AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯ ಭೀತಿ, ವರ್ಣಭೇದ ನೀತಿ… ಐಸಿಸಿ ಪಂದ್ಯಗಳಿಂದ ಹಿಂದೆ ಸರಿದಿದ್ದ 4 ತಂಡಗಳು

ಐಸಿಸಿ ಟೂರ್ನಿಗೆ ಸಂದಿಗ್ಧತೆ ಪರಿಸ್ಥಿತಿ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ಹಲವು ತಂಡಗಳು ಐಸಿಸಿ ಟೂರ್ನಿ/ಪಂದ್ಯಗಳಿಂದ ಹಿಂದೆ ಸರಿದ ಘಟನೆಗಳು ನಡೆದಿದೆ. ಈ ಘಟನೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...

ಭಯ ಭೀತಿ, ವರ್ಣಭೇದ ನೀತಿ... ಐಸಿಸಿ ಪಂದ್ಯಗಳಿಂದ ಹಿಂದೆ ಸರಿದಿದ್ದ 4 ತಂಡಗಳು
Cricket Teams
ಝಾಹಿರ್ ಯೂಸುಫ್
|

Updated on:Nov 13, 2024 | 2:05 PM

Share

ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಈ ಬಗ್ಗೆ ಐಸಿಸಿ ಮತ್ತು ಪಿಸಿಬಿಗೆ ಮಾಹಿತಿ ನೀಡಿದ್ದು, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಲಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿಯ ಈ ನಿರ್ಧಾರವು ಇದೀಗ ಹೊಸ ಚರ್ಚೆಗೆ ಕಾರಣವಾಗಿದ್ದು, ಅದರಲ್ಲೂ ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯೇ ಅಯೋಮಯವಾಗುವ ಸಾಧ್ಯತೆಯಿದೆ. ಆದರೆ ಕುತೂಹಲಕಾರಿ ವಿಷಯ ಐಸಿಸಿ ಟೂರ್ನಿಗೆ ಇಂತಹ ಸಂದಿಗ್ಧತೆ ಎದುರಾಗುತ್ತಿರುವುದು ಇದೇ ಮೊದಲೇನಲ್ಲ.

ಈ ಹಿಂದೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ಹಲವು ತಂಡಗಳು ಐಸಿಸಿ ಟೂರ್ನಿ/ಪಂದ್ಯಗಳಿಂದ ಹಿಂದೆ ಸರಿದ ಘಟನೆಗಳು ನಡೆದಿದೆ. ಈ ಘಟನೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ…

1996ರ ಏಕದಿನ ವಿಶ್ವಕಪ್:

1996 ರಲ್ಲಿ ಏಕದಿನ ವಿಶ್ವಕಪ್​ ಅನ್ನು ಭಾರತ, ಪಾಕಿಸ್ತಾನ್ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದವು. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಝಿಂಬಾಬ್ವೆ, ಶ್ರೀಲಂಕಾ ಮತ್ತು ಕೀನ್ಯಾ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಿದ್ದವು. ಆದರೆ ಪಂದ್ಯಾವಳಿಗೆ ಕೇವಲ 14 ದಿನಗಳ ಮೊದಲು, ಜನವರಿ 31 ರಂದು ಕೊಲಂಬೊದ ಸೆಂಟ್ರಲ್ ಬ್ಯಾಂಕ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರಲ್ಲಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 1400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಭದ್ರತೆಯನ್ನು ಉಲ್ಲೇಖಿಸಿ ಶ್ರೀಲಂಕಾಕ್ಕೆ ಹೋಗಲು ನಿರಾಕರಿಸಿದವು.

ಅಷ್ಟೇ ಅಲ್ಲ ಎರಡೂ ತಂಡಗಳು ಪಂದ್ಯಕ್ಕೆ ಪೂರ್ಣ ಅಂಕ ನೀಡುವಂತೆಯೂ ಆಗ್ರಹಿಸಿದ್ದವು. ಶ್ರೀಲಂಕಾ ಮಂಡಳಿಯು ಇದನ್ನು ವಿರೋಧಿಸಿದಾಗ, ಐಸಿಸಿ ತಂಡಗಳ ನಡುವೆ ಅಂಕಗಳನ್ನು ಹಂಚುವ ಮೂಲಕ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಅಲ್ಲದೆ ಶ್ರೀಲಂಕಾ ತಂಡವು ಒಟ್ಟು 4 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.

