T20 World Cup 2026: ಟೀಂ ಇಂಡಿಯಾವನ್ನು ಬಿಟ್ಟು ಇತರ ತಂಡಗಳಲ್ಲಿ 40 ಭಾರತೀಯ ಮೂಲದ ಕ್ರಿಕೆಟಿಗರು
T20 World Cup 2026: 2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿದ್ದು, 20 ತಂಡಗಳು ಕಪ್‌ಗಾಗಿ ಸೆಣಸಲಿವೆ. ಈ ಮಹತ್ವದ ಪಂದ್ಯಾವಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಮೂಲದ ಕ್ರಿಕೆಟಿಗರು ವಿವಿಧ ದೇಶಗಳ ಪರ ಆಡುತ್ತಿರುವುದು ವಿಶೇಷ. ಅಮೆರಿಕ, ಕೆನಡಾ, ಯುಎಇ ಮತ್ತು ಓಮನ್ ತಂಡಗಳಲ್ಲಿ ಇವರ ಸಂಖ್ಯೆ ಹೆಚ್ಚಿದ್ದು, ತವರು ನೆಲದಲ್ಲಿ ಅವಕಾಶ ವಂಚಿತರಾದ ಪ್ರತಿಭೆಗಳಿಗೆ ಇದೊಂದು ಜಾಗತಿಕ ವೇದಿಕೆಯಾಗಿದೆ.

2026 ರ ಟಿ20 ವಿಶ್ವಕಪ್ ( T20 World Cup 2026) ಫೆಬ್ರವರಿ 7 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ 20 ತಂಡಗಳು ಏಕೈಕ ಟ್ರೋಫಿಗಾಗಿ ಸೆಣಸಾಡಲಿವೆ. ಈ ಆವೃತ್ತಿಯಲ್ಲಿ 55 ಪಂದ್ಯಗಳು ನಡೆಯಲಿದ್ದು, ಮಾರ್ಚ್ 8 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳಲಿದೆ. ಈ ಬಾರಿಯ ಟಿ20 ವಿಶ್ವಕಪ್ನ ವಿಶೇಷತೆ ಏನೆಂದರೆ, ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ವಿವಿದ ತಂಡಗಳಲ್ಲಿ ಬರೋಬ್ಬರಿ 40 ಭಾರತೀಯ ಮೂಲದ ಕ್ರಿಕೆಟಿಗರು ಸೇರಿದ್ದಾರೆ.
ಅದರಲ್ಲೂ ಅಮೆರಿಕ, ಕೆನಡಾ, ಯುಎಇ ಮತ್ತು ಓಮನ್ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆನಡಾ ತಂಡದಲ್ಲಿ 11 ಭಾರತೀಯರು, ಯುಎಸ್ಎ ತಂಡದಲ್ಲಿ 9 ಆಟಗಾರರು ಮತ್ತು ಓಮನ್ ಮತ್ತು ಯುಎಇ ತಂಡಗಳಲ್ಲಿ ತಲಾ ಏಳು ಆಟಗಾರರು ಸೇರಿದ್ದಾರೆ. ಅಂದರೆ, ಈ ನಾಲ್ಕು ದೇಶಗಳ ತಂಡಗಳಲ್ಲಿ ಬರೋಬ್ಬರಿ 34 ಭಾರತೀಯರಿದ್ದಾರೆ. ಇತರ ದೇಶಗಳ ತಂಡಗಳನ್ನು ಸೇರಿಸಿದರೆ, ಈ ಸಂಖ್ಯೆ 40 ದಾಟುತ್ತದೆ.
ಕೆನಡಾ: ದಿಲ್‌ಪ್ರೀತ್ ಬಾಜ್ವಾ (ನಾಯಕ), ಅಜಯ್‌ವೀರ್ ಹುಂಡಾಲ್, ಅಂಶ್ ಪಟೇಲ್, ಹರ್ಷ್ ಠಾಕರ್, ಜಸ್ಕರನ್‌ದೀಪ್ ಬಟ್ಟರ್, ಕನ್ವರ್‌ಪಾಲ್ ತತ್ಗುರ್, ನವನೀತ್ ಧಲಿವಾಲ್, ರವೀಂದರ್‌ಪಾಲ್ ಸಿಂಗ್, ಶಿವಂ ಶರ್ಮಾ, ಶ್ರೇಯಸ್ ಮೊವ್ವಾ ಮತ್ತು ಯುವರಾಜ್ ಸಮ್ರಾ.
ಅಮೆರಿಕ: ಮೋನಾಂಕ್ ಪಟೇಲ್ (ನಾಯಕ), ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನೋಸ್ತುಷ್ ಕೆಂಜಿಗೆ, ಸೈತೀಜಾ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಸೌರಭ್ ನೇತ್ರವಲ್ಕರ್, ಶುಭಂ ರಂಜನೆ.
ಓಮನ್; ಜತಿಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಕರಣ್ ಸೋನಾವಾಲೆ, ಜೇ ಒಡೆದರ, ಆಶಿಶ್ ಒಡೆದರ, ವಾಸಿಂ ಅಲಿ, ಜಿತೇನ್ ರಾಮನಂದಿ.
ಯುನೈಟೆಡ್ ಅರಬ್ ಎಮಿರೇಟ್ಸ್: ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ, ಧ್ರುವ್ ಪರಾಶರ್, ಹರ್ಷಿತ್ ಕೌಶಿಕ್, ಮಾಯಾಂಕ್ ಕುಮಾರ್, ಸಿಮ್ರಂಜಿತ್ ಸಿಂಗ್, ಸೊಹೈಬ್ ಖಾನ್.
ನ್ಯೂಜಿಲೆಂಡ್: ಇಶ್ ಸೋಧಿ, ರಚಿನ್ ರವೀಂದ್ರ
ದಕ್ಷಿಣ ಆಫ್ರಿಕಾ: ಕೇಶವ್ ಮಹಾರಾಜ್
ವೆಸ್ಟ್ ಇಂಡೀಸ್: ಗುಡಕೇಶ್ ಮೋತಿ
ಇಟಲಿ: ಜಸ್ಪ್ರೀತ್ ಸಿಂಗ್
ನೆದರ್ಲ್ಯಾಂಡ್ಸ್: ಆರ್ಯನ್ ದತ್
ಟಿ20 ವಿಶ್ವಕಪ್ ಹೀಗಿರಲಿದೆ
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಲೀಗ್ ಹಂತದ ನಂತರ, ಅಗ್ರ-8 ತಂಡಗಳು ಸೂಪರ್-8 ಹಂತಕ್ಕೆ ಮುನ್ನಡೆಯುತ್ತವೆ. ಅಲ್ಲಿಂದ ಸೆಮಿಫೈನಲ್ ನಡೆಯಲಿದ್ದು, ನಂತರ ಮಾರ್ಚ್ 8 ರಂದು ಗ್ರ್ಯಾಂಡ್ ಫೈನಲ್ ನಡೆಯಲಿದೆ. ಈ ಟೂರ್ನಿಯಲ್ಲಿ ಬಾಂಗ್ಲಾದೇಶದ ಬದಲು ಐಸಿಸಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿದೆ. ಮತ್ತೊಂದೆಡೆ, ಫೆಬ್ರವರಿ 15 ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ಯೋಜನೆ ಈಗ ಬಿಸಿ ವಿಷಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Tue, 3 February 26
