ಚೆಸ್ ಚಾಂಪಿಯನ್ ಗುಕೇಶ್ ತಮಿಳಿನವರ ಅಥವಾ ತೆಲುಗಿನವರ?: ಚರ್ಚೆಗೆ ಗ್ರಾಸವಾದ ಎಂಕೆ ಸ್ಟಾಲಿನ್, ಚಂದ್ರಬಾಬು ನಾಯ್ಡು ಟ್ವೀಟ್

ವಿಶ್ವ ಕಿರಿಯ ಚೆಸ್ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ ಗುಕೇಶ್ ದೊಮ್ಮರಾಜು ಅವರ ಗೆಲುವನ್ನು ಇಡೀ ಭಾರತ ಸಂಭ್ರಮಿಸುತ್ತಿದೆ. ಆದರೆ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಾತ್ರ ಟ್ವೀಟ್ ಸಮಯ ಶುರುವಾಗಿದೆ. ಗುಕೇಶ್ ತಮಿಳಿನವರ ಅಥವಾ ತೆಲುಗಿನವರ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಇದಕ್ಕೆ ಕಾರಣವಾಗಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ಮಾಡಿರುವ ಟ್ವೀಟ್.

ಚೆಸ್ ಚಾಂಪಿಯನ್ ಗುಕೇಶ್ ತಮಿಳಿನವರ ಅಥವಾ ತೆಲುಗಿನವರ?: ಚರ್ಚೆಗೆ ಗ್ರಾಸವಾದ ಎಂಕೆ ಸ್ಟಾಲಿನ್, ಚಂದ್ರಬಾಬು ನಾಯ್ಡು ಟ್ವೀಟ್
ಗುಕೇಶ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2024 | 2:41 PM

ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಗುರುವಾರ ತಮ್ಮ 18ನೇ ವಯಸ್ಸಿನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ರೋಚಕ 14 ನೇ ಮತ್ತು ಅಂತಿಮ ಪಂದ್ಯದಲ್ಲಿ ಟ್ವಿಸ್ಟ್ ಮತ್ತು ಟರ್ನ್ ಪ್ರಶಸ್ತಿ ಪಂದ್ಯದಲ್ಲಿ ಸೋಲಿಸುವ ಮೂಲಕ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಚೆಸ್ ಲೋಕದಲ್ಲಿ ಬಹುದೊಡ್ಡ ಸಾಧನೆ ಗೈದಿದ್ದಾರೆ. ಇದರ ನಡುವೆ ಇವರು ತಮಿಳಿನವರ ಅಥವಾ ತೆಲುಗಿನವರ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಇದಕ್ಕೆ ಕಾರಣವಾಗಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ಮಾಡಿರುವ ಟ್ವೀಟ್.

ಗುರುವಾರ ರಾತ್ರಿ 7.25ಕ್ಕೆ ಡಿಎಂಕೆ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘‘ಗುಕೇಶ್ ಅವರ ಅದ್ಭುತ ಸಾಧನೆ… ಚೆನ್ನೈ ಮತ್ತೊಂದು ಚಾಂಪಿಯನ್ ಅನ್ನು ಹುಟ್ಟಿಹಾಕುವ ಮೂಲಕ ಜಾಗತಿಕ ಚೆಸ್ ರಾಜಧಾನಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿದೆ. ತಮಿಳುನಾಡು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ” ಎಂದು ಶ್ರೀ ಸ್ಟಾಲಿನ್ ಅವರು ಯುವ ಚಾಂಪಿಯನ್ ಅವರ ಕುತ್ತಿಗೆಗೆ ಚಿನ್ನದ ಪದಕವನ್ನು ಹಾಕುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಡಿಎಂಕೆ ನಾಯಕ ಟ್ವೀಟ್ ಮಾಡಿದ ಎರಡು ನಿಮಿಷಗಳ ನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದು ಟ್ವೀಟ್ ಮಾಡಿದ್ದಾರೆ. “ನಮ್ಮದೇ ತೆಲುಗು ಹುಡುಗನಿಗೆ ಹೃತ್ಪೂರ್ವಕ ಅಭಿನಂದನೆಗಳು…” ಎಂದು ಗುಕೇಶ್ ಅವರ ಫೋಟೋ ಹಾಕಿ ಹಂಚಿಕೊಂಡಿದ್ದಾರೆ. “ಇಡೀ ರಾಷ್ಟ್ರವು ನಿಮ್ಮ ಅದ್ಭುತ ಸಾಧನೆಯನ್ನು ಕೊಂಡಾಡುತ್ತದೆ. ಮುಂಬರುವ ದಶಕಗಳಲ್ಲಿ ನಿಮ್ಮಿಂದ ಇನ್ನೂ ಹಲವು ಗೆಲುವುಗಳನ್ನು ಬಯಸುತ್ತೇವೆ” ಎಂದು ನಾಯ್ಡು ಬರೆದುಕೊಂಡಿದ್ದಾರೆ.

ಗುಕೇಶ್ ಅವರ ಐತಿಹಾಸಿಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲುವಿನ ಬಳಿಕ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ನಡುವೆ ಆನ್‌ಲೈನ್ ಹಗ್ಗಜಗ್ಗಾಟ ಶುರುವಾಗಿದೆ. ಇಲ್ಲಿಂದ ಉಭಯ ರಾಜ್ಯಗಳ ಅನೇಕ ಎಕ್ಸ್ ಬಳಕೆದಾರರು ಈ ಟ್ವೀಟ್​ಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ.

ಗುಕೇಶ್ ದೊಮ್ಮರಾಜು ಯಾರು?

ಗುಕೇಶ್ ದೊಮ್ಮರಾಜು ಅವರ ಪೋಷಕರು ತೆಲುಗು ಮೂಲದವರು. ಆದರೆ, ಇವರೆಲ್ಲ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಗುಕೇಶ್ ಅವರ ಪೋಷಕರಿಬ್ಬರೂ ವೈದ್ಯಕೀಯ ವೃತ್ತಿಪರರು.

ಎಕ್ಸ್​ನಲ್ಲಿ ಭಾರೀ ಚರ್ಚೆ:

ಗುಕೇಶ್ ಅವರ ಮೂಲ ಯಾವುದು ಎಂಬ ಕುರಿತು ಆನ್​ಲೈನ್​ನಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಚೆಸ್ ತಾರೆಗೆ ತಮಿಳುನಾಡು ಗಮನಾರ್ಹ ಆರ್ಥಿಕ ಬೆಂಬಲವನ್ನು ನೀಡಿದೆ ಎಂದು ಹಲವರು ಹೇಳಿದ್ದಾರೆ. ಒಬ್ಬ X ಬಳಕೆದಾರರು ಏಪ್ರಿಲ್ ತಿಂಗಳ ವರದಿಯ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿ, ತಮಿಳುನಾಡಿ ಸರ್ಕಾರವು ಅವರಿಗೆ ರೂ. 75 ಲಕ್ಷವನ್ನು ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದಾರೆ. ಈ ಮೂಲಕ ಇವರು ಚೆನ್ನೈ ಅವರೆಂದು ಸ್ಪಷ್ಟೀಕರಣ ನೀಡಿದ್ದಾರೆ.

“ಚೆಸ್‌ನಲ್ಲಿ ತೆಲುಗು ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು ಅವರ ವೃತ್ತಿಜೀವನವನ್ನು ಬೆಂಬಲಿಸಿದ್ದು ತಮಿಳುನಾಡು. ಈಗ ತೆಲುಗು ರಾಜ್ಯಗಳು ತಮ್ಮ ಪ್ರತಿಭೆಯನ್ನು ಪೋಷಿಸಲು ಏನು ಮಾಡುತ್ತೆ ನೋಡಬೇಕು’’ ಎಂದು ಮತ್ತೋರ್ವ ಬಳಕೆದಾರ ಬರೆದುಕೊಂಡಿದ್ದಾರೆ. ಹೀಗೆ ಸಾಮಾಜಿಕ ತಾಣಗಳಲ್ಲಿ ಗುಕೇಶ್ ಅವರು ತಮಿಳಿನವ-ತೆಲುಗಿನವ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಕುರಿತ ಕೆಲವು ಟ್ವೀಟ್ ಇಲ್ಲಿದೆ.

18 ವರ್ಷದ ಗುಕೇಶ್ 7.5-6-5 ಅಂಕಗಳ ಅಂತರದಿಂದ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ಬರೋಬ್ಬರಿ 12 ವರ್ಷಗಳ ಬಳಿಕ ಭಾರತೀಯ ಚೆಸ್ ಆಟಗಾರನೊಬ್ಬ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದ ಗುಕೇಶ್ ಅವರಿಗೆ ಆರಂಭದಲ್ಲಿ ಭಾಸ್ಕರ್ ತರಬೇತಿ ನೀಡುತ್ತಿದ್ದರು. ಇದಾದ ನಂತರ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್‌ ವಿಶ್ವನಾಥನ್ ಆನಂದ್, ಗುಕೇಶ್ ಅವರಿಗೆ ತರಬೇತಿ ನೀಡಿದ್ದರು.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆ; ಗುರುವನ್ನೇ ಮೀರಿಸಿದ ಶಿಷ್ಯ ಗುಕೇಶ್

2015 ರಲ್ಲಿ ನಡೆದ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ 9 ವರ್ಷದೊಳಗಿನವರ ವಿಭಾಗದಲ್ಲಿ ಮತ್ತು 2018 ರಲ್ಲಿ ನಡೆದ 12 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದಿಕೊಂಡಿದ್ದ ಗುಕೇಶ್ ಇದುವರೆಗೆ ಏಷ್ಯನ್ ಯೂತ್ ಚಾಂಪಿಯನ್‌ಶಿಪ್​ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಿಟಿಟಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಟಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