2003ರ ಏಕದಿನ ವಿಶ್ವಕಪ್:

2003ರ ಏಕದಿನ ವಿಶ್ವಕಪ್​ಗೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ಕೀನ್ಯಾ ಆತಿಥ್ಯವಹಿಸಿತ್ತು. ಆಗ ಎದುರಾಳಿ ಪಕ್ಷದ ನಾಯಕರನ್ನು ಬಂಧಿಸಿದ ಬಳಿಕ ಭದ್ರತಾ ಕಾರಣಗಳಿಂದ ಇಂಗ್ಲೆಂಡ್ ತಂಡ ಝಿಂಬಾಬ್ವೆಯ ಹರಾರೆಯಲ್ಲಿ ಆಡಲು ನಿರಾಕರಿಸಿತ್ತು. ಇದರ ಪರಿಣಾಮವನ್ನು ಇಂಗ್ಲೆಂಡ್ ತಂಡ ಅನುಭವಿಸಬೇಕಾಯಿತು. ಏಕೆಂದರೆ ಯಾವುದೇ ಚರ್ಚೆಯಿಲ್ಲದೆ ಝಿಂಬಾಬ್ವೆಗೆ ಪೂರ್ಣ ಅಂಕಗಳನ್ನು ನೀಡಲಾಯಿತು.

ಈ ಅಂಕಗಳೊಂದಿಗೆ ಝಿಂಬಾಬ್ವೆ ತಂಡ ಗುಂಪು ಹಂತದಲ್ಲಿ ಒಟ್ಟು 14 ಅಂಕ ಗಳಿಸಿ ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರೆ, ಅತ್ತ ಇಂಗ್ಲೆಂಡ್ ತಂಡ ಕೇವಲ 12 ಅಂಕ ಗಳಿಸಿ ಟೂರ್ನಿಯಿಂದ ಹೊರಬಿದ್ದಿತ್ತು.

ಅದೇ ಪಂದ್ಯಾವಳಿಯಲ್ಲಿ, ಇಂಗ್ಲೆಂಡ್‌ನಂತೆ, ನ್ಯೂಝಿಲೆಂಡ್ ಕೂಡ ನೈರೋಬಿಯಲ್ಲಿ ಕೀನ್ಯಾ ವಿರುದ್ಧ ಆಡಲು ಹೋಗಲು ನಿರಾಕರಿಸಿತ್ತು. ತಮ್ಮ ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಂಡಿತ್ತು.

ಹೀಗಾಗಿ ಈ ಪಂದ್ಯದ ಅಂಕಗಳನ್ನು ಕೀನ್ಯಾಗೆ ನೀಡಲಾಯಿತು. ಇದರ ಹೊರತಾಗಿಯೂ ನ್ಯೂಝಿಲೆಂಡ್ ತಂಡ ಸೂಪರ್ ಸಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇತ್ತ ಬೋನಸ್ ಆಗಿ ಸಿಕ್ಕಿದ ಅಂಕಗಳೊಂದಿಗೆ ಕೀನ್ಯಾ ಕೂಡ ಸೂಪರ್ ಸಿಕ್ಸ್​ಗೆ ಅರ್ಹತೆ ಪಡೆಯಿತು.

