IPL 2022 Auction: ದೇಶದ ಪರ ಒಂದೇ ಒಂದು ಪಂದ್ಯವಾಡದಿದ್ದರೂ, ಕೋಟಿ ಕೋಟಿಗಳಿಸಿದ ಆಟಗಾರರು ಇವರು..!
Most Expensive uncapped players in IPL 2022 mega auction: ಅದರಲ್ಲೂ ಕೆಲ ಆಟಗಾರರು ಐಪಿಎಲ್ ಮೂಲಕ ರಾಷ್ಟ್ರೀಯ ತಂಡದ ಕದ ತಟ್ಟಿದ್ದಾರೆ. ಹೀಗೆ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಅನ್‌ಕ್ಯಾಪ್ಡ್ ಪ್ಲೇಯರ್ಸ್ ಆಗಿ ಗುರುತಿಸಿಕೊಂಡ ಕೆಲ ಆಟಗಾರರು ಭರ್ಜರಿ ಮೊತ್ತ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಐಪಿಎಲ್ ಸೀಸನ್ 15 ಮೆಗಾ ಹರಾಜಿನಲ್ಲಿ ಕೆಲವರು 9 ಕೋಟಿಗೆ ಮಾರಾಟವಾದರೆ ಕೆಲವರು ಮತ್ತೆ 10 ಕೋಟಿಗೆ ಹರಾಜಾಗಿದ್ದಾರೆ. ಆದರೆ ಈ ಆಟಗಾರರು ತಮ್ಮ ದೇಶಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ ಎಂಬುದು ವಿಶೇಷ. ಅಂದರೆ ರಾಷ್ಟ್ರೀಯ ತಂಡದ ಪರ ಟೆಸ್ಟ್, ಅಥವಾ ಏಕದಿನ ಅಥವಾ ಟಿ20 ಪಂದ್ಯವಾಡಿಲ್ಲ. ಇದಾಗ್ಯೂ ಐಪಿಎಲ್ ಮೂಲಕ ಫುಲ್ ಫೇಮಸ್ ಆಗಿದ್ದಾರೆ. ಅದರಲ್ಲೂ ಕೆಲ ಆಟಗಾರರು ಐಪಿಎಲ್ ಮೂಲಕ ರಾಷ್ಟ್ರೀಯ ತಂಡದ ಕದ ತಟ್ಟಿದ್ದಾರೆ. ಹೀಗೆ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಅನ್‌ಕ್ಯಾಪ್ಡ್ ಪ್ಲೇಯರ್ಸ್ ಆಗಿ ಗುರುತಿಸಿಕೊಂಡ ಕೆಲ ಆಟಗಾರರು ಭರ್ಜರಿ ಮೊತ್ತ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಆಟಗಾರರ ಕಿರು ಪರಿಚಯ ಇಲ್ಲಿದೆ.
ಅವೇಶ್ ಖಾನ್- ಬಲಗೈ ವೇಗದ ಬೌಲರ್ ವೇಗದ ಬೌಲರ್ ಅವೇಶ್ ಖಾನ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 10 ಕೋಟಿಗೆ ಹರಾಜಾಗಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ಕೂಡ ಅವೇಶ್ ಖಾನ್ ಬರೆದಿದ್ದಾರೆ.
ಶಾರುಖ್ ಖಾನ್- ಬಿಗ್ ಹಿಟ್ಟರ್ ಶಾರುಖ್ ಖಾನ್ IPL 2022 ರ ಎರಡನೇ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ. ಶಾರೂಖ್ ಅವರನ್ನು ಮತ್ತೊಮ್ಮೆ ಪಂಜಾಬ್ ಕಿಂಗ್ಸ್ 9 ಕೋಟಿ ನೀಡಿ ಖರೀದಿಸಿದೆ.
ರಾಹುಲ್ ತೆವಾಠಿಯಾ- ರಾಜಸ್ಥಾನ್ ರಾಯಲ್ಸ್ ಪರ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ರಾಹುಲ್ ತೆವಾಠಿಯಾರನ್ನು ಈ ಬಾರಿ ಗುಜರಾತ್ ಟೈಟಾನ್ಸ್ 9 ಕೋಟಿ ರೂ.ಗೆ ಖರೀದಿಸಿದೆ.
ರಾಹುಲ್ ತ್ರಿಪಾಠಿ- ಕೆಕೆಆರ್ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ರಾಹುಲ್ ತ್ರಿಪಾಠಿ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 8.5 ಕೋಟಿ ರೂ. ಗೆ ಹರಾಜಾಗಿದ್ದಾರೆ
ಟಿಮ್ ಡೇವಿಡ್ – ಆಸ್ಟ್ರೇಲಿಯಾ ಮೂಲದ ಸಿಂಗಾಪುರ್ ಕ್ರಿಕೆಟಿಗ ಟಿಮ್ ಡೇವಿಡ್ ಅವರನ್ನೂ ಮುಂಬೈ ಇಂಡಿಯನ್ಸ್ ಬರೋಬ್ಬರಿ 8.25 ಕೋಟಿ ರೂ. ನೀಡಿ ಖರೀದಿಸಿದೆ.
ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!
ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ
(Avesh Khan to Tim David: Most Expensive uncapped players in IPL 2022 mega auction)
