ಇಂಡಿಯನ್ ಪ್ರೀಮಿಯರ್ ಲೀಗ್ 2021ರ (Indian Premier League) ಚಾಂಪಿಯನ್ ಆಗಿ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹೊರಹೊಮ್ಮಿದೆ. ಫಾಫ್ ಡುಪ್ಲೆಸಿಸ್ (Faf du Plessis) ಅವರ ಅಮೋಘ ಬ್ಯಾಟಿಂಗ್ ಮತ್ತು ಸಿಎಸ್ಕೆ ಬೌಲರ್ಗಳ ಸಂಘಟಿತ ಹೋರಾಟದ ನೆರವಿನಿಂದ ಐಪಿಎಲ್ 2021 ಫೈನಲ್ (IPL 2021 Final) ಕೂಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ವಿರುದ್ಧ 27 ರನ್ಗಳಿಂದ ಗೆದ್ದು ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಕಳೆದ ಬಾರಿ ನೀಡಿದ್ದ ಹೀನಾಯ ಪ್ರದರ್ಶನಕ್ಕೆ ಧೋನಿ ಟ್ರೋಫಿ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ. ಸಿಎಸ್ಕೆ ಗೆಲುವಿನ ನಗೆ ಬೀರುತ್ತಿದ್ದಂತೆ ಸ್ಟೇಡಿಯಂನಲ್ಲಿ, ಮೈದಾನದಲ್ಲಿ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ನಾಯಕ ಎಂ ಎಸ್ ಧೋನಿ ಹೆಂಡತಿ ಸಾಕ್ಷಿ (Sakshi Dhoni) ಅವರು ಧೋನಿಯನ್ನು ತಬ್ಬಿಕೊಂಡು ಸಂಭ್ರಮ ಹಂಚಿಕೊಂಡರು.
ಹೌದು, ಗೆಲ್ಲಲು 193 ರನ್ಗಳ ಬೃಹತ್ ಮೊತ್ತದ ಗುರಿಗೆ ಪ್ರತಿಯಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್ 165 ರನ್ಗೆ ಅಂತ್ಯಗೊಂಡು ಸಿಎಸ್ಕೆ 27 ರನ್ಗಳ ಜಯ ಸಾಧಿಸುತ್ತಿದ್ದಂತೆ ಡಗೌಟ್ನಲ್ಲಿದ್ದ ಸಿಎಸ್ಕೆ ತಂಡದ ಆಟಗಾರರು ಓಡಿ ಬಂದರು. ಪಂದ್ಯ ಮುಗಿದ ಬಳಿಕ ಟ್ರೋಫಿ ಗೆದ್ದ ಖುಷಿಯಲ್ಲಿ ಸಾಕ್ಷಿ ಧೋನಿ ಅವರು ಮಗಳು ಝೀವಾಳೊಂದಿಗೆ ಮೈದಾನಕ್ಕೆ ಕಾಲಿಟ್ಟು ಧೋನಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದೊಂದು ಅತ್ಯುತ್ತಮ ಫ್ಯಾಮಿಲಿ ಫೋಟೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
Wholesome pics 🥺💛 @MSDhoni pic.twitter.com/IOo9QAgi4h
— Dhoni Army TN™ (@DhoniArmyTN) October 15, 2021
ಇನ್ನು ಪಂದ್ಯ ಮುಗಿದ ಬಳಿಕ ಧೋನಿ ಅನೇಕ ವಿಚಾರವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದ್ದಾರೆ. ಮೊದಲಿಗೆ ನಿಮ್ಮ ಗೆಲುವಿನ ಬಗ್ಗೆ ಹೇಳಿ ಎಂಬ ಕೂಡಲೇ ಧೋನಿ ಆ ಬಗ್ಗೆ ಮಾತನಾಡದೆ ಕೆಕೆಆರ್ ತಂಡವನ್ನು ಹಾಡಿಹೊಗಳಿದರು. “ನಾನು ನಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡುವ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಗ್ಗೆ ಮಾತನಾಡುವುದು ಮುಖ್ಯ. ಯಾಕಂದ್ರೆ ಮೊದಲ ಚರಣದಲ್ಲಿ ಅವರಿದ್ದ ಸ್ಥಾನ ಮತ್ತು ಎರಡನೇ ಚರಣದಲ್ಲಿ ಅವರು ಮಾಡಿದ ಕಮ್ಬ್ಯಾಕ್ಗೆ ತಲೆಬಾಗಲೇಬೇಕು. ನನಗನ್ನಿಸುವ ಪ್ರಕಾರ ಈ ವರ್ಷ ಐಪಿಎಲ್ ಪ್ರಶಸ್ತಿ ಗೆಲ್ಲಲು ಅರ್ಹವಾದ ತಂಡ ಎಂದರೆ ಅದು ಕೆಕೆಆರ್” ಎಂದು ಧೋನಿ ನುಡಿದರು.
The family that stays together#dhoni #CSKvKKR #ChennaiSuperKings #shardul #ruturaj #WhistlePodu #WhistlePoduArmy #SRK #Venkatesh #Yellove #sakshi #ziva #Raina pic.twitter.com/rM9wxm4OwX
— Nitin Kumar Agarwal (@nitinalwz) October 15, 2021
ಇದೇವೇಳೆ ನಿರೂಪಕ ಹರ್ಷ ಭೋಗ್ಲೆ ಅವರು ಧೋನಿಗೆ ‘ನೀವು ಬಿಟ್ಟು ಹೋದ ಪರಂಪರೆಯ ಬಗ್ಗೆ ಬಹಳ ಹೆಮ್ಮೆ ಪಡುತ್ತೀರಿ” ಎಂದರು. ಇದಕ್ಕೆ ಧೋನಿ,” ಇನ್ನೂ ಎನನ್ನೂ ಬಿಟ್ಟು ನಡೆದಿಲ್ಲ” ಎಂದು ನಕ್ಕರು. ಈ ಮೂಲಕ ಧೋನಿ ಈ ಸೀಸನ್ ಬಳಿಕ ವಿದಾಯ ಹೇಳುತ್ತಾರೆ ಎನ್ನುವ ಲೆಕ್ಕಾಚಾರಗಳನ್ನು ಧೋನಿ ತಮ್ಮದೇ ಸ್ಟೈಲ್ ನಲ್ಲಿ ಬದಿಗೆ ಸರಿಸಿದ್ದಾರೆ.
ಇದರ ನಡುವೆ ಧೋನಿ ಅವರು ಸಿಎಸ್ಕೆ ಪರವಾಗಿ ಆಡುವ ಬಗ್ಗೆ ಇನ್ನೂ ಖಚಿತ ಪಡಿಸಿಲ್ಲ. “ಮುಂದಿನ ಆವೃತ್ತಿಗೆ ಇನ್ನೆರಡು ತಂಡಗಳು ಸೇರ್ಪಡೆಯಾಗುವ ಕಾರಣ ಏನನ್ನೂ ಹೇಳಲಾಗದು” ಎಂದು ಅಭಿಮಾನಿಗಳ ತಲೆಗೆ ಹುಳಬಿಟ್ಟು ಕಾದುನೋಡುವಂತೆ ಮಾಡಿದ್ದಾರೆ.
Avi Barot: ಶಾಕಿಂಗ್: ಭಾರತ ಅಂಡರ್-19 ತಂಡದ ಮಾಜಿ ನಾಯಕ, 29 ವರ್ಷದ ಸ್ಟಾರ್ ಬ್ಯಾಟ್ಸ್ಮನ್ ನಿಧನ
(MS Dhoni wife Sakshi and daughter Ziva hugging photo viral After CSK vs KKR IPL 2021 Final Match)