2009ರ ಟಿ20 ವಿಶ್ವಕಪ್:

2009ರ ಟಿ20 ವಿಶ್ವಕಪ್‌ನ ಆತಿಥ್ಯ ಇಂಗ್ಲೆಂಡ್‌ನ ಕೈಯಲ್ಲಿತ್ತು. ಝಿಂಬಾಬ್ವೆ ಈ ಟೂರ್ನಿಯಲ್ಲಿ ಆಡಲು ನಿರಾಕರಿಸಿತ್ತು. ಇದಕ್ಕೆ ಕಾರಣ ಬ್ರಿಟಿಷ್ ಸರ್ಕಾರವು ಝಿಂಬಾಬ್ವೆ ಕ್ರಿಕೆಟಿಗರಿಗೆ ವೀಸಾ ನೀಡಲು ನಿರಾಕರಿಸಿರುವುದು. ಆ ಬಳಿಕ ಸಮಸ್ಯೆಯನ್ನು ಪರಿಹರಿಸಲಾದರೂ, ಝಿಂಬಾಬ್ವೆ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿತು. ಝಿಂಬಾಬ್ವೆ ಟೂರ್ನಿಯಿಂದ ಹಿಂದೆ ಸರಿದ ಕಾರಣ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಲಭಿಸಿತು.

ಟೂರ್ನಿಯಿಂದ ಹಿಂದೆ ಸರಿದ ದೇಶಗಳು:

1982 ರಲ್ಲಿ ವೆಸ್ಟ್ ಇಂಡೀಸ್ ತಂಡವು ಮಹಿಳಾ ವಿಶ್ವಕಪ್‌ಗಾಗಿ ನ್ಯೂಝಿಲೆಂಡ್‌ಗೆ ಹೋಗಲು ನಿರಾಕರಿಸಿತು. ಅವರು ಇಡೀ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ಆದರೆ, ಇದರ ಹಿಂದಿನ ಕಾರಣ ಭದ್ರತೆಯಲ್ಲ, ಬದಲಾಗಿ ‘ವರ್ಣಭೇದ ನೀತಿ’.

ಇನ್ನು 1981 ರಲ್ಲಿ, ನ್ಯೂಝಿಲೆಂಡ್ ಸೌತ್ ಆಫ್ರಿಕಾ ರಗ್ಬಿ ತಂಡವನ್ನು ತವರಿನಲ್ಲಿ ಆಡಲು ಆಹ್ವಾನಿಸಿತ್ತು. ಆ ಸಮಯದಲ್ಲಿ, ಸೌತ್ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟಗಳು ನಡೆಯುತ್ತಿದ್ದವು. ಸೌತ್ ಆಫ್ರಿಕಾವನ್ನು ಆಹ್ವಾನಿಸಿದ ಕಾರಣ, ವೆಸ್ಟ್ ಇಂಡೀಸ್ ಮುಂದಿನ ವರ್ಷ ನ್ಯೂಝಿಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ಗೆ ತಮ್ಮ ತಂಡವನ್ನು ಕಳುಹಿಸಲು ನಿರಾಕರಿಸಿತು. ಇದರ ನಂತರ, ಪಂದ್ಯಾವಳಿಯಲ್ಲಿ ಭಾಗವಹಿಸುವ ಇತರ ತಂಡಗಳ ಆಟಗಾರರನ್ನು ಒಳಗೊಂಡಿರುವ ಅಂತರರಾಷ್ಟ್ರೀಯ XI ತಂಡವನ್ನು ಕಣಕ್ಕಿಳಿಸಲಾಯಿತು.

ಇದನ್ನೂ ಓದಿ: RCB ಫೈನಲ್ ಸೋಲಿನ ಕಹಿ ನೆನಪು ಕಾಡ್ತಿರುತ್ತದೆ: ಕೆಎಲ್ ರಾಹುಲ್

ವೆಸ್ಟ್ ಇಂಡೀಸ್ ಆಯೋಜಿಸಿದ್ದ 2022ರ ಅಂಡರ್-19 ವಿಶ್ವಕಪ್‌ನಿಂದ ನ್ಯೂಝಿಲೆಂಡ್ ತನ್ನ ಹೆಸರನ್ನು ಹಿಂಪಡೆದಿತ್ತು. ತಮ್ಮ ದೇಶದಲ್ಲಿ ಜಾರಿಗೆ ತಂದಿರುವ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆಯ ನಿಯಮಾನುಸಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ನಿಷೇಧವನ್ನು ಉಲ್ಲೇಖಿಸಿ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು ಈ ನಿರ್ಧಾರ ತೆಗೆದುಕೊಂಡಿತ್ತು.

Published On - 10:59 am, Wed, 13 November 24

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