India vs England| ಗಾಯದಿಂದ ಚೇತರಿಸಿಕೊಂಡಿದ್ದರೆ ಕಿಷನ್​ರನ್ನು ರಾಹುಲ್ ಸ್ಥಾನದಲ್ಲಿ ಆಡಿಸುವುದು ಉತ್ತಮ: ಸಂಜಯ ಮಾಂಜ್ರೇಕರ್

ವೈಫಲ್ಯಗಳ ಹೊರತಾಗಿಯೂ ರಾಹುಲ್ ಅವರನ್ನು ಆಡಿಸುತ್ತಿರುವುದು ಟೀಮ್ ಮ್ಯಾನೇಜ್ಮೆಂಟ್ ಅವರಿಗೆ ಸ್ಪರ್ಶ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಲು ತಯಾರಿದೆ ಮತ್ತು ಗೆಲುವಿನ ಕಾಂಬಿನೇಷನ್ ಬದಲಾಯಿಸದಿರಲು ನಿರ್ಧರಿಸಿದೆ ಎನ್ನುವುದು ಸಾಬೀತಾಗುತ್ತದೆ ಎಂದು ಮಾಂಜ್ರೇಕರ್ ಹೇಳುತ್ತಾರೆ.

India vs England| ಗಾಯದಿಂದ ಚೇತರಿಸಿಕೊಂಡಿದ್ದರೆ ಕಿಷನ್​ರನ್ನು ರಾಹುಲ್ ಸ್ಥಾನದಲ್ಲಿ ಆಡಿಸುವುದು ಉತ್ತಮ: ಸಂಜಯ ಮಾಂಜ್ರೇಕರ್
ಕೆ ಎಲ್ ರಾಹುಲ್ ಮತ್ತು ಇಶಾನ್ ಕಿಷನ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: Mar 20, 2021 | 4:23 PM

ಅಹಮದಾಬಾದ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಕೊನೆಯ ಮತ್ತು ನಿರ್ಣಾಯಕ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭ ಆಟಗಾರನಾಗಿ ಕೆ ಎಲ್ ರಾಹುಲ್ ಅವರನ್ನು ಮುಂದುವರಿಸುವ ಸಾಧ್ಯತಯೇ ಹೆಚ್ಚು. ಇಶಾನ್ ಕಿಷನ್ ಅವರನ್ನು ಆಡಿಸಲಿಕ್ಕಿಲ್ಲ ಎಂದು ಮಾಜಿ ಕ್ರಿಕೆಟರ್ ಮತ್ತು ಹಾಲಿ ಎಕ್ಸ್​ಪರ್ಟ್​ ಕಾಮೆಂಟೇಟರ್ ಸಂಜಯ ಮಾಂಜ್ರೇಕರ್ ಹೇಳಿದ್ದಾರೆ. ಸರಣಿಯಲ್ಲಿ ಎರಡು ಸೊನ್ನೆ ಹಾಗೂ 1 ಮತ್ತು 14 ರನ್​ಗಳ ಇನ್ನಿಂಗ್ಸ್ ಆಡಿರುವ ರಾಹುಲ್​ ಅವರ ವೈಫಲ್ಯಗಳ ಹೊರತಾಗಿಯೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಮತ್ತು ಟೀಮಿನ ನಾಯಕ ವಿರಾಟ್​ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಎರಡನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕಿಷನ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ್ ನೀಡಿ ಅರ್ಧ ಶತಕ ಬಾರಿಸಿದರು. ಮೂರನೇ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ ಕಿಷನ್ ಮೊದಲ ಪಂದ್ಯದಲ್ಲಿ ತೋರಿದ ಆಟವನ್ನು ಪುನರಾವರ್ತಿಸಲು ವಿಪಲರಾದರು. ನಾಲ್ಕನೇ ಪಂದ್ಯಕ್ಕೆ ಮೊದಲು ಅವರು ತೊಡೆಸಂದಿ ನೋವಿಗೊಳಗಾಗಿದ್ದರಿಂದ ಅಡುವ ಇಲೆವೆನ್​ನಿಂದ ಕೈಬಿಡಲಾಗಿತ್ತು. ಅವರ ನೋವು ವಾಸಿಯಾಗಿದ್ದರೂ ಇಂದಿನ ಪಂಧ್ಯದಲ್ಲಿ ಆಡುವುದು ಅನುಮಾನ ಎಂದು ಮಾಂಜ್ರೇಕರ್ ಹೇಳುತ್ತಾರೆ.

