India Squad For Asia cup 2022: ಏಷ್ಯಾಕಪ್ಗಾಗಿ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ
India Squad For Asia cup 2022: ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿನ ತಂಡಗಳು ಮುಖಾಮುಖಿಯಾಗಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ.
India Squad For Asia cup 2022: ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ (Asia Cup 2022) ಟಿ20 ಟೂರ್ನಿಗಾಗಿ ಭಾರತ ತಂಡವನ್ನು (Team India) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇನ್ನು ಕಳೆದ ಕೆಲ ಸರಣಿಗಳಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಷ್ಯಾಕಪ್ ಮೂಲಕ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಗಾಯದ ಕಾರಣ ಹಲವು ಸರಣಿ ತಪ್ಪಿಸಿಕೊಂಡಿದ್ದ ಭಾರತ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ತಂಡಕ್ಕೆ ಮರಳಿದ್ದಾರೆ.
ಇನ್ನು ಗಾಯದ ಸಮಸ್ಯೆಗೆ ಒಳಗಾಗಿರುವ ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಇನ್ನುಳಿದಂತೆ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಕಾಣಿಸಿಕೊಂಡ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಏಷ್ಯಾಕಪ್ಗಾಗಿ ಭಾರತ ತಂಡ ಈ ಕೆಳಗಿನಂತಿದೆ.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.
ಏಷ್ಯಾ ಕಪ್ ತಂಡಗಳ ಗ್ರೂಪ್:
- ಗ್ರೂಪ್ ಎ ತಂಡಗಳು- ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ
- ಗ್ರೂಪ್ ಬಿ ತಂಡಗಳು- ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ
ಸಂಪೂರ್ಣ ವೇಳಾಪಟ್ಟಿ ಹೀಗಿದೆ:
- ಆಗಸ್ಟ್ 27 – ಶ್ರೀಲಂಕಾ vs ಅಫ್ಘಾನಿಸ್ತಾನ- ದುಬೈ
- ಆಗಸ್ಟ್ 28 – ಭಾರತ vs ಪಾಕಿಸ್ತಾನ- ದುಬೈ
- ಆಗಸ್ಟ್ 30 – ಬಾಂಗ್ಲಾದೇಶ vs ಅಫ್ಘಾನಿಸ್ತಾನ- ಶಾರ್ಜಾ
- ಆಗಸ್ಟ್ 31 – ಭಾರತ vs ಕ್ವಾಲಿಫೈಯರ್ ಟೀಮ್- ದುಬೈ
- ಸೆಪ್ಟೆಂಬರ್ 1 – ಶ್ರೀಲಂಕಾ vs ಬಾಂಗ್ಲಾದೇಶ- ದುಬೈ
- ಸೆಪ್ಟೆಂಬರ್ 2- ಪಾಕಿಸ್ತಾನ vs ಕ್ವಾಲಿಫೈಯರ್ ಟೀಮ್- ಶಾರ್ಜಾ
ಸೂಪರ್- 4 ವೇಳಾಪಟ್ಟಿ:
- ಸೆಪ್ಟೆಂಬರ್ 3 – B1 vs B2 – ಶಾರ್ಜಾ
- ಸೆಪ್ಟೆಂಬರ್ 4 A1 vs A2 – ದುಬೈ
- ಸೆಪ್ಟೆಂಬರ್ 6 A1 vs B1 – ದುಬೈ
- ಸೆಪ್ಟೆಂಬರ್ 7 A2 vs B2 – ದುಬೈ
- ಸೆಪ್ಟೆಂಬರ್ 8 A1 vs B2 – ದುಬೈ
- ಸೆಪ್ಟೆಂಬರ್ 9 B1 vs- A2 ದುಬೈ
- ಸೆಪ್ಟೆಂಬರ್ 11- ಫೈನಲ್ ಪಂದ್ಯ- ದುಬೈ
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಪ್ರಾರಂಭವಾಗುತ್ತವೆ. ಇಲ್ಲಿ ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿನ ತಂಡಗಳು ಮುಖಾಮುಖಿಯಾಗಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ. ಅಂದರೆ ಎ ಗ್ರೂಪ್ನಿಂದ 2 ತಂಡ, ಬಿ ಗ್ರೂಪ್ನಿಂದ 2 ತಂಡಗಳು ಮುಂದಿನ ಹಂತಕ್ಕೇರಲಿದೆ. ಇನ್ನು ಸೆಪ್ಟೆಂಬರ್ 3 ರಿಂದ ಸೂಪರ್- 4 ತಂಡಗಳ ಮುಖಾಮುಖಿ ಶುರುವಾಗಲಿದೆ.
Published On - 9:14 pm, Mon, 8 August 22