ಭಾರತ (India) ಒಟ್ಟು 61 ಪದಕಗಳನ್ನು ಬಾಚಿಕೊಂಡು ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022 ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ. ಕೊನೆಯ ದಿನ ಭಾರತ ಆರು ಪದಕಗಳನ್ನು ಗೆದ್ದು ಬೀಗಿತು. ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ನಲ್ಲಿ ಪಿ.ವಿ. ಸಿಂಧು (PC Sindhu) ಚಿನ್ನದ ಪದಕ ಮುಡಿಗೇರಿಸಿಕೊಂಡರು. ಪುರುಷರ ಹಾಕಿ ತಂಡ ಬೆಳ್ಳಿ ಪದಕ, ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಚಿನ್ನ, ಸಾತ್ವಿಕ್ ಸಾಯಿರಾಜ್–ಚಿರಾಗ್ ಶೆಟ್ಟಿ ಚಿನ್ನದ ಪದಕ, ಜ್ಞಾನಶೇಖರನ್ ಕಂಚು ಹಾಗೂ ಲಕ್ಷ್ಯ ಸೇನ್ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಒಟ್ಟು 12 ವಿಭಾಗಗಳಲ್ಲಿ ಕಣಕ್ಕಿಳಿದ ಭಾರತ 4ನೇ ಸ್ಥಾನಕ್ಕೆ ಇಳಿದರೂ ಸಾಧನೆ ಮಾತ್ರ ಗಮನಾರ್ಹ. ಕೆಲವು ಹೊಸ ಕ್ರೀಡೆಗಳಲ್ಲೂ ಭಾರತ ತನ್ನ ಸಾಮರ್ಥ್ಯವನ್ನು ಸಾಬೀತುಮಾಡಿದೆ. ಇಲ್ಲಿದೆ ನೋಡಿ ಭಾರತದ ಪದಕಗಳ ಸಂಪೂರ್ಣ ವಿವರ.
ಅಥ್ಲೆಟಿಕ್ಸ್:
ಎಲ್ದೋಸ್ ಪಾಲ್– ಪುರುಷರ ಟ್ರಿಪಲ್ ಜಂಪ್– ಚಿನ್ನ
ಅಬ್ದುಲ್ಲಾ ಅಬೂಬಕರ್– ಪುರುಷರ ಟ್ರಿಪಲ್ ಜಂಪ್– ಬೆಳ್ಳಿ
ಅವಿನಾಶ್ ಸಾಬಳೆ– ಪುರುಷರ 3000ಮೀ ಸ್ಟೀಪಲ್‌ಚೇಸ್– ಬೆಳ್ಳಿ
ಪ್ರಿಯಾಂಕಾ ಗೋಸ್ವಾಮಿ– ಮಹಿಳೆಯರ 10 ಕಿಮೀ ಓಟ– ಬೆಳ್ಳಿ
ಎಂ ಶ್ರೀಶಂಕರ್– ಪುರುಷರ ಲಾಂಗ್ ಜಂಪ್– ಬೆಳ್ಳಿ
ತೇಜಸ್ವಿನ್ ಶಂಕರ್– ಪುರುಷರ ಹೈ ಜಂಪ್– ಕಂಚು
ಅಣ್ಣು ರಾಣಿ– ಮಹಿಳೆಯರ ಜಾವೆಲಿನ್ ಥ್ರೋ– ಕಂಚು
ಸಂದೀಪ್ ಕುಮಾರ್– ಪುರುಷರ 10 ಕಿಮೀ ಓಟ– ಕಂಚು
ಬ್ಯಾಡ್ಮಿಂಟನ್:
ಪಿವಿ ಸಿಂಧು– ಮಹಿಳೆಯರ ಸಿಂಗಲ್ಸ್– ಚಿನ್ನ
ಲಕ್ಷ್ಯ ಸೇನ್– ಪುರುಷರ ಸಿಂಗಲ್ಸ್– ಚಿನ್ನ
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ– ಪುರುಷರ ಡಬಲ್ಸ್– ಚಿನ್ನ
ಕಿಡಂಬಿ ಶ್ರೀಕಾಂತ್, ಸಾತ್ವಿಕ್ ಸಾಯಿರಾಜ್, ಬಿ ಸುಮೀತ್ ರೆಡ್ಡಿ, ಲಕ್ಷ್ಯ ಸೇನ್, ಚಿರಾಗ್ ಶೆಟ್ಟಿ, ಟ್ರೀಸಾ ಜಾಲಿ, ಆಕರ್ಷಿ ಕಶ್ಯಪ್, ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್, ಪಿವಿ ಸಿಂಧು– ಮಿಶ್ರ ತಂಡ– ಬೆಳ್ಳಿ
ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್– ಮಹಿಳೆಯರ ಡಬಲ್ಸ್– ಕಂಚು
