AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಟಿ20 ವಿಶ್ವಕಪ್​ ಹೊಸ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

T20 World Cup 2021: ಸೆಮಿಫೈನಲ್ ಪಂದ್ಯದ ವೇಳೆ ಟೈ ಆಗಿ ಸೂಪರ್ ಓವರ್​ ಮೂಲಕ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಾಗದಿದ್ದರೆ, ಅಥವಾ ಸೂಪರ್ ಓವರ್ ನಡೆಸಲು ಸಾಧ್ಯವಿರದ ಪರಿಸ್ಥಿತಿಯಿದ್ದರೆ, ಸೂಪರ್ 12 ಗುಂಪಿನಲ್ಲಿ ಉನ್ನತ ಸ್ಥಾನ ಪಡೆದ ತಂಡವು ಫೈನಲ್‌ಗೆ ಎಂಟ್ರಿ ಕೊಡಲಿದೆ.

T20 World Cup 2021: ಟಿ20 ವಿಶ್ವಕಪ್​ ಹೊಸ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?
Bonus for each victory: ಇನ್ನು ಪ್ರತಿ ಪಂದ್ಯದ ಗೆಲುವಿಗೆ 40 ಸಾವಿರ ಡಾಲರ್ ನೀಡಲಾಗಿದೆ. ಅಂದರೆ ಪ್ರತಿ ಪಂದ್ಯ ಗೆದ್ದಾಗಲೂ ಗೆದ್ದ ತಂಡಕ್ಕೆ ಸುಮಾರು 30 ಲಕ್ಷ ರೂ ನೀಡಲಾಗಿದೆ.
TV9 Web
| Updated By: ಝಾಹಿರ್ ಯೂಸುಫ್|

Updated on: Oct 16, 2021 | 6:09 PM

Share

ಟಿ20 ವಿಶ್ವಕಪ್​ಗೆ (T20 World Cup 2021) ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 17 ರಿಂದ ಅರ್ಹತಾ ಸುತ್ತಿನ ಪಂದ್ಯಗಳಿಗೆ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಸ್ಕಾಟ್ಲೆಂಡ್‌ನ್ನು ಎದುರಿಸಲಿದೆ. ಕ್ವಾಲಿಫೈಯರ್​ನಲ್ಲಿ 8 ತಂಡಗಳು ಇದ್ದು, ಈ ತಂಡಗಳಿಂದ 4 ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯಲಿದೆ. ಅದರಂತೆ ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಾವಳಿ ಶುರುವಾಗಲಿದೆ.

ಫೈನಲ್ ಪಂದ್ಯ ಯಾವಾಗ? ಈ ಬಾರಿಯ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದೆ. ಅರ್ಹತಾ ಸುತ್ತಿನಲ್ಲಿ 8 ತಂಡಗಳಿಂದ 4 ತಂಡ ಸೂಪರ್ 12 ಪ್ರವೇಶಿಸಿದ ಬಳಿಕ ಅಸಲಿ ಕದನ ಶುರುವಾಗಲಿದೆ. ಅದರಂತೆ ಈ ಬಾರಿ ಒಟ್ಟು 45 ಪಂದ್ಯಗಳು ನಡೆಯಲಿವೆ. ಇನ್ನು ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.

ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪವೇನು? ಪಂದ್ಯಾವಳಿಯು ಎರಡು ಸುತ್ತುಗಳಲ್ಲಿ ನಡೆಯಲಿದೆ. ಮೊದಲ ಸುತ್ತಿನಲ್ಲಿ ಎಂಟು ತಂಡಗಳು, ಎರಡು ಗುಂಪುಗಳಾಗಿ ವಿಭಜನೆಗೊಳ್ಳುತ್ತವೆ: ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ಗ್ರೂಪ್ ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್

ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಎಲ್ಲ ತಂಡಗಳನ್ನು ಒಮ್ಮೆ ಆಡುತ್ತದೆ. ಅಲ್ ಅಮೆರತ್, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಅರ್ಹತಾ ಸುತ್ತಿನ 12 ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳ ಬಳಿಕ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು  ಸೂಪರ್ 12 ನಲ್ಲಿ ಆಡುವ ಅವಕಾಶ ಪಡೆಯಲಿದೆ. ಇನ್ನು ಸೂಪರ್ 12 ಗೆ ಎಂಟು ಅಗ್ರ ಶ್ರೇಯಾಂಕದ ಟಿ20 ತಂಡಗಳು ನೇರವಾಗಿ ಆಯ್ಕೆಯಾಗಿದೆ. ಇನ್ನು ಅರ್ಹತಾ ಸುತ್ತಿನ 4 ತಂಡಗಳ ಸೇರ್ಪಡೆಯೊಂದಿಗೆ, ಸೂಪರ್ 12 ರ ಹಂತ ಶುರುವಾಗಲಿದೆ.

ಸೂಪರ್ 12 ಸ್ವರೂಪವೇನು? ಸೂಪರ್ 12 ಹಂತದಲ್ಲೂ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಈ ಗ್ರೂಪ್​ಗಳು ಹೀಗಿವೆ… ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, A1 ಮತ್ತು B2 (ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ 2 ತಂಡಗಳು) ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, B1 ಮತ್ತು A2 (ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ 2 ತಂಡಗಳು)

ಈ ಹಂತದಲ್ಲೂ ಪ್ರತಿ ತಂಡಗಳು ತನ್ನ ಗುಂಪಿನಲ್ಲಿರುವ ಎಲ್ಲಾ ತಂಡಗಳ ಜೊತೆ ಒಂದು ಪಂದ್ಯವನ್ನಾಡಲಿದೆ. ಈ ಸುತ್ತಿನಲ್ಲಿ ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ.

ಪಾಯಿಂಟ್ಸ್ ಹೇಗೆ ನಿರ್ಧರಿಸಲಾಗುತ್ತೆ? ಎರಡೂ ಸುತ್ತುಗಳಲ್ಲಿ, ಗೆಲುವಿಗೆ ಎರಡು ಅಂಕಗಳನ್ನು ನೀಡಲಾಗುತ್ತದೆ. ಪಂದ್ಯ ಟೈ ಆದರೆ ಒಂದು ಪಾಯಿಂಟ್. ಇನ್ನು ರದ್ದಾದರೆ ಅಥವಾ ಸೋತರೆ ಯಾವುದೇ ಪಾಯಿಂಟ್ ಇರುವುದಿಲ್ಲ.

ಸಮಾನ ಅಂಕ ಪಡೆದ್ರೆ? ಎರಡು ಅಥವಾ ಹೆಚ್ಚಿನ ತಂಡಗಳು ತಮ್ಮ ಗುಂಪಿನಲ್ಲಿ ಸಮನಾದ ಅಂಕಗಳನ್ನು ಪಡೆದರೆ, ಕೆಳಗಿನ ಕ್ರಮದಲ್ಲಿಅರ್ಹತೆಯನ್ನು ನಿರ್ಧರಿಸಲಾಗುತ್ತೆ.

– ಗೆಲುವುಗಳು ಸಂಖ್ಯೆ – ನೆಟ್ ರನ್ ರೆಟ್ – ಹೆಡ್-ಟು-ಹೆಡ್ ಫಲಿತಾಂಶ (ಪಂದ್ಯಗಳ ಅಂಕ ಮತ್ತು ರನ್ ಸರಾಸರಿ) – ಅರ್ಹತಾ ಸುತ್ತಿನ / ಸೂಪರ್ -12 ಒಟ್ಟಾರೆ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಡಿಆರ್‌ಎಸ್ ಲಭ್ಯವಿದೆಯೇ? ಇದೇ ಮೊದಲ ಬಾರಿಗೆ ಪುರುಷರ ಟಿ 20 ವಿಶ್ವಕಪ್​ನಲ್ಲಿ ಡಿಆರ್​ಎಸ್​ ಅವಕಾಶ ನೀಡಲಾಗುತ್ತಿದೆ. ಪ್ರತಿ ತಂಡಕ್ಕೆ ಪ್ರತಿ ಇನ್ನಿಂಗ್ಸ್‌ಗೆ ಗರಿಷ್ಠ ಎರಡು ಮೇಲ್ಮನವಿ ಅವಕಾಶವನ್ನು ಅನುಮತಿಸಲಾಗುತ್ತದೆ.

