AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Champions Trophy 2025: 25 ವರ್ಷಗಳ ನಂತರ ಭಾರತ- ಕಿವೀಸ್ ಫೈಟ್; ಕೊನೆಯ ಮುಖಾಮುಖಿಯಲ್ಲಿ ಗೆದ್ದಿದ್ಯಾರು?

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಮಾರ್ಚ್ 2 ರಂದು ನಡೆಯುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯ 25 ವರ್ಷಗಳ ಬಳಿಕದ ಮುಖಾಮುಖಿಯಾಗಲಿದೆ. ಈ ಮೊದಲು ಈ ಎರಡು ತಂಡಗಳು 2000ನೇ ಆವೃತ್ತಿಯಲ್ಲಿ ಪಂದ್ಯವನ್ನಾಡಿದ್ದವು.

Champions Trophy 2025: 25 ವರ್ಷಗಳ ನಂತರ ಭಾರತ- ಕಿವೀಸ್ ಫೈಟ್; ಕೊನೆಯ ಮುಖಾಮುಖಿಯಲ್ಲಿ ಗೆದ್ದಿದ್ಯಾರು?
ಭಾರತ Vs ನ್ಯೂಜಿಲೆಂಡ್
ಪೃಥ್ವಿಶಂಕರ
|

Updated on:Mar 02, 2025 | 2:12 PM

Share

2025 ರ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತ ಭಾಗಶಃ ಮುಗಿದಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಾಳೆ ಅಂದರೆ ಮಾರ್ಚ್​ 2 ರಂದು ನಡೆಯುವ ಕೊನೆಯ ಪಂದ್ಯದೊಂದಿಗೆ ಲೀಗ್ ಹಂತ ಮುಗಿಯಲಿದೆ. ಆ ಬಳಿಕ ನಾಕೌಟ್ ಸುತ್ತು ಆರಂಭವಾಗಲಿದೆ. ಇನ್ನು ಭಾರತ ಹಾಗೂ ಕಿವೀಸ್ ನಡುವಿನ ಮುಖಾಮುಖಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಹಳ ವಿಶೇಷವಾಗಿದೆ. ಏಕೆಂದರೆ ಬರೋಬ್ಬರಿ 25 ವರ್ಷಗಳ ನಂತರ ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರುಬದುರಾಗುತ್ತಿವೆ.

ವಾಸ್ತವವಾಗಿ 8 ತಂಡಗಳ ನಡುವೆ ನಡೆಯುತ್ತಿರುವ ಈ ಐಸಿಸಿ ಚಾಂಪಿಯನ್ಸ್ ಟ್ರೋಫಿ 1998 ರಲ್ಲಿ ಪ್ರಾರಂಭವಾಯಿತ. ಈ ಟೂರ್ನಿಯನ್ನು ಪ್ರತಿ 4 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಆದರೆ ಕೊರೊನಾ ಕಾರಣದಿಂದಾಗಿ 2017 ರ ನಂತರ ಈ ಟೂರ್ನಿಯನ್ನು ನಡೆಸಿರಲಿಲ್ಲ. ಆದರೆ ಇದೀಗ 6 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡ 25 ವರ್ಷಗಳ ಬಳಿಕ ಕಿವೀಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.

25 ವರ್ಷಗಳ ನಂತರ ಮುಖಾಮುಖಿ

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ಗುಂಪು ಹಂತದಲ್ಲಿ ತನ್ನ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ರೋಹಿತ್ ಪಡೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ, ಆ ನಂತರದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲು ಟೀಂ ಇಂಡಿಯಾ ಸಿದ್ಧವಾಗಿದೆ. ಮೇಲೆ ಹೇಳಿದಂತೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 25 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪರಸ್ಪರ ಎದುರಾಗಲಿವೆ. ಈ ಟೂರ್ನಿಯಲ್ಲಿ ಈ ಎರಡೂ ತಂಡಗಳ ನಡುವೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯ ನಡೆದಿದೆ. ಈ ಪಂದ್ಯವನ್ನು 2000 ನೇ ಇಸವಿಯಲ್ಲಿ ಆಡಲಾಗಿತ್ತು.

ಇದನ್ನೂ ಓದಿ
Image
ಚಾಂಪಿಯನ್ಸ್ ಟ್ರೋಫಿ ನಡುವೆಯೇ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್
Image
ಚಾಂಪಿಯನ್ಸ್ ಟ್ರೋಫಿ: ಲೀಗ್ ಸುತ್ತಿನಲ್ಲಿ ಭಾರತದ ಕೊನೆಯ ಎದುರಾಳಿ ಯಾರು?
Image
ವಿದೇಶಿಗರನ್ನು ಅಪಹರಿಸಿ ಸುಲಿಗೆಗೆ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಎಂಟ್ರಿ? NCA ಯಿಂದ ಹೊರಬಿತ್ತು ಗುಡ್​ ನ್ಯೂಸ್

ಫೈನಲ್​ನಲ್ಲಿ ಸೋತಿದ್ದ ಭಾರತ

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿದ್ದು 2000ನೇ ಇಸವಿಯಲ್ಲಿ. ಆ ಆವೃತ್ತಿಯ ಫೈನಲ್​ನಲ್ಲಿ ಈ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡು ಎಸೆತಗಳು ಬಾಕಿ ಇರುವಂತೆ 6 ವಿಕೆಟ್‌ಗಳನ್ನು ಕಳೆದುಕೊಂಡು ಜಯ ಸಾಧಿಸಿದಲ್ಲದೆ ಚಾಂಪಿಯನ್ ಕೂಡ ಆಗಿತ್ತು. ಇದಾದ ನಂತರ, ಈ ಟೂರ್ನಿಯಲ್ಲಿ ಈ ಎರಡೂ ತಂಡಗಳ ನಡುವೆ ಯಾವುದೇ ಪಂದ್ಯ ನಡೆದಿಲ್ಲ. ಆದಾಗ್ಯೂ, ಈಗ 25 ವರ್ಷಗಳ ನಂತರ, ಈ ಎರಡೂ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿವೆ.

ಟೀಂ ಇಂಡಿಯಾ ಮೇಲುಗೈ

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಇಲ್ಲಿಯವರೆಗೆ 118 ಏಕದಿನ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಟೀಂ ಇಂಡಿಯಾ 60 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 50 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಭಾರತ ತಂಡವು ಉಭಯ ತಂಡಗಳ ನಡುವೆ ಆಡಿದ ಕೊನೆಯ 5 ಏಕದಿನ ಪಂದ್ಯಗಳನ್ನು ಗೆದ್ದಿದೆ. ಇದರರ್ಥ ಈ ಪಂದ್ಯದಲ್ಲೂ ಟೀಂ ಇಂಡಿಯಾ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Sat, 1 March 25

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್