ವೈಫಲ್ಯಗಳ ಹೊರತಾಗಿಯೂ ರಾಹುಲ್ ಅವರನ್ನು ಆಡಿಸುತ್ತಿರುವುದು ಟೀಮ್ ಮ್ಯಾನೇಜ್ಮೆಂಟ್ ಅವರಿಗೆ ಸ್ಪರ್ಶ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಲು ತಯಾರಿದೆ ಮತ್ತು ಗೆಲುವಿನ ಕಾಂಬಿನೇಷನ್ ಬದಲಾಯಿಸದಿರಲು ನಿರ್ಧರಿಸಿದೆ ಎನ್ನುವುದು ಸಾಬೀತಾಗುತ್ತದೆ ಎಂದು ಮಾಂಜ್ರೇಕರ್ ಹೇಳುತ್ತಾರೆ.

Sanjay Manjrekar

ಸಂಜಯ ಮಾಂಜ್ರೇಕರ್

‘ಎರಡೂ ಟೀಮುಗಳು ಗೆಲುವಿಗಾಗಿ ಹಾತೊರೆಯುತ್ತಿರುವುದರಿಂದ ಆಡುವ ಇಲೆವೆನ್ ಅಂತಿಮಗೊಳಿಸಿವುದು ಕೊಂಚ ಪೇಚಿನ ಸಂಗತಿಯಾಗುತ್ತದೆ. ದುರಾದೃಷ್ಟದ ವಿಷಯವೆಂದರೆ ಕಿಷನ್​ಗೆ ಸ್ಥಾನ ಸಿಕ್ಕಲಿಕ್ಕಿಲ್ಲ. ಅವರಿಗೆ ಆಗಿರುವ ಗಾಯ ಕೂಡ ರಾಹುಲ್​ರನ್ನು ಮುಂದುವರಿಸುವ ಟೀಮ್ ಮ್ಯಾನೇಜ್ಮೆಂಟ್​ ನಿರ್ಧಾರಕ್ಕೆ ಇಂಬು ನೀಡುತ್ತದೆ,’ ಎಂದು ಕ್ರೀಡಾ ವೆಬ್​​ಸೈಟೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಂಜ್ರೇಕರ್ ಹೇಳಿದ್ದಾರೆ.

‘ಅವರು (ಟೀಮ್ ಮ್ಯಾನೇಜ್ಮೆಂಟ್) ರಾಹುಲ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ನಿರ್ಧರಿಸಿರುವಂತಿದೆ. ಫಾರ್ಮ್​ನಲ್ಲಿರದಿದ್ದರೂ ನೀವೊಬ್ಬ ಕ್ಲಾಸ್ ಆಟಗಾರರಾಗಿರುವುದರಿಂದ ನಿಮಗೆ ಮತ್ತೊಂದು ಅವಕಾಶ ನೀಡಲಾಗುವದು ಅಂತ ರಾಹುಲ್​ಗೆ ಹೇಳಿರುವಂತಿದೆ. ಹಾಗಂತ ರಾಹುಲ್​ಗೆ ಬ್ಯಾಟ್ ಮಾಡುವಾಗ ಬಾಲುಗಳನ್ನು ವ್ಯರ್ಥ ಮಾಡುವುದಕ್ಕೆ ಪರವಾನಗಿ ಸಿಕ್ಕಂತಾಗುವುದಿಲ್ಲ. 4ನೇ ಪಂದ್ಯದಲ್ಲಿ ಅವರು 17 ಎಸೆತಗಳಲ್ಲಿ 14 ರನ್ ಗಳಿಸಿದ್ದು ಓಕೆ. ಯಾಕೆಂದರೆ ದಾವಿದ್ ಮಲಾನ್ ಸಹ 17 ಎಸೆತಗಳಲ್ಲಿ 14 ರನ್ ಗಳಿಸಿದ್ದರು. ಗಾಯದಿಂದ ಚೇತರಿಸಿಕೊಂಡಿದ್ದರೆ ಕಿಷನ್ ಆಡುವುದು ಉತ್ತಮ ಅಂತ ನಾನು ಭಾವಿಸಿತ್ತೇನೆ. ಏನಾಗಬಹುದೋ ಅಂತ ಕಾದು ನೋಡೋಣ.’ ಎಂದು ಮಾಂಜ್ರೇಕರ್ ಹೇಳಿದ್ದಾರೆ.