ಪಂದ್ಯ ಟೈ ಆದ್ರೆ ಏನಾಗುತ್ತೆ? ಪಂದ್ಯಗಳು ಟೈ ಆದ್ರೆ ಸೂಪರ್ ಓವರ್ ಆಡಲಿವೆ. ಸೂಪರ್ ಓವರ್ ಕೂಡ ಟೈ ಆದರೆ, ತಂಡಗಳು ಗೆಲ್ಲುವವರೆಗೂ ಸೂಪರ್ ಓವರ್ ಮುಂದುವರೆಯಲಿದೆ. ಇನ್ನು ಸೂಪರ್ ಓವರ್ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಪಂದ್ಯವನ್ನು ಟೈ ಎಂದು ಘೋಷಿಸಿ, ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗುತ್ತದೆ.

ಇನ್ನು ಸೆಮಿಫೈನಲ್ ಪಂದ್ಯದ ವೇಳೆ ಟೈ ಆಗಿ ಸೂಪರ್ ಓವರ್​ ಮೂಲಕ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಾಗದಿದ್ದರೆ, ಅಥವಾ ಸೂಪರ್ ಓವರ್ ನಡೆಸಲು ಸಾಧ್ಯವಿರದ ಪರಿಸ್ಥಿತಿಯಿದ್ದರೆ, ಸೂಪರ್ 12 ಗುಂಪಿನಲ್ಲಿ ಉನ್ನತ ಸ್ಥಾನ ಪಡೆದ ತಂಡವು ಫೈನಲ್‌ಗೆ ಎಂಟ್ರಿ ಕೊಡಲಿದೆ. ಇನ್ನು ಫೈನಲ್‌ನಲ್ಲಿ ಇದೇ ರೀತಿ ಸಂಭವಿಸಿದಲ್ಲಿ, ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಪಂದ್ಯದ ವೇಳೆ ಮಳೆ ಬಂದರೆ? ಲೀಗ್ ಹಂತದ ಪಂದ್ಯಗಳ ವೇಳೆ ಮಳೆ ಬಂದರೆ ಯಾವುದೇ ಮೀಸಲು ದಿನದಾಟ ಇರುವುದಿಲ್ಲ. ಅಲ್ಲದೆ ಕನಿಷ್ಠ 5 ಓವರ್​ಗಳ ಪಂದ್ಯ ನಡೆಸಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇದಾಗ್ಯೂ ಸೆಮಿಫೈನಲ್ ಮತ್ತು ಫೈನಲ್‌ ವೇಳೆ ಮಳೆ ಆಡಚಣೆ ಮಾಡಿದ್ರೆ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ.  ಇದಾಗ್ಯೂ ಮರುದಿನ ಕೂಡ ಅಡಚಣೆ ಉಂಟಾದರೆ ಒಂದು ಇನ್ನಿಂಗ್ಸ್‌ನಲ್ಲಿ ಕನಿಷ್ಠ 10 ಓವರ್‌ ಆಡಬೇಕಾಗುತ್ತದೆ. ಅಂದರೆ ಫಲಿತಾಂಶ ನಿರ್ಧಾರವಾಗಲು ಉಭಯ ತಂಡಗಳು 10 ಓವರ್​ ಆಡಲೇಬೇಕಾಗುತ್ತದೆ. ಇದಾಗ್ಯೂ ಪಂದ್ಯ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್​ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?

ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು