
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Birmingham Commonwealth Games 2022)ರ ಎರಡನೇ ದಿನದಂದು ಭಾರತವು ತನ್ನ ಎರಡನೇ ಪದಕವನ್ನು ಪಡೆದುಕೊಂಡಿದೆ. ವೇಟ್ ಲಿಫ್ಟಿಂಗ್ನಲ್ಲಿ ಖಾತೆ ತೆರೆದ ಭಾರತಕ್ಕೆ ಇದೇ ಸ್ಪರ್ಧೆಯಲ್ಲಿ ಮತ್ತೊಂದು ಪದಕ ಲಭಿಸಿದೆ. ಈ ಬಾರಿ ಭಾರತದ ಗುರುರಾಜ ಪೂಜಾರಿ (Gururaja Pujari) ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. 29ರ ಹರೆಯದ ವೇಟ್ ಲಿಫ್ಟರ್ ಪುರುಷರ 61 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸತತ ಎರಡನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಗುರುರಾಜ ಒಟ್ಟು 269 ಕೆ.ಜಿ. ತೂಕ ಎತ್ತಿದರು. ಈ ವಿಭಾಗದ ಚಿನ್ನವನ್ನು ಗೆದ್ದ ಅಜ್ನಿಲ್ ಬಿನ್ ಮುಹಮ್ಮದ್ ಅವರು ಒಟ್ಟು 285 ಕೆಜಿ ಎತ್ತುವ ಮೂಲಕ ಸಿಡಬ್ಲ್ಯೂಜಿಯಲ್ಲಿ ಹೊಸ ದಾಖಲೆ ನಿರ್ಮಿಸಿದರು.
ಜುಲೈ 29 ರಂದು ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಯಾವುದೇ ಪದಕ ಸಿಗಲಿಲ್ಲ, ಆದರೆ ಎರಡನೇ ದಿನ ವೇಟ್ಲಿಫ್ಟರ್ಗಳು ದೇಶದ ಖಾತೆಯನ್ನು ತೆರೆದರು. ಮೊದಲ 55 ಕೆಜಿ ವಿಭಾಗದಲ್ಲಿ 21ರ ಹರೆಯದ ಸಂಕೇತ್ ಸರ್ಗರ್ ಬೆಳ್ಳಿ ಪದಕದೊಂದಿಗೆ ಶುಭಾರಂಭ ಮಾಡಿದರು. ಕೇವಲ ಒಂದು ಕಿಲೋ ಅಂತರದಲ್ಲಿ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ನಂತರ ಸುಮಾರು 2 ಗಂಟೆಗಳ ಬಳಿಕ ಗುರುರಾಜ ಪೂಜಾರಿ ದೇಶಕ್ಕೆ ಎರಡನೇ ಚಿನ್ನ ತಂದುಕೊಟ್ಟರು.
ಕರ್ನಾಟಕದ ಉಡುಪಿ ಜಿಲ್ಲೆಯ ಗುರುರಾಜ ಪೂಜಾರಿ ಈ ಹಿಂದೆ 2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದಿದ್ದರು. ನಂತರ 56 ಕೆಜಿ ವಿಭಾಗದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದರು. ಈ ಬಾರಿ ವಿಭಾಗ ಬದಲಿಸಿದ ಗುರುರಾಜ 61 ಕೆಜಿ ವಿಭಾಗದಲ್ಲಿ ಅಖಾಡಕ್ಕಿಳಿದು ಕಂಚು ಗೆದ್ದಿದ್ದಾರೆ.
ವೇಟ್ಲಿಫ್ಟಿಂಗ್ನಲ್ಲಿ ದೇಶದ ಅತಿದೊಡ್ಡ ಸ್ಪರ್ಧಿ ಇನ್ನೂ ಸ್ಪರ್ಧಿಸದ ಕಾರಣ ಶನಿವಾರ ಭಾರತಕ್ಕೆ ಇನ್ನಷ್ಟು ಉತ್ತಮವಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಇಬ್ಬರು ಪುರುಷರ ಈವೆಂಟ್ಗಳ ನಂತರ, ಇಂದು ಭಾರತೀಯ ವೇಟ್ಲಿಫ್ಟರ್ಗಳು ಎರಡು ಮಹಿಳಾ ಸ್ಪರ್ಧೆಗಳಲ್ಲಿ ತಮ್ಮ ಶಕ್ತಿಯನ್ನು ತೋರಿಸಲಿದ್ದಾರೆ. ಇದರಲ್ಲಿ ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ಮಾಜಿ ವಿಶ್ವಚಾಂಪಿಯನ್ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಚಾನು ಅವರನ್ನು ಈಗಾಗಲೇ ಈ ಈವೆಂಟ್ನಲ್ಲಿ ಚಿನ್ನದ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಮೀರಾಬಾಯಿ ಹೊರತುಪಡಿಸಿ, ಇತರ ಸ್ಪರ್ಧಿ ಬಿಂದಿಯಾರಾಣಿ ದೇವಿ 55 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
Published On - 6:15 pm, Sat, 30 July 22