AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಶರ್ಮಾರ ಸಿಡಿಲಬ್ಬರವನ್ನು ವ್ಯರ್ಥ ಮಾಡಿದ ಅನ್​ಮೋಲ್!

ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೃತಸರ ಸೂರ್ಮಾಸ್ ಪರ ಅಭಿಷೇಕ್ ಶರ್ಮಾ ಕೇವಲ 26 ಎಸೆತಗಳಲ್ಲಿ 77 ರನ್ ಸಿಡಿಸಿ ತಂಡದ ಮೊತ್ತವನ್ನು 258 ರನ್‌ಗಳಿಗೆ ತಲುಪಿಸಿದ್ದರು. ಆದರೆ, ಅಮೋಘ ಶತಕ ಸಿಡಿಸಿದ ಅನ್​ಮೋಲ್​ಪ್ರೀತ್ ಸಿಂಗ್, ಅಭಿಷೇಕ್ ಶರ್ಮಾ ಅವರ ಈ ಸಿಡಿಲಬ್ಬರದ ಶ್ರಮವನ್ನು ವ್ಯರ್ಥ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಭಿಷೇಕ್ ಶರ್ಮಾರ ಸಿಡಿಲಬ್ಬರವನ್ನು ವ್ಯರ್ಥ ಮಾಡಿದ ಅನ್​ಮೋಲ್!
Abhishek Sharma
ಝಾಹಿರ್ ಯೂಸುಫ್
|

Updated on: Aug 31, 2026 | 8:28 AM

Share

ಟೀಮ್ ಇಂಡಿಯಾದ ಸ್ಪೋಟಕ ದಾಂಡಿಗ ಅಭಿಷೇಕ್ ಶರ್ಮಾ ಶೇರ್-ಎ-ಪಂಜಾಬ್ ಟಿ20 ಲೀಗ್ 2026ರ ಉದ್ಘಾಟನಾ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮೃತಸರ್ ಸೂರ್ಮಾಸ್ ತಂಡದ ನಾಯಕರಾಗಿ ಕಣಕ್ಕಿಳಿದ ಅಭಿಷೇಕ್, ಮೊಹಾಲಿ ಕಿಂಗ್ಸ್ ವಿರುದ್ಧ ಕೇವಲ 26 ಎಸೆತಗಳಲ್ಲಿ 77 ರನ್ ಸಿಡಿಸಿ ಮಿಂಚಿದ್ದಾರೆ.

ಅಭಿಷೇಕ್ ಇನ್ನಿಂಗ್ಸ್‌ನ ಮುಖ್ಯಾಂಶಗಳು:

ಸಿಡಿಲಬ್ಬರದ ಬ್ಯಾಟಿಂಗ್: ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 26 ಎಸೆತಗಳನ್ನು ಎದುರಿಸಿ 296.15ರ ಸ್ಟ್ರೈಕ್ ರೇಟ್‌ನಲ್ಲಿ 77 ರನ್ ಚಚ್ಚಿದರು.

ಬೌಂಡರಿಗಳ ಸುರಿಮಳೆ: ಅಭಿಷೇಕ್ ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.

ದಾಖಲೆಯ ಜೊತೆಯಾಟ: ಆರಂಭಿಕ ಆಟಗಾರ ಸಹಜ್ ಧವನ್ (18 ಎಸೆತಗಳಲ್ಲಿ 45 ರನ್) ಅವರ ಜೊತೆಗೂಡಿ ಅಭಿಷೇಕ್ ಶರ್ಮಾ, ಕೇವಲ 31 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟವಾಡಿ ಅಮೃತಸರ್ ಸೂರ್ಮಾಸ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದ್ದರು.

ಬೃಹತ್ ಮೊತ್ತ ಕಲೆಹಾಕಿದ ಸೂರ್ಮಾಸ್!

