2021ನೇ ಸಾಲಿನ ಐಪಿಎಲ್ ನಡೆಯೋಕೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಇದಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆರು ಆಟಗಾರರನ್ನು ಕೈಬಿಟ್ಟಿದೆ. ಅವರು ಯಾವ ಆಟಗಾರರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಹರ್ಭಜನ್ ಸಿಂಗ್ : ಚೆನ್ನೈ ಸೂಪರ್ ಕಿಂಗ್ಸ್ ನ ಪ್ರಮುಖ ಸ್ಪಿನ್ನರ್ ಎನಿಸಿಕೊಂಡಿದ್ದ ಹರ್ಭಜನ್ ಸಿಂಗ್ ಟೀಂ ಇಂಡಿಯಾಗೆ ಗುಡ್ ಬಾಯ್ ಹೇಳಿ ತುಂಬಾನೇ ಸಮಯ ಕಳೆದಿದೆ. ಆದರೆ, ಐಪಿಎಲ್ನಲ್ಲಿ ಇದ್ದರು. 2020ರ ಮ್ಯಾಚ್ನಲ್ಲಿ ಚೆನ್ನೈ ತಂಡದಲ್ಲಿದ್ದರೂ ಅವರು ಆಡಿರಲಿಲ್ಲ. ಈಗ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಪೀಯೂಶ್ ಚಾವ್ಲಾ: ಪೀಯೂಷ್ ಚಾವ್ಲಾ ಅಷ್ಟಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ತಂಡ ಅವರ ಜೊತೆಗಿನ ಒಪ್ಪಂದ ಅಂತ್ಯ ಮಾಡಿಕೊಳ್ಳಲು ನಿರ್ಧರಿಸಿದೆ.
ಶೇನ್ ವಾಟ್ಸನ್: ಶೇನ್ ವಾಟ್ಸನ್ ವಯಸ್ಸು 40 ಸಮೀಪಿಸಿದೆ. ಅಲ್ಲದೆ, ಅವರು ಉತ್ತಮವಾಗಿ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ, ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ.
ಮುರುಳಿ ವಿಜಯ್: ಆರಂಭದಲ್ಲಿ ಸಿಎಸ್ ಕೆ ಪರವಾಗಿ ಉತ್ತಮವಾಗಿ ಆಡಿದ್ದ ಮುರುಳಿ ವಿಜಯ್ ನಂತರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ, ಇವರನ್ನು ಕೈ ಬಿಡಲಾಗಿದೆ.
ಮೋನು ಸಿಂಗ್ ಚೆನ್ನೈ ತಂಡದ ಪರವಾಗಿ ಆಡುತ್ತಿಲ್ಲ.
ಕಳೆದ ಬಾರಿ ಹೀನಾಯ ಪ್ರದರ್ಶನ ನೀಡಿದ್ದ ಕೇದಾರ್ ಜಾಧವ್ರನ್ನು ಸಿಎಸ್ಕೆ ಇಂದ ರಿಲೀಸ್ ಮಾಡಲಾಗಿದೆ.
Published On - 8:18 pm, Wed, 20 January 21