ಕಿಡಂಬಿ ಶ್ರೀಕಾಂತ್– ಪುರುಷರ ಸಿಂಗಲ್ಸ್– ಕಂಚು
ಬಾಕ್ಸಿಂಗ್:
ನಿಖತ್ ಜರೀನ್ – ಮಹಿಳೆಯರ 50 ಕೆ.ಜಿ– ಚಿನ್ನ
ನೀತು ಘಂಘಸ್ – ಮಹಿಳೆಯರ 48 ಕೆ.ಜಿ– ಚಿನ್ನ
ಅಮಿತ್ ಪಂಗಲ್– ಪುರುಷರ 51 ಕೆ.ಜಿ– ಚಿನ್ನ
ಸಾಗರ್ ಅಹ್ಲಾವತ್– ಪುರುಷರ 92 ಕೆ.ಜಿ– ಬೆಳ್ಳಿ
ರೋಹಿತ್ ಟೋಕಾಸ್– ಪುರುಷರ 67 ಕೆ.ಜಿ– ಕಂಚು
ಜೈಸ್ಮಿನ್– ಮಹಿಳೆಯರ 60 ಕೆ.ಜಿ– ಕಂಚು
ಮೊಹಮ್ಮದ್ ಹುಸಾಮುದ್ದೀನ್– ಪುರುಷರ 57 ಕೆ.ಜಿ– ಕಂಚು
ಕ್ರಿಕೆಟ್:
ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ತನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್, ರಾಧಾ ಯದ್ ವರ್ಮಾ– ಬೆಳ್ಳಿ
ಪುರುಷರ ಹಾಕಿ:
ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ನೈನ್, ಸುರೇಂದರ್ ಕುಮಾರ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಕ್ರಿಶನ್ ಬಹದ್ದೂರ್ ಪಾಠಕ್, ಲಲಿತ್ ಕುಮಾರ್ ಉಪಾಧ್ಯಾಯ, ಪಿಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್, ಜಿಗರಾಜ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್– ಬೆಳ್ಳಿ
ಮಹಿಳಾ ಹಾಕಿ:
ಸವಿತಾ ಪುನಿಯಾ, ಗುರ್ಜಿತ್ ಕೌರ್, ದೀಪ್ ಗ್ರೇಸ್ ಎಕ್ಕಾ, ಮೋನಿಕಾ, ಸೋನಿಕಾ, ಶರ್ಮಿಳಾ ದೇವಿ, ನಿಕ್ಕಿ ಪ್ರಧಾನ್, ರಜನಿ ಎಟಿಮಾರ್ಪು, ಸಂಗೀತಾ ಕುಮಾರಿ, ನಿಶಾ, ವಂದನಾ ಕಟಾರಿಯಾ, ಉದಿತಾ, ಲಾಲ್ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್, ಸುಶೀಲಾ ಚಾನು ಪುಖ್ರಂಬಮ್, ಸಲಿ ಗೊಹಾ ತೆವಲ್ತೆ– ಕಂಚು
ಜೂಡೋ:
ಸುಶೀಲಾ ದೇವಿ ಲಿಕ್ಮಾಬಮ್– ಮಹಿಳೆಯರ 48 ಕೆ.ಜಿ– ಬೆಳ್ಳಿ
ತುಲಿಕಾ ಮಾನ್– ಮಹಿಳೆಯರ 78 ಕೆ.ಜಿ– ಬೆಳ್ಳಿ
ವಿಜಯ್ ಕುಮಾರ್ ಯಾದವ್– ಪುರುಷರ 60 ಕೆ.ಜಿ– ಕಂಚು
ಲಾನ್ ಬೌಲ್ಸ್:
ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ನೈನ್ಮೋನಿ ಸೈಕಿಯಾ, ಪಿಂಕಿ– ಚಿನ್ನ
ಚಂದನ್ ಕುಮಾರ್ ಸಿಂಗ್, ದಿನೇಶ್ ಕುಮಾರ್, ನವನೀತ್ ಸಿಂಗ್, ಸುನಿಲ್ ಬಹದ್ದೂರ್– ಬೆಳ್ಳಿ
ಪವರ್ಲಿಫ್ಟಿಂಗ್:
ಸುಧೀರ್– ಪುರುಷರ ಹೆವಿವೇಟ್ – ಚಿನ್ನ
ಸ್ಕ್ವ್ಯಾಷ್:
ಸೌರವ್ ಘೋಸಲ್– ಪುರುಷರ ಸಿಂಗಲ್ಸ್– ಕಂಚು
ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮತ್ತು ಸೌರವ್ ಘೋಸಲ್– ಮಿಶ್ರ ಡಬಲ್ಸ್– ಕಂಚು
ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್:
ಅಚಂತ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ– ಮಿಶ್ರ ಡಬಲ್ಸ್– ಚಿನ್ನ
ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ– ಪುರುಷರ ತಂಡ– ಚಿನ್ನ
ಭಾವಿನಾ ಪಟೇಲ್– ಮಹಿಳೆಯರ ಸಿಂಗಲ್ಸ್– ಚಿನ್ನ
ಅಚಂತ ಶರತ್ ಕಮಲ್– ಪುರುಷರ ಸಿಂಗಲ್ಸ್– ಚಿನ್ನ
ಅಚಂತ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್– ಪುರುಷರ ಡಬಲ್ಸ್– ಬೆಳ್ಳಿ
ಸತ್ಯನ್ ಜ್ಞಾನಶೇಖರನ್– ಪುರುಷರ ಸಿಂಗಲ್ಸ್– ಕಂಚು
ಸೋನಾಲ್ ಪಟೇಲ್– ಮಹಿಳೆಯರ ಸಿಂಗಲ್ಸ್– ಕಂಚು
ವೇಟ್ಲಿಫ್ಟಿಂಗ್:
ಮೀರಾಬಾಯಿ ಚಾನು– ಮಹಿಳೆಯರ 49 ಕೆ.ಜಿ– ಚಿನ್ನ
ಜೆರೆಮಿ ಲಾಲ್ರಿನ್ನುಂಗಾ– ಪುರುಷರ 67 ಕೆ.ಜಿ– ಚಿನ್ನ
ಅಚಿಂತಾ ಶೆಯುಲಿ– ಪುರುಷರ 73 ಕೆ.ಜಿ– ಚಿನ್ನ
ಸಂಕೇತ್ ಸರ್ಗರ್– ಪುರುಷರ 55 ಕೆ.ಜಿ– ಬೆಳ್ಳಿ
ಬಿಂದ್ಯಾರಾಣಿ ದೇವಿ– ಮಹಿಳೆಯರ 55 ಕೆ.ಜಿ– ಬೆಳ್ಳಿ
ವಿಕಾಸ್ ಠಾಕೂರ್– ಪುರುಷರ 96 ಕೆ.ಜಿ– ಬೆಳ್ಳಿ
ಗುರುರಾಜ ಪೂಜಾರಿ– ಪುರುಷರ 61 ಕೆ.ಜಿ– ಕಂಚು
ಹರ್ಜಿಂದರ್ ಕೌರ್– ಮಹಿಳೆಯರ 71 ಕೆ.ಜಿ– ಕಂಚು
ಲವ್ಪ್ರೀತ್ ಸಿಂಗ್– ಪುರುಷರ 109 ಕೆ.ಜಿ– ಕಂಚು
ಗುರುದೀಪ್ ಸಿಂಗ್– ಪುರುಷರ 109ಕೆ.ಜಿ– ಕಂಚು
ಕುಸ್ತಿ:
ಬಜರಂಗ್ ಪುನಿಯಾ– ಪುರುಷರ 65 ಕೆ.ಜಿ– ಚಿನ್ನ
ಸಾಕ್ಷಿ ಮಲಿಕ್– ಮಹಿಳೆಯರ 62 ಕೆ.ಜಿ– ಚಿನ್ನ
ದೀಪಕ್ ಪುನಿಯಾ– ಪುರುಷರ 86 ಕೆ.ಜಿ– ಚಿನ್ನ
ರವಿ ಕುಮಾರ್ ದಹಿಯಾ– ಪುರುಷರ 57 ಕೆ.ಜಿ– ಚಿನ್ನ
ವಿನೇಶ್ ಫೋಗಟ್– ಮಹಿಳೆಯರ 53 ಕೆ.ಜಿ– ಚಿನ್ನ
ನವೀನ್– ಪುರುಷರ 74 ಕೆ.ಜಿ– ಚಿನ್ನ
ಅಂಶು ಮಲಿಕ್– ಮಹಿಳೆಯರ 57 ಕೆ.ಜಿ– ಬೆಳ್ಳಿ
ದಿವ್ಯಾ ಕಕ್ರಾನ್– ಮಹಿಳೆಯರ 68 ಕೆ.ಜಿ– ಕಂಚು
ಮೋಹಿತ್ ಗ್ರೆವಾಲ್– ಪುರುಷರ 125 ಕೆ.ಜಿ– ಕಂಚು
ಪೂಜಾ ಗೆಹ್ಲೋಟ್– ಮಹಿಳೆಯರ 50 ಕೆ.ಜಿ– ಕಂಚು
ಪೂಜಾ ಸಿಹಾಗ್ – ಮಹಿಳೆಯರ 76 ಕೆ.ಜಿ– ಕಂಚು
ದೀಪಕ್ ನೆಹ್ರಾ– ಪುರುಷರ 97 ಕೆ.ಜಿ– ಕಂಚು
Published On - 8:21 am, Tue, 9 August 22