ಭಾರತ 5 ಬೌಲರ್​ಗಳನ್ನು ಆಡಿಸುತ್ತಿದ್ದರೂ ಅದರ ಬ್ಯಾಟಿಂಗ್ ಬಹಳ ಆಳವಾಗಿದೆ, ಅದೇ ಕಾಂಬಿನೇಷನ್ ಟೀಮ್ ಇಂಡಿಯಾ ಮುಂದುವರಿಸಬಹುದೇ ಎಂದು ಕೇಳಿದ ಪ್ರಶ್ನೆಗೆ ಮಾಂಜ್ರೇಕರ್, ‘ ಈ ಕಾಂಬಿನೇಶನ್ ಸರಿಯಾಗಿದೆ ಅಂತ ನನಗನ್ನಿಸುತ್ತಿದೆ. ಭಾರತದ ಬ್ಯಾಟಂಗ್ ಬಲ ಅದ್ಭುತವಾಗಿದೆ ಮತ್ತು ಅನೇಕ ಸಲ ಅದು ತನ್ನ ಸಂಪೂರ್ಣ ಬ್ಯಾಟಿಂಗ್ ಸಾಮರ್ಥ್ಯವನ್ನು ಬಳಸಿಕೊಂಡಿಲ್ಲ. ಯಾಕೆಂದರೆ ಟಿ20 ಕ್ರಿಕೆಟ್​ನಲ್ಲಿ ವಾಷಿಂಗ್ಟನ್ ಸುಂದರ್ ಸಹ ಒಬ್ಬ ಉತ್ತಮ ಬ್ಯಾಟ್ಸ್​ಮನ್. ಟೀಮಿನಲ್ಲಿ ಸಾಕಷ್ಟು ಬೌಲರ್​ಗಳಿರುವುದರಿಂದ ಯಾವುದೇ ಬದಲಾವಣೆ ಮಾಡಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ,’ ಎಂದು ಮಾಂಜ್ರೇಕರ್ ಹೇಳಿದರು.

‘ಈ ಪಂದ್ಯದಲ್ಲೂ ಭಾರತ ಮತ್ತೊಮ್ಮೆ ಎರಡನೇ ಅವಧಿಯಲ್ಲಿ ಬೌಲ್​ ಮಾಡುವಂಥ ಸ್ಥಿತಿ ಎದುರಾದರೆ ಸುಂದರ್​ಗಿಂತ ರಾಹುಲ್ ತೆವಾಟಿಯಾ ಹೆಚ್ಚು ಉಪಯುಕ್ತವಾಗಬಹುದು ಅಂದುಕೊಳ್ಳುತ್ತೇನೆ. ಅಕ್ಷರ್ ಪಟೇಲ್​ ಅವರನ್ನು ಭಾರತ ಆಡಿಸಲಾರದು. ಯಾಕೆಂದರೆ, ಈ ಇಂಗ್ಲೆಂಡ್​ ಟೀಮಿನಲ್ಲಿ ಹೆಚ್ಚು ಎಡಗೈ ಬ್ಯಾಟ್ಸ್​ಮನ್​ಗಳಿದ್ದಾರೆ. ಆದರೆ ತೆವಾಟಿಯಾರನ್ನು ಆಡಿಸುವುದು ರಿಸ್ಕ್ ಮತ್ತು ಅಂಥ ರಿಸ್ಕ್ ಭಾರತ ತೆಗೆದುಕೊಳ್ಳೋದು ಅನುಮಾನ ಎಂದು ಮಾಂಜ್ರೇಕರ್ ಹೇಳಿದರು

ಇದನ್ನೂ ಓದಿ: India vs England: ಥರ್ಡ್ ಅಂಪೈರ್​ಗೆ ‘ನನಗೆ ಗೊತ್ತಾಗುತ್ತಿಲ್ಲ’ ಎಂದು ಹೇಳುವ ಆಪ್ಷನ್ ಯಾಕಿಲ್ಲ ಅಂತ ಪ್ರಶ್ನಿಸಿದ ಕೊಹ್ಲಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್