ಏಷ್ಯನ್ ಗೇಮ್ಸ್​: ಟೀಮ್ ಇಂಡಿಯಾ ಪಂದ್ಯಗಳ ಸಮಯ ಬದಲಾವಣೆ

ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಜಪಾನ್‌ನ ಹವಾಮಾನ ಮತ್ತು ಮಂದಬೆಳಕಿನ ಸವಾಲನ್ನು ಎದುರಿಸಲು ಏಷ್ಯನ್ ಗೇಮ್ಸ್​ ಆಯೋಜಕರು ಪಂದ್ಯದ ಸಮಯವನ್ನು ರೀ-ಶೆಡ್ಯೂಲ್ ಮಾಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಪಂದ್ಯಗಳು ಬೇಗನೆ ಶುರುವಾಗಲಿದೆ.

ಏಷ್ಯನ್ ಗೇಮ್ಸ್​: ಟೀಮ್ ಇಂಡಿಯಾ ಪಂದ್ಯಗಳ ಸಮಯ ಬದಲಾವಣೆ
ಟೀಮ್ ಇಂಡಿಯಾ
Image Credit source: GettyImages

Updated on: Sep 13, 2026 | 9:52 AM

ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಗೆ ಮಂದಬೆಳಕಿನ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಯೋಜಕರು ಪುರುಷರ ನಾಕೌಟ್ ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದಾರೆ. ಅದರಂತೆ ಪಂದ್ಯಗಳ ಸುಗಮ ಮುಕ್ತಾಯಕ್ಕಾಗಿ ಸಮಯವನ್ನು 30 ನಿಮಿಷ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ.

ಮಂದಬೆಳಕಿನ ಸಮಸ್ಯೆ:

ಜಪಾನ್‌ನಲ್ಲಿ ಮಧ್ಯಾಹ್ನದ ನಂತರ ಬೇಗನೇ ಬೆಳಕು ಕಡಿಮೆಯಾಗುವುದರಿಂದ ಪಂದ್ಯಗಳಿಗೆ ಅಡ್ಡಿಯಾಗದಂತೆ ತಡೆಯಲು ಮಧ್ಯಾಹ್ನದ ಪುರುಷರ ನಾಕೌಟ್ ಪಂದ್ಯಗಳನ್ನು 30 ನಿಮಿಷ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಹಿಂದೆ ನಿಗದಿಯಾಗಿದ್ದ ಮಧ್ಯಾಹ್ನ 2:00 ಗಂಟೆಯ ಬದಲಿಗೆ, ಈಗ ಪಂದ್ಯಗಳು ಸ್ಥಳೀಯ ಸಮಯ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿವೆ.

ಅದರಂತೆ ಭಾರತೀಯ ಕಾಲಮಾನದ (IST) ಪ್ರಕಾರ ಈ ಪಂದ್ಯಗಳು ಬೆಳಗ್ಗೆ 10:00 ಗಂಟೆಗೆ ನೇರಪ್ರಸಾರಗೊಳ್ಳಲಿವೆ (ಜಪಾನ್ ಭಾರತಕ್ಕಿಂತ 3.5 ಗಂಟೆ ಮುಂದಿದೆ). ಇನ್ನುಳಿದಂತೆ ಬೆಳಗ್ಗಿನ ಪಂದ್ಯಗಳು ಯಾವುದೇ ಬದಲಾವಣೆಯಿಲ್ಲದೆ ಸ್ಥಳೀಯ ಸಮಯ 9:00 ಗಂಟೆಗೆ (ಭಾರತೀಯ ಕಾಲಮಾನ ಬೆಳಗ್ಗೆ 5:30) ಆರಂಭವಾಗಲಿವೆ.

ಕಣದಲ್ಲಿ ಟೀಮ್ ಇಂಡಿಯಾ:

ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ. ಜಪಾನ್‌ನ ನಿಸ್ಶಿನ್‌ನಲ್ಲಿರುವ ‘ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್’ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ಜರುಗಲಿವೆ.

ಭಾರತೀಯ ಮಹಿಳಾ ತಂಡ: ಸೆಪ್ಟೆಂಬರ್ 18, 2026 ರಂದು ಜಪಾನ್ ವಿರುದ್ಧ ತನ್ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 10:30 ಕ್ಕೆ ಆರಂಭವಾಗಲಿದೆ.

ಭಾರತೀಯ ಪುರುಷರ ತಂಡ: ಪರಿಷ್ಕೃತ ವೇಳಾಪಟ್ಟಿಯ ಅನ್ವಯ ಸೆಪ್ಟೆಂಬರ್ 28, 2026 ರಂದು ತನ್ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 10:00 ಗಂಟೆಗೆ ಶುರುವಾಗಲಿದೆ.

ಇದನ್ನೂ ಓದಿ: ಪಾಕ್ ತಂಡದ್ದು ಬರೀ ಸೋಲಲ್ಲ… 72 ವರ್ಷಗಳಲ್ಲೇ ಕಂಡ ಅತ್ಯಂತ ಹೀನಾಯ ಸೋಲು!

ಏಷ್ಯಾಕಪ್​ಗೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಜಸ್​ಪ್ರೀತ್ ಬುಮ್ರಾ.

Published On - 9:51 am, Sun, 13 September 26

Loading...
Unable to load recommendations.
Follow Us