T20 World Cup 2024: T20 ವಿಶ್ವಕಪ್ಗೆ 20 ತಂಡಗಳು, 12 ದೇಶಗಳ ನೇರ ಪ್ರವೇಶ! ಅಮೆರಿಕ ಹೊಸ ಎಂಟ್ರಿ
T20 World Cup 2024: ಈ ಬಾರಿಯ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಅಗ್ರ ಎಂಟು ತಂಡಗಳಲ್ಲಿ ಸೇರ್ಪಡೆಗೊಂಡರೆ, ಕಟ್ ಆಫ್ ದಿನಾಂಕದವರೆಗೆ ಐಸಿಸಿ ಶ್ರೇಯಾಂಕದ ಮೊದಲ ಮೂರು ತಂಡಗಳು ವಿಶ್ವಕಪ್‌ನಲ್ಲಿ ನೇರ ಸ್ಥಾನ ಪಡೆಯುತ್ತವೆ.
2024ರ ಪುರುಷರ T20 ವಿಶ್ವಕಪ್ (2024 Men’s T20 World Cup) ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದ್ದು, ಇದರಲ್ಲಿ 12 ತಂಡಗಳು ನೇರವಾಗಿ ಪ್ರವೇಶಿಸಲಿವೆ. ಈ ಪಂದ್ಯಾವಳಿಯು ಏಪ್ರಿಲ್ 10 ರಂದು ನಡೆಯಲಿದ್ದು, ಇದರ ಜೊತೆಗೆ 2024 ರ ಮಹಿಳಾ T20 ವಿಶ್ವಕಪ್ ಮತ್ತು ಮಹಿಳೆಯರ ODI ವಿಶ್ವಕಪ್ 2025 (2025 Women’s ODI World Cup)ರ ಅರ್ಹತಾ ಪ್ರಕ್ರಿಯೆಯ ಬಗ್ಗೆ ICC ಮೀಟಿಂಗ್ನಲ್ಲಿ ನಿರ್ಧಾರ ಮಾಡಲಾಗಿದೆ. 2024ರ ಪುರುಷರ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ 20 ತಂಡಗಳು ಭಾಗವಹಿಸಲಿವೆ. ಇದರಡಿ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಮೊದಲ ಎಂಟು ಸ್ಥಾನ ಪಡೆಯುವ ತಂಡಗಳು ನೇರ ಸ್ಥಾನ ಪಡೆಯಲಿವೆ. ಅಲ್ಲದೆ, ವೆಸ್ಟ್ ಇಂಡೀಸ್ ಮತ್ತು ಅಮೆರಿಕವನ್ನು ನೇರವಾಗಿ ಆತಿಥೇಯರಾಗಿ ಸೇರಿಕೊಳ್ಳಲ್ಲಿವೆ. ಅಮೆರಿಕ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಭಾಗವಾಗಲಿದೆ. ಈ ರೀತಿಯಲ್ಲಿ 10 ತಂಡಗಳನ್ನು ನಿರ್ಧರಿಸಲಾಗುತ್ತದೆ. ಉಳಿದ ಎರಡು ಸ್ವಯಂಚಾಲಿತ ಅರ್ಹತಾ ಸ್ಲಾಟ್‌ಗಳನ್ನು ಈ ವರ್ಷದ ನವೆಂಬರ್ 14 ರೊಳಗೆ ಈ 10 ತಂಡಗಳನ್ನು ಹೊರತುಪಡಿಸಿ ICC T20 ಶ್ರೇಯಾಂಕದಲ್ಲಿ ಅಗ್ರ ಎರಡು ತಂಡಗಳು ಭರ್ತಿ ಮಾಡುತ್ತವೆ.
