Avi Barot: ಶಾಕಿಂಗ್: ಭಾರತ ಅಂಡರ್-19 ತಂಡದ ಮಾಜಿ ನಾಯಕ, 29 ವರ್ಷದ ಸ್ಟಾರ್ ಬ್ಯಾಟ್ಸ್ಮನ್ ನಿಧನ
Saurashtra cricketer Avi Barot Death: ಸೌರಾಷ್ಟ್ರ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದ ಅವಿ ಬರೊತ್ ಶುಕ್ರವಾರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಇವರಿಗೆ 29 ವರ್ಷ ವಯಸ್ಸಾಗಿತ್ತು.

ಭಾರತ ಅಂಡರ್-19 (India U19) ತಂಡದ ಮಾಜಿ ನಾಯಕ ಮತ್ತು ಸೌರಾಷ್ಟ್ರ ತಂಡದ (Saurashtra Cricket) ಕ್ರಿಕೆಟಿಗ ಅವಿ ಬರೊತ್ (Avi Barot) ಶುಕ್ರವಾರ ಹೃದಯ ಸ್ತಂಭನದಿಂದ (Cardiac Arrest) ನಿಧನರಾಗಿದ್ದಾರೆ. ಇವರಿಗೆ ಕೇವಲ 29 ವರ್ಷ ವಯಸ್ಸಾಗಿದ್ದು, ಅವಿ ನಿಧನಕ್ಕೆ ಸೌರಾಷ್ಟ್ರ ಕ್ರಿಕೆಟ್ ಮಂಡಳಿ, ಬಿಸಿಸಿಐ ಸಂತಾಪ ವ್ಯಕ್ತಪಡಿಸಿದೆ.
ಸೌರಾಷ್ಟ್ರ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದ ಇವರು 38 ಪ್ರಥಮ ದರ್ಜೆ ಕ್ರಿಕೆಟ್, 38 ಲಿಸ್ಟ್ ಎ ಪಂದ್ಯ ಮತ್ತು 20 ದೇಶೀಯ ಟಿ20 ಪಂದ್ಯಗಳನ್ನು ಇವರು ಆಡಿದ್ದರು. ಈ ಬಗ್ಗೆ ಸೌರಾಷ್ಟ್ರ ಕ್ರಿಕೆಟ್ ಮಾಹಿತಿ ಹಂಚಿಕೊಂಡಿದ್ದು, “ಈ ಆಘಾತಕಾರಿ ಸುದ್ದಿ ಕೇಳಿ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ಗೆ ತುಂಬಾನೆ ಬೇಸರವಾಗಿದೆ. ಸೌರಾಷ್ಟ್ರ ಕ್ರಿಕೆಟ್ ಇವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಕ್ಟೋಬರ್ 15 ರಂದು ಇವರು ಹೃದಯ ಸ್ತಂಭನದಿಂದ ಕೊನೆಯುಸಿರು ಎಳೆದಿದ್ದಾರೆ. ಇವರಿಗೆ 29 ವರ್ಷ ವಯಸ್ಸಾಗಿತ್ತು” ಎಂದು ಹೇಳಿದೆ.
Our hearts bleed as outstanding player and very noble being Avi Barot is no more with us. It’s extremely shocking and saddening. May his noble soul be in shelter of benevolent Almighty. Avi, you shall be missed forever #rip @saucricket @GCAMotera @BCCI @BCCIdomestic #cricket pic.twitter.com/wzRONq95JV
— Saurashtra Cricket (@saucricket) October 16, 2021
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷ ಜಯದೇವ್ ಶಾ, “ಅವಿ ಇನ್ನಿಲ್ಲ ಎಂಬುದು ತುಂಬಾನೆ ಬೇಸರ ತರಿಸಿದೆ. ಅವನೊಬ್ಬ ಗ್ರೇಟ್ ಟೀಮ್ಮೇಟ್ ಕ್ರಿಕೆಟ್ ಬಗ್ಗೆ ಅತ್ಯುತ್ತಮ ಸ್ಕಿಲ್ ಉಳ್ಳ ಆಟಗಾರನಾಗಿದ್ದ. ಇತ್ತೀಚಿನ ಎಲ್ಲ ದೇಶೀಯ ಕ್ರಿಕೆಟ್ನಲ್ಲಿ ಇವರು ಅದ್ಭುತ ಪ್ರದರ್ಶನ ತೋರಿದ್ದರು. ಎಲ್ಲರ ಜೊತೆಗೆ ಸ್ನೇಹದಿಂದ ಇರುತ್ತಿದ್ದರು. ಈ ವಿಚಾರ ತಿಳಿದು ನಮಗೆ ನಂಬಲೇ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.
MS Dhoni: ಧೋನಿಯ ಪ್ರಕಾರ ಈ ವರ್ಷ ಐಪಿಎಲ್ ಪ್ರಶಸ್ತಿ ಗೆಲ್ಲಲು ಅರ್ಹವಾದ ತಂಡ ಸಿಎಸ್ಕೆ ಅಲ್ಲವಂತೆ: ಮತ್ಯಾವುದು?
(Avi Barot Death Saurashtra cricketer Avi Barot passed away due to severe cardiac arrest)