ಅಭಿಷೇಕ್ ಶರ್ಮಾ ಅವರ ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಮೃತಸರ್ ಸೂರ್ಮಾಸ್ ತಂಡ 19.5 ಓವರ್‌ಗಳಲ್ಲಿ 258 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

259 ರನ್​ಗಳ ಕಠಿಣ ಗುರಿ ಪಡೆದ ಮೊಹಾಲಿ ಕಿಂಗ್ಸ್  ತಂಡದ ಪರ ಅನ್​ಮೋಲ್ ಪ್ರೀತ್ ಸಿಂಗ್ 51 ಎಸೆತಗಳಲ್ಲಿ 12 ಭರ್ಜರಿ ಸಿಕ್ಸರ್​ನೊಂದಿಗೆ 133 ರನ್ ಬಾರಿಸಿದರು. ಈ ಮೂಲಕ 19.3 ಓವರ್​ಗಳಲ್ಲಿ 259 ರನ್​ಗಳಿಸುವ ಮೂಲಕ ಮೊಹಾಲಿ ಕಿಂಗ್ಸ್​ ತಂಡ ಭರ್ಜರಿ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಅಮೃತಸರ್​ ಸೂರ್ಮಾಸ್ ತಂಡ ಸೋತರೂ ಸಹ, ಮುಂಬರುವ ಭಾರತ ತಂಡದ ಸರಣಿಗಳ ಆಯ್ಕೆಗೂ ಮುನ್ನ ಅಭಿಷೇಕ್ ಶರ್ಮಾ ಫಾರ್ಮ್‌ಗೆ ಮರಳಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

ಅಮೃತಸರ್ ಸೂರ್ಮಾಸ್ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ (ನಾಯಕ) , ರೇವನ್ ಪ್ರೀತ್ ಸಿಂಗ್ , ಸಹಜ್ ಧವನ್ (ವಿಕೆಟ್ ಕೀಪರ್) , ರಾಹುಲ್ ಕುಮಾರ್ , ಜಶನ್‌ಪ್ರೀತ್ ಸಿಂಗ್ , ಅಭಯ್ ಚೌಧರಿ , ನಮನ್ ಧೀರ್ , ಮಾಯಾಂಕ್ ಮಾರ್ಕಂಡೆ , ಆಕಾಶ್ ಪಾಂಡೆ , ಜೈಪರ್ತಾಪ್ ಸಿಂಗ್ ಜೋಹಲ್ , ವೈಭವ್ ಕಲ್ರಾ.

ಇದನ್ನೂ ಓದಿ: ಮಾರಕ ಬೌಲಿಂಗ್​​ನೊಂದಿಗೆ 74 ವರ್ಷಗಳ ಹಳೆಯ ಮುರಿದ ಅಬ್ಬಾಸ್!

ಮೊಹಾಲಿ ಕಿಂಗ್ ಪ್ಲೇಯಿಂಗ್ 11: ರಾಜಿಂದರ್ ಸಿಂಗ್ ದೇವಗನ್ (ವಿಕೆಟ್ ಕೀಪರ್) , ಆಯುಷ್ ಗೋಯಲ್ , ಅನ್​ಮೋಲ್ ಪ್ರೀತ್ ಸಿಂಗ್, ರಮಣದೀಪ್ ಸಿಂಗ್ (ನಾಯಕ) , ತನ್ಮಯ್ ಧರ್ಣಿ , ಆರ್ಯನ್ ಭಾಟಿಯಾ , ಗುರ್ಮೆಹರ್ ಸಾರಾ , ಸೊಹ್ರಾಬ್ ಧಲಿವಾಲ್ ,ತೇಜ್‌ಪ್ರೀತ್ ಸಿಂಗ್ , ನಿಪುನ್ ಪಂಡಿತ , ಹರ್‌ಪ್ರೀತ್ ಬ್ರಾರ್.

Follow Us
ಎಫ್​ಐಆರ್ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ
ಎಫ್​ಐಆರ್ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು