IPL 2022: ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯನ್ನರ ಪಾರುಪತ್ಯ: ಯಾರಿಗೆ ಎಷ್ಟು ಕೋಟಿ?
IPL 2022 Mega Auction: ಒಟ್ಟಿನಲ್ಲಿ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ 20 ಆಟಗಾರರು ಭರ್ಜರಿ ಮೊತ್ತದೊಂದಿಗೆ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಲ್ಲಿ ಯಾರು ಹರಾಜಾಗಲಿದ್ದಾರೆ? ಯಾರು ಹಾಗೆಯೇ ಉಳಿಯಲಿದ್ದಾರೆ ಕಾದು ನೋಡಬೇಕಿದೆ.
ಮುಂಬರುವ ಐಪಿಎಲ್ ಮೆಗಾ ಹರಾಜಿಗಾಗಿ 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 318 ವಿದೇಶಿ ಆಟಗಾರರಿದ್ದಾರೆ. ಈ ವಿದೇಶಿ ಆಟಗಾರರ ಪಟ್ಟಿಯಲ್ಲಿ ಅತೀ ಹೆಚ್ಚು ಆಸ್ಟ್ರೇಲಿಯಾ ಆಟಗಾರರಿರುವುದು ವಿಶೇಷ. ಅಂದರೆ ಈ ಬಾರಿ ಆಸ್ಟ್ರೇಲಿಯಾದ 59 ಆಟಗಾರರು ಹೆಸರು ರಿಜಿಸ್ಟರ್ ಮಾಡಿದ್ದಾರೆ. ಹೀಗಾಗಿ ಮೆಗಾ ಹರಾಜಿನಲ್ಲಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯನ್ನರೇ ಪಾರುಪತ್ಯ ಮೆರೆಯುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಈ ಬಾರಿ ರಿಟೈನ್ ಮಾಡಿಕೊಂಡ ಆಟಗಾರರ ಪಟ್ಟಿಯಲ್ಲೂ ಇಬ್ಬರು ಆಸ್ಟ್ರೇಲಿಯಾ ಕ್ರಿಕೆಟಿಗರು ಇರುವುದು ಮತ್ತೊಂದು ವಿಶೇಷ. ಅದರಂತೆ ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಲಕ್ನೋ ಪರ ಮಾರ್ಕಸ್ ಸ್ಟೊಯಿನಿಸ್ ಒಪ್ಪಂದ ಮಾಡಿಕೊಂಡಿದ್ದಾರೆ.
ಇನ್ನು ಮೆಗಾ ಹರಾಜಿಗೆ ಹೆಸರು ನೀಡಿರುವ ಆಸ್ಟ್ರೇಲಿಯಾ ಆಟಗಾರರಲ್ಲಿ 9 ಮಂದಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಅವರೆಂದರೆ… ಆಷ್ಟನ್ ಅಗರ್, ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಝಂಪಾ.
ಹಾಗೆಯೇ 4 ಆಸ್ಟ್ರೇಲಿಯಾ ಕ್ರಿಕೆಟಿಗರು 1.5 ಕೋಟಿ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ… ಆರೋನ್ ಫಿಂಚ್, ಕ್ರಿಸ್ ಲಿನ್, ನಾಥನ್ ಲಿಯಾನ್, ಕೇನ್ ರಿಚರ್ಡ್ಸನ್.
ಇನ್ನು 1 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ ಆಸ್ಟ್ರೇಲಿಯಾ ಆಟಗಾರರೆಂದರೆ ಜೇಮ್ಸ್ ಫಾಲ್ಕ್ನರ್, ಮೊಯ್ಸೆಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೇನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಡಾರ್ಸಿ ಶಾರ್ಟ್ ಮತ್ತು ಆಂಡ್ರ್ಯೂ ಟೈ.
ಅಂದರೆ ಆಸ್ಟ್ರೇಲಿಯಾ 59 ಆಟಗಾರರಲ್ಲಿ 20 ಆಟಗಾರರು ತಮ್ಮ ಮೂಲ ಬೆಲೆಯನ್ನು 1 ಕೋಟಿ ಹಾಗೂ ಅದಕ್ಕಿಂತಲೂ ಅಧಿಕ ಮೊತ್ತವನ್ನು ಘೋಷಿಸಿದ್ದಾರೆ. ಇನ್ನುಳಿದ ಆಟಗಾರರ ಲಕ್ಷಗಳ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ 20 ಆಟಗಾರರು ಭರ್ಜರಿ ಮೊತ್ತದೊಂದಿಗೆ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಲ್ಲಿ ಯಾರು ಹರಾಜಾಗಲಿದ್ದಾರೆ? ಯಾರು ಹಾಗೆಯೇ ಉಳಿಯಲಿದ್ದಾರೆ ಕಾದು ನೋಡಬೇಕಿದೆ.
ಯಾವ ದೇಶದಿಂದ ಎಷ್ಟು ಆಟಗಾರರು ಹೆಸರು ನೀಡಿದ್ದಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ:-
ಅಫ್ಘಾನಿಸ್ತಾನ- 20 ಆಟಗಾರರು
ಆಸ್ಟ್ರೇಲಿಯಾ- 59 ಆಟಗಾರರು
ಬಾಂಗ್ಲಾದೇಶ- 9 ಆಟಗಾರರು
ಇಂಗ್ಲೆಂಡ್- 30 ಆಟಗಾರರು
ಐರ್ಲೆಂಡ್- 3 ಆಟಗಾರರು
ನ್ಯೂಜಿಲ್ಯಾಂಡ್- 29 ಆಟಗಾರರು
ದಕ್ಷಿಣ ಆಫ್ರಿಕಾ- 48 ಆಟಗಾರರು
ಶ್ರೀಲಂಕಾ- 36 ಆಟಗಾರರು
ವೆಸ್ಟ್ ಇಂಡೀಸ್- 41 ಆಟಗಾರರು
ಭೂತಾನ್- 1 ಆಟಗಾರ
ನಮೀಬಿಯಾ- 5 ಆಟಗಾರರು
ನೇಪಾಳ- 15 ಆಟಗಾರರು
ನೆದರ್ಲ್ಯಾಂಡ್ಸ್- 1 ಆಟಗಾರ
ಓಮಾನ್- 3 ಆಟಗಾರರು
ಸ್ಕಾಟ್ಲೆಂಡ್- 1 ಆಟಗಾರರು
ಯುಎಇ- 1 ಆಟಗಾರ
ಯುಎಸ್ಎ- 14 ಆಟಗಾರರು
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Australia will be the flavor of IPL Auction with 59 players in fray)