IND vs BAN: ಟೀಮ್ ಇಂಡಿಯಾಗೆ ಸೋಲುಣಿಸಿದ ಬಾಂಗ್ಲಾದೇಶ್
Bangladesh Women vs India Women: ಮೂರು ಪಂದ್ಯಗಳ ಟಿ20 ಸರಣಿಯ ಮೊದಲ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
India vs Bangladesh: ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ಬಾಂಗ್ಲಾದೇಶ್ ವನಿತೆಯರು ಭರ್ಜರಿ ಜಯ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (1) ಹಾಗೂ ಶಫಾಲಿ ವರ್ಮಾ (11) ಬಂದ ವೇಗದಲ್ಲೇ ಹಿಂತಿರುಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಜೆಮಿಮಾ ಹಾಗೂ ಹರ್ಮನ್‌ಪ್ರೀತ್ ಕೌರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಆದರೆ 28 ರನ್ಗಳಿಸಿ ಜೆಮಿಮಾ ನಿರ್ಗಮಿಸಿದರೆ, ಅದರ ಬೆನ್ನಲ್ಲೇ 40 ರನ್ಗಳಿಸಿ ಹರ್ಮನ್‌ಪ್ರೀತ್ ಕೌರ್ ಕೂಡ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಬಾಂಗ್ಲಾ ವನಿತೆಯರು ಟೀಮ್ ಇಂಡಿಯಾದ ರನ್ಗಳಿಕೆ ಕಡಿವಾಣ ಹಾಕಿದರು.
ಅಲ್ಲದೆ 91 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾವನ್ನು 9 ವಿಕೆಟ್ ನಷ್ಟಕ್ಕೆ 102 ರನ್ಗಳಿಗೆ ನಿಯಂತ್ರಿಸಿದರು. ಬಾಂಗ್ಲಾ ಪರ ರಬಿಯಾ ಖಾನ್ 3 ವಿಕೆಟ್ ಪಡೆದರೆ, ಸುಲ್ತಾನ ಖಾತೂನ್ 2 ವಿಕೆಟ್ ಕಬಳಿಸಿದರು.
ಇನ್ನು 103 ರನ್ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ್ ಶಮಿಮಾ ಸುಲ್ತಾನ ಉತ್ತಮ ಆರಂಭ ಒದಗಿಸಿದ್ದರು. 42 ರನ್ ಬಾರಿಸಿದ ಶಮಿಮಾ ಆರಂಭದಲ್ಲೇ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾದ ಬಾಂಗ್ಲಾ ತಂಡವು 69 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಶಮಿಮಾ ಸುಲ್ತಾನ ತಂಡಕ್ಕೆ ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ರಿತು ಮೋನಿ ಅಜೇಯ 7 ರನ್ ಹಾಗೂ ನಹಿದಾ ಅಕ್ತೆರ್ ಅಜೇಯ 10 ರನ್ಗಳಿಸುವ ಮೂಲಕ 18.2 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 4 ವಿಕೆಟ್ಗಳ ಜಯ ಸಾಧಿಸಿತು.
ಇದಾಗ್ಯೂ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಮಿಮಾ ಸುಲ್ತಾನಾ , ಶಥಿ ರಾಣಿ , ದಿಲಾರಾ ಅಕ್ತೆರ್ , ನಿಗರ್ ಸುಲ್ತಾನಾ (ನಾಯಕಿ) , ರಿತು ಮೋನಿ , ಶೋರ್ನಾ ಅಕ್ತೆರ್ , ನಹಿದಾ ಅಕ್ತೆರ್ , ರಬಿಯಾ ಖಾನ್ , ಸುಲ್ತಾನಾ ಖಾತುನ್