ಈ ಬಾರಿಯ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಅಗ್ರ ಎಂಟು ತಂಡಗಳಲ್ಲಿ ಸೇರ್ಪಡೆಗೊಂಡರೆ, ಕಟ್ ಆಫ್ ದಿನಾಂಕದವರೆಗೆ ಐಸಿಸಿ ಶ್ರೇಯಾಂಕದ ಮೊದಲ ಮೂರು ತಂಡಗಳು ವಿಶ್ವಕಪ್‌ನಲ್ಲಿ ನೇರ ಸ್ಥಾನ ಪಡೆಯುತ್ತವೆ. ವೆಸ್ಟ್ ಇಂಡೀಸ್ ಅಗ್ರ ಎಂಟರಲ್ಲಿ ಉಳಿಯದಿದ್ದರೆ, ಕೇವಲ ಎರಡು ತಂಡಗಳು ಮಾತ್ರ ನೇರವಾಗಿ ಶ್ರೇಯಾಂಕದ ಆಧಾರದ ಮೇಲೆ ಸ್ಥಾನ ಪಡೆಯುತ್ತವೆ. ಈ ರೀತಿಯಲ್ಲಿ 12 ತಂಡಗಳನ್ನು ನಿರ್ಧರಿಸಲಾಗುತ್ತದೆ. ಉಳಿದ ಎಂಟು ಸ್ಥಾನಗಳನ್ನು ಐಸಿಸಿಯ ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ನಿಂದ ತಲಾ ಎರಡು ತಂಡಗಳು ಇರುತ್ತವೆ. ಅಮೆರಿಕ ಮತ್ತು ಪೂರ್ವ ಏಷ್ಯಾ ಪೆಸಿಫಿಕ್ ಗುಂಪಿನಿಂದ ತಲಾ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ.
2024ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಏನಾಗಲಿದೆ 2024ರ ಮಹಿಳಾ ಟಿ20 ವಿಶ್ವಕಪ್‌ಗೂ ಇದೇ ಮಾದರಿಯನ್ನು ಪ್ರಯೋಗಿಸಲಾಗುವುದು. ಇದರಲ್ಲಿ ಒಟ್ಟು 10 ತಂಡಗಳು ಭಾಗಿಯಾಗಲಿವೆ. ಎಂಟು ತಂಡಗಳು ನೇರ ಸ್ಥಾನಗಳನ್ನು ಗಳಿಸಿವೆ. ಇದರ ಅಡಿಯಲ್ಲಿ, 2023 ರ ವಿಶ್ವಕಪ್‌ನ ಎರಡು ಗುಂಪುಗಳ ಅಗ್ರ ಮೂರು ತಂಡಗಳು ನೇರವಾಗಿ ಹೋಗುತ್ತವೆ. ಹೆಚ್ಚುವರಿಯಾಗಿ, ಆತಿಥೇಯ ದೇಶ ಮತ್ತು ಉಳಿದ ಅಗ್ರ ಶ್ರೇಯಾಂಕಿತ ತಂಡವು ಸ್ವಯಂಚಾಲಿತವಾಗಿ ಅರ್ಹತೆ ಪಡೆಯುತ್ತದೆ. ಆತಿಥೇಯ ರಾಷ್ಟ್ರವು ಮೊದಲ ಆರು ತಂಡಗಳಲ್ಲಿದ್ದರೆ, ನಂತರ ಎರಡು ತಂಡಗಳನ್ನು ಶ್ರೇಯಾಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಉಳಿದ ಎರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಬರಲಿವೆ.
ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯರ ಅಂಡರ್ 19 ವಿಶ್ವಕಪ್ ಐಸಿಸಿ ಸಭೆಯಲ್ಲಿ, ಮೊದಲ ಅಂಡರ್-19 ಮಹಿಳಾ ವಿಶ್ವಕಪ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ನಿರ್ಧರಿಸಲಾಯಿತು. ಈ ಪಂದ್ಯಾವಳಿಯು ಜನವರಿ 2023 ರಲ್ಲಿ ನಡೆಯಲಿದ್ದು, 16 ತಂಡಗಳು ಇದರಲ್ಲಿ ಭಾಗಿಯಾಗಲಿವೆ. ದಕ್ಷಿಣ ಆಫ್ರಿಕಾದಲ್ಲಿಯೇ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಇದು ನಡೆಯಲಿದೆ. ಈ ಪಂದ್ಯಾವಳಿ ಫೆಬ್ರವರಿ 9 ರಿಂದ 26 ರವರೆಗೆ ನಡೆಯಲಿದೆ.
ಇದನ್ನೂ ಓದಿ:ICC New Chairman: ವಿಶ್ವ ಕ್ರಿಕೆಟ್ ಆಳಲು ಭಾರತ ರೆಡಿ! ಐಸಿಸಿ ನೂತನ ಅಧ್ಯಕ್ಷರಾಗಿ ಜೈ ಶಾ ಆಯ್ಕೆ?