರೆ. ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕವರ್ ಮಾಡುವಾಗ 48 ವರ್ಷದ ಗ್ರಾಂಟ್ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಮಾಜಿ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಪತ್ರಕರ್ತನ ಸಾವಿನಲ್ಲಿ ಕತಾರ್ ಸರ್ಕಾರವು ಭಾಗಿಯಾಗಿದೆ ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ. ನನ್ನ ಹೆಸರು ಎರಿಕ್ ವಾಲ್. ನಾನು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೇನೆ. ನಾನು ಗ್ರಾಂಟ್ ವಾಲ್ ಅವರ ಸಹೋದರ. ನಾನು ಸಲಿಂಗಕಾಮಿ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ. ನನ್ನ ಸಹೋದರ ವಿಶ್ವಕಪ್‌ಗೆ ಮಳೆಬಿಲ್ಲು ಶರ್ಟ್ ಧರಿಸಲು ನಾನು ಕಾರಣ. ನನ್ನ ಸಹೋದರ ಆರೋಗ್ಯವಾಗಿದ್ದ. ಅವನಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಅವನು ನನಗೆ ಹೇಳಿದನು. ನನ್ನ ಸಹೋದರ ಆಕಸ್ಮಿಕವಾಗಿ ಸತ್ತಿದ್ದಾನೆ ಎಂದು ನಾನು ನಂಬುವುದಿಲ್ಲ, ಅವನು ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ವಿಶ್ವಕಪ್‌ನ ಆರಂಭದಲ್ಲಿ, ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ವೇಲ್ಸ್ ವಿರುದ್ಧದ ಯುನೈಟೆಡ್ ಸ್ಟೇಟ್ಸ್‌ನ ಆರಂಭಿಕ ಪಂದ್ಯಕ್ಕೆ ವಿಶ್ವಕಪ್ ಭದ್ರತೆಯು ತನಗೆ ಪ್ರವೇಶವನ್ನು ನಿರಾಕರಿಸಿತು ಮತ್ತು ತನ್ನ ರೇನ್‌ಬೋ ಶರ್ಟ್ ಅನ್ನು ತೆಗೆಯುವಂತೆ ಕೇಳಿಕೊಂಡಿದ್ದಾರೆ ಎಂದು ಗ್ರಾಂಟ್ ಹೇಳಿದ್ದರು. ಘಟನೆಯ ಬಗ್ಗೆ ಟ್ವೀಟ್ ಮಾಡಿದಕ್ಕೆ ಅವರ ಫೋನ್ ವಶಪಡಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಇದನ್ನು ಓದಿ:  ಫಿಫಾ ವಿಶ್ವಕಪ್​ನಿಂದ ಹೊರಬಿದ್ದ ಬ್ರೆಜಿಲ್, ನೆದರ್ಲೆಂಡ್ಸ್: ಸೆಮಿ ಫೈನಲ್​ಗೇರಿದ ಕ್ರೊವೇಷ್ಯಾ, ಅರ್ಜೆಂಟೀನಾ

ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ಕ್ಷಮೆಯಾಚಿಸಿದ ನಂತರ ಅವರನ್ನು ಕ್ರೀಡಾಂಗಣಕ್ಕೆ ಹೋಗಲು ಅವಕಾಶ ನೀಡಿದ್ದಾರೆ. ಗ್ರಾಂಟ್ ಆಸ್ಪತ್ರೆಯಲ್ಲಿ ಅಥವಾ ದಾರಿಯಲ್ಲಿಯೇ ಸಾವನ್ನಪ್ಪಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾವು ಈ ಬಗ್ಗೆ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಎರಿಕ್ ಹೇಳಿದರು. ಗ್ರಾಂಟ್ ವಾಲ್ ಕ್ರೀಡಾಂಗಣದಲ್ಲಿ ಕುಸಿದುಬಿದ್ದಾಗ ಸಿಪಿಆರ್ ನೀಡಲಾಯಿತು, ನಂತರ ಉಬರ್ ಆಸ್ಪತ್ರೆಗೆ ಕರೆದೊಯ್ದರು ಎಂದು ಹೇಳಲಾಗಿದೆ. ಸೆಲೀನ್ ಪ್ರಕಾರ ಆಸ್ಪತ್ರೆಗೆ ಸಾಗಿಸುವಾಗ ಮರಣ ಹೊಂದಿದ್ದಾರೆ ಎಂದು ಹೇಳಿದ್ದಾರೆ. ನಾವು ಸರ್ಕಾರದೊಂದಿಗೆ ಮಾತನಾಡಿದ್ದೇವೆ ಮತ್ತು ಸೆಲಿನ್ ರಾನ್ ಕ್ಲೇನ್ ಶ್ವೇತಭವನದೊಂದಿಗೆ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ

US ಫುಟ್‌ಬಾಲ್ ಸಂಸ್ಥೆಯು ಹೇಳಿಕೆಯೊಂದರಲ್ಲಿ ಗ್ರಾಂಟ್‌ನ ಸಾವಿನ ಬಗ್ಗೆ ತಿಳಿದು ತುಂಬಾ ನೋವಾಗಿದೆ ಎಂದು ಹೇಳಿದೆ, ಅವರು ಮನಸ್ಸಿನಲ್ಲಿ ಶ್ವಾಶತವಾಗಿ ಉಳಿಯುತ್ತಾರೆ ಎಂದು ಹೇಳಿದರು. ನಾವು ಗ್ರಾಂಟ್ ವಾಲ್ ಅನ್ನು ಕಳೆದುಕೊಂಡಿದ್ದೇವೆ ಎಂದು ತಿಳಿದು ಇಡೀ ಯುಎಸ್ ಎದೆಗುಂದಿದೆ ಎಂದು ಯುಎಸ್ ಸಾಕರ್ ಫೆಡರೇಶನ್ ಹೇಳಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಕರ್‌ಗಾಗಿ ಗ್ರಾಂಟ್‌ರ ಉತ್ಸಾಹಕತೆ ಮತ್ತು ನಮ್ಮ ಕ್ರೀಡಾ ಬಗ್ಗೆ ಅವರಲ್ಲಿದ್ದ ಅಭಿಮಾನ ಅವರ ಬದ್ಧತೆ, ಆಟದ ಬಗ್ಗೆ ಅವರಲ್ಲಿದ್ದ ಆಸಕ್ತಿ ಮತ್ತು ಗೌರವ ಹೆಚ್ಚು ಪಾತ್ರವನ್ನು ವಹಿಸಿದೆ. ಪ್ರಮುಖವಾಗಿ, ಆಟದ ಶಕ್ತಿಯಲ್ಲಿ ಗ್ರಾಂಟ್ ಅವರ ನಂಬಿಕೆ ಮಾನವ ಹಕ್ಕುಗಳ ಪ್ರಗತಿಯು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದೆ.

ವಿಶ್ವದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sat, 10 December 22

ಕಲಬುರಗಿ: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
ಕಲಬುರಗಿ: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?
ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?
Daily Devotional: ಅಯ್ಯಪ್ಪ ಮಾಲೆ ಧಾರಣೆಯ ಹಿಂದಿನ ಮಹತ್ವ ತಿಳಿಯಿರಿ
Daily Devotional: ಅಯ್ಯಪ್ಪ ಮಾಲೆ ಧಾರಣೆಯ ಹಿಂದಿನ ಮಹತ್ವ ತಿಳಿಯಿರಿ
ಈ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಈ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