IPL 2021 Awards: ಒಂದಲ್ಲ ಎರಡಲ್ಲ ಮೂರು ಪ್ರಶಸ್ತಿ: ಐಪಿಎಲ್ 2021ರಿಂದ ಹರ್ಷಲ್ ಪಟೇಲ್​ಗೆ ಸಿಕ್ಕ ಹಣವೆಷ್ಟು ಗೊತ್ತಾ?

IPL 2021 Prize Money: ಐಪಿಎಲ್ 2021 ರಲ್ಲಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲು ಮುಖ್ಯ ಕಾರಣ ಹರ್ಷಲ್ ಪಟೇಲ್ ಕೂಡ ಹೌದು. ತಾನು ನೀಡಿದ ಅದ್ಭುತ ಪ್ರದರ್ಶನಕ್ಕೆ ಪರ್ಪಲ್ ಕ್ಯಾಪ್ ಜೊತೆಗೆ ಪಟೇಲ್ ಮತ್ತೆರಡು ಪ್ರಶಸ್ತಿಗಳನ್ನು ಬಾಜಿಕೊಂಡಿದ್ದಾರೆ.

IPL 2021 Awards: ಒಂದಲ್ಲ ಎರಡಲ್ಲ ಮೂರು ಪ್ರಶಸ್ತಿ: ಐಪಿಎಲ್ 2021ರಿಂದ ಹರ್ಷಲ್ ಪಟೇಲ್​ಗೆ ಸಿಕ್ಕ ಹಣವೆಷ್ಟು ಗೊತ್ತಾ?
Harshal Patel IPL 2021 Prize Money
TV9kannada Web Team

| Edited By: Vinay Bhat

Oct 16, 2021 | 12:16 PM

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿಗೆ ತೆರೆಬಿದ್ದಿದೆ. ಶುಕ್ರವಾರ ನಡೆದ ಫೈನಲ್ ಕಾದಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬಗ್ಗುಬಡಿದು ಎಂ. ಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK vs KKR) ತಂಡ ಗೆದ್ದು ಬೀಗಿದ್ದು, ನಾಲ್ಕನೇ ಬಾರಿ ಟ್ರೋಫಿಗೆ (CSK 4th IPL Title) ಮುತ್ತಿಕ್ಕಿದ ಸಾಧನೆ ಮಾಡಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಕೊರೊನಾ ಕಾರಣದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2021ರ ವಿಜೇತ, ರನ್ನರ್ ಅಪ್ ಮತ್ತು ಇತರೆ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು ಕಡಿತಗೊಳಿಸಿದೆ. ಹೀಗಾಗಿ ಚಾಂಪಿಯನ್ ಸಿಎಸ್​ಕೆ 20 ಕೋಟಿ ರೂಪಾಯಿ (CSK 20 Cr) ಹಣವನ್ನಷ್ಟೆ ಬಾಜಿಕೊಂಡಿತು. ಇದರ ನಡುವೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ (RCB) ತಂಡದ ಪರ ಮಿಂಚಿ ದಾಖಲೆ ಬರೆದ ಹರ್ಷಲ್ ಪಟೇಲ್ (Harshal Patel) ಕೂಡ ಪ್ರಮುಖ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಐಪಿಎಲ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್​ ಪ್ರವೇಶಿಸಲು ಮುಖ್ಯ ಕಾರಣ ಹರ್ಷಲ್ ಪಟೇಲ್ ಕೂಡ ಹೌದು. ಜೊತೆಗೆ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯನ್ನೂ ಬರೆದರು. ಐಪಿಎಲ್ ಇತಿಹಾಸದಲ್ಲೇ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಸಾಲಿನಲ್ಲಿ ಡ್ವೇನ್ ಬ್ರಾವೋ ಜೊತೆಗೆ ಸ್ಥಾನ ಹಂಚಿಕೊಂಡರು. ಆರ್​ಸಿಬಿ ಪರ ಸೀಸನ್​ವೊಂದರಲ್ಲಿ ಗರಿಷ್ಠ ಕಿತ್ತ ಆಟಗಾರ ಎಂದೆನಿಸಿದರು. ಐಪಿಎಲ್ 2021 ರಲ್ಲಿ 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಕೂಡ ತಮ್ಮದಾಗಿಸಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ಹರ್ಷಲ್ ಪಟೇಲ್ ಒಟ್ಟು ಮೂರು ಪ್ರಶಸ್ತಿಗಳನ್ನು ಬಾಜಿಕೊಂಡಿದ್ದಾರೆ. 32 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ತೊಟ್ಟಿದ್ದಕ್ಕಾಗಿ 10 ಲಕ್ಷ, ಗೇಮ್ ಚೇಂಜ್ ಆಫ್ ದಿ ಸೀಸನ್​ಗೆ 10 ಲಕ್ಷ ಮತ್ತು ವ್ಯಾಲ್ಯುವೇಬಲ್ ಆಫ್ ದಿ ಸೀಸನ್​ಗೆ 10 ಲಕ್ಷ. ಹೀಗೆ ಒಟ್ಟು 30 ಲಕ್ಷವನ್ನು ಹರ್ಷಲ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಇನ್ನು ಆರ್​ಸಿಬಿ ಇವರನ್ನು ಹರಾಜಿಗು ಮುನ್ನ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ನಿಂದ ಟ್ರಾನ್ಸ್​ಫರ್ ಮಾಡಿತ್ತು.

ಪ್ರಶಸ್ತಿ ವಿವರ ಇಲ್ಲಿದೆ:

ಗೆದ್ದ ತಂಡ – ಚೆನ್ನೈ ಸೂಪರ್ ಕಿಂಗ್ಸ್ – 20 ಕೋಟಿ

ರನ್ನರ್ಸ್ ಅಪ್ – ಕೋಲ್ಕತ್ತಾ ನೈಟ್ ರೈಡರ್ಸ್ – 12.50 ಕೋಟಿ

ಪಂದ್ಯ ಪುರುಷ – ಫಾಫ್ ಡುಪ್ಲೆಸಿಸ್ – 1 ಲಕ್ಷ

ಆರೆಂಜ್ ಕ್ಯಾಪ್ – ರುತುರಾಜ್ ಗಾಯಕ್ವಾಡ್ – 10 ಲಕ್ಷ

ಪರ್ಪಲ್ ಕ್ಯಾಪ್ – ಹರ್ಷಲ್ ಪಟೇಲ್ – 10 ಲಕ್ಷ

ಪರ್ಫೆಕ್ಟ್ ಕ್ಯಾಚ್ – ರವಿ ಬಿಷ್ಟೋಯಿ – 10 ಲಕ್ಷ

ಸೂಪರ್ ಸ್ಟ್ರೈಕರ್ – ಶಿಮ್ರೋನ್ ಹೆಟ್ಮೇರ್ – 10 ಲಕ್ಷ

ಗೇಮ್ ಚೇಂಜರ್ – ಹರ್ಷಲ್ ಪಟೇಲ್ – 10 ಲಕ್ಷ

ಗರಿಷ್ಠ ಸಿಕ್ಸರ್ಸ್ – ಕೆಎಲ್ ರಾಹುಲ್ – 10 ಲಕ್ಷ

ಪವರ್ ಪ್ಲೇಯರ್ – ವೆಂಕಟೇಶ್ ಅಯ್ಯರ್ – 10 ಲಕ್ಷ

ವ್ಯಾಲ್ಯುವೇಬಲ್ ಪ್ಲೇಯರ್ – ಹರ್ಷಲ್ ಪಟೇಲ್ – 10 ಲಕ್ಷ

MS Dhoni: ಟ್ರೋಫಿ ಗೆದ್ದ ಖುಷಿಯಲ್ಲಿ ಧೋನಿ ಮಡದಿ ಸಾಕ್ಷಿ ಮೈದಾನಕ್ಕೆ ಬಂದು ಮಾಡಿದ್ದೇನು ನೋಡಿ

Avi Barot: ಶಾಕಿಂಗ್: ಭಾರತ ಅಂಡರ್-19 ತಂಡದ ಮಾಜಿ ನಾಯಕ, 29 ವರ್ಷದ ಸ್ಟಾರ್ ಬ್ಯಾಟ್ಸ್​ಮನ್ ನಿಧನ

(IPL 2021 Awards Harshal Patel Hunts multiple individual awards Indian Premier League check full list in Kannada)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada