Suresh Raina: ಸುರೇಶ್ ರೈನಾ ಸೂಪರ್ ಫ್ಯಾನ್ ನಿಧನ..!
Suresh Raina Super-Fan: ಸುರೇಶ್ ರೈನಾ, ಸಿಎಸ್‌ಕೆ ಮತ್ತು ಟೀಮ್ ಇಂಡಿಯಾಗೆ ಬೆಂಬಲಿಗನಾಗಿ ಕಾಣಿಸಿಕೊಂಡ ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ (Suresh Raina) ಅವರ ಸೂಪರ್ ಫ್ಯಾನ್ ವಿಘ್ನೇಶ್ ನಿಧನರಾಗಿದ್ದಾರೆ. ಅಭಿಮಾನಿಯ ಅಗಲಿಕೆಗೆ ರೈನಾ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸುರೇಶ್ ರೈನಾ ಅವರು ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ವೇಳೆ ವಿಘ್ನೇಶ್ ಮೈ ಮೇಲೆ ಜೆರ್ಸಿ ಬಣ್ಣ ಬಳಿದು ರೈನಾ ಹೆಸರಿನೊಂದಿಗೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ಸದಾ ತನ್ನ ನೆಚ್ಚಿನ ಆಟಗಾರನನ್ನು ಹುರಿದುಂಬಿಸುತ್ತಿದ್ದರು. ಅದರಲ್ಲೂ ಐಪಿಎಲ್ ವೇಳೆ ಮಹೇಂದ್ರ ಸಿಂಗ್ ಧೋನಿಯ ಅಭಿಯಾನಿ ಒಂದೆಡೆ ಕಾಣಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ವಿಘ್ನೇಶ್ ಕೂಡ ವಿಭಿನ್ನ ಗೆಟಪ್ನಲ್ಲಿ ಎಲ್ಲಾ ಸೀಸನ್ನಲ್ಲೂ ಗ್ಯಾಲರಿಯಲ್ಲಿರುತ್ತಿದ್ದರು.
ಇದೀಗ ಸೂಪರ್ ಫ್ಯಾನ್ ನಿಧನದಿಂದ ದುಃಖಿತರಾಗಿರುವ ರೈನಾ, ‘RIP ಬ್ರದರ್ ವಿಘ್ನೇಶ್! ನಿಮ್ಮ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ವಿಘ್ನೇಶ್ ಅವರು ಐಪಿಎಲ್ ಪಂದ್ಯದ ವೇಳೆ ರೈನಾ ಮಾಡಿದ ರನೌಟ್ ಅನ್ನು ಸಂಭ್ರಮಿಸುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
RIP brother @CricVignesh ?! My deepest condolences to the family. https://t.co/mbbhkbpJZY
— Suresh Raina?? (@ImRaina) August 6, 2022
ವಿಘ್ನೇಶ್ ಅವರ ನಿಧನದ ಆಘಾತಕಾರಿ ಸುದ್ದಿಯನ್ನು ಸಿಎಸ್‌ಕೆ ಅಭಿಮಾನಿ ಬಳಗ ಕೂಡ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಸಿಎಸ್ಕೆಯ ಸೂಪರ್ ಫ್ಯಾನ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
“ನಮ್ಮ ಆತ್ಮೀಯ ಗೆಳೆಯ ‘ಸೂಪರ್ ಫ್ಯಾನ್ ವಿಘ್ನೇಶ್’ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಈ ಲೋಕದಿಂದ ದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಸುರೇಶ್ ರೈನಾ, ಸಿಎಸ್‌ಕೆ ಮತ್ತು ಟೀಮ್ ಇಂಡಿಯಾಗೆ ಬೆಂಬಲಿಗನಾಗಿ ಕಾಣಿಸಿಕೊಂಡ ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನಿಮ್ಮನ್ನು ನಾವು ಮೈದಾನದಲ್ಲಿ ಮಿಸ್ ಮಾಡಿಕೊಳ್ಳಲಿದ್ದೇವೆ ಆತ್ಮೀಯ ವಿಘ್ನೇಶ್.” ಎಂದು ಸಿಎಸ್‌ಕೆ ಫ್ಯಾನ್ ಕ್ಲಬ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದೆ.
Our dear friend ‘Superfan Vignesh’ had passed away after a short battle with an illness over the last few months and decided to rest now. He left an impression we will not forget with his support for Raina, CSK & TeamIndia.
Will miss you at the grounds. Dear Vignesh. #RIP pic.twitter.com/DcfGO0ZLzF
— WhistlePodu Army ® – CSK Fan Club (@CSKFansOfficial) August 5, 2022
ಒಟ್ಟಿನಲ್ಲಿ ಸದಾ ಸಿಎಸ್‌ಕೆ ಹಾಗೂ ಟೀಮ್ ಇಂಡಿಯಾ ಅಭಿಯಾನಿಯಾಗಿ ಸ್ಟೇಡಿಯಂ ಗ್ಯಾಲರಿಯಲ್ಲಿ ಮಿಂಚುತ್ತಿದ್ದ ಸೂಪರ್ ಕ್ರಿಕೆಟ್ ಫ್ಯಾನ್ ವಿಘ್ನೇಶ್ ಇನ್ನು ನೆನಪು ಮಾತ್ರ.