VIDEO: ಜೋರ್ಡನ್ ಅದ್ಭುತವಾಗಿ ಕ್ಯಾಚ್ ಹಿಡಿದ ರೀತಿಗೆ ಸೂರ್ಯಕುಮಾರ್ ಯಾದವ್ ಸ್ಟನ್!
ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 14ನೇ ಓವರ್ನಲ್ಲಿ ಒಂದು ಅದ್ಭುತವೇ ನಡೆದು ಹೋಗಿದೆ. ಕ್ರಿಸ್ ಜೋರ್ಡನ್ ಸರ್ಕಸ್ ಮಾಡಿ ಹಿಡಿದ ಕ್ಯಾಚ್ಗೆ ಬ್ಯಾಟಿಂಗ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಸ್ಟನ್ ಆಗಿದ್ದಾರೆ. ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ರೋಹಿತ್ ಶರ್ಮಾ ಜತೆಯಾಗಿ ವಿರಾಟ್ ಕೊಹ್ಲಿ ಓಪನಿಂಗ್ಗೆ ಇಳಿದು ಅಚ್ಚರಿ ಮೂಡಿಸಿದ್ದರು. ಮೊದಲು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.
ಟೀಂ ಇಂಡಿಯಾ ಅದ್ಭುತ ಓಪನಿಂಗ್ ಕಂಡುಕೊಂಡಿತ್ತು. ರೋಹಿತ್ ಶರ್ಮಾ 34 ಬಾಲ್ಗಳಲ್ಲಿ 64 ರನ್ ಸಿಡಿಸಿದ್ದರು. ಇದರಲ್ಲಿ ನಾಲ್ಕು ಫೋರ್ ಹಾಗೂ 5 ಸಿಕ್ಸ್ರಗಳಿದ್ದವು. ರೋಹಿತ್ ಬೌಲ್ಡ್ ಆದ ನಂತರ ಬ್ಯಾಟಿಂಗ್ಗೆ ಇಳಿದಿದ್ದು ಸೂರ್ಯಕುಮಾರ್ ಯಾದವ್. ಸೂರ್ಯಕುಮಾರ್ ಯಾವ್ ಕೂಡ ಹೊಡಿಬಡಿ ಆಟಕ್ಕೆ ಮುಂದಾದರು. 12ನೇ ಓವರ್ನಲ್ಲಿ ಕ್ರಿಸ್ ಜೋರ್ಡನ್ ಬೌಲಿಂಗ್ನಲ್ಲಿ ಬರೋಬ್ಬರಿ ನಾಲ್ಕು ಫೌರ್ಗಳು ಬಂದಿದ್ದವು. ನಂತರ 14ನೇ ಓವರ್ನಲ್ಲಿ ಆದಿಲ್ ರಶೀದ್ ಬೌಲಿಂಗ್ಗೆ ಇಳಿದಿದ್ದರು. ಎರಡನೇ ಬಾಲ್ ಎಸೆದಾಗ ಸೂರ್ಯಕುಮಾರ್ ಯಾದವ್ ಸಿಕ್ಸ್ ಬಾರಿಸೋಕೆ ಮುಂದಾದರು.
ಈ ಬಾಲ್ ಇನ್ನೇನು ಸಿಕ್ಸ್ ಗಡಿ ಸಮೀಪಿಸಬೇಕಿತ್ತು. ಆದರೆ, ಓಡಿ ಬಂದ ಜೋರ್ಡನ್ ಬಾಲ್ ಹಿಡಿದುಕೊಂಡರು. ಇನ್ನೇನು ಅವರು ಸಿಕ್ಸ್ ಗಡಿ ದಾಟಬೇಕಿತ್ತು. ಆಗ, ಬಾಲ್ ಜೇಸನ್ ರಾಯ್ ಕೈಗೆ ನೀಡಿದ್ದರು. ಈ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದ್ದರು. ಜೋರ್ಡನ್ ಅದ್ಭುತ ಕ್ಯಾಚ್ಗೆ ಸೂರ್ಯಕುಮಾರ್ ಯಾದವ್ ಹಾಗೂ ಕೊಹ್ಲಿ ಸ್ಟನ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
View this post on Instagram
Chris Jordan you absolute beauty ?. What a catch ?.#ENGvsIND #chrisjordan pic.twitter.com/tQuQFVwpo0
— Subhaan Hussain (@SubhaanHussain9) March 20, 2021
Amazing “Chris Jordan” ???❤️??#chrisjordan pic.twitter.com/IoJHFY2u6Q
— Himanshu Nigam (@MeHimanshunigam) March 20, 2021
ಇದನ್ನೂ ಓದಿ: India vs England 5th T20I live Score: ಭಾರತದ ಭರ್ಜರಿ ಬ್ಯಾಟಿಂಗ್!
Published On - 8:34 pm, Sat, 20 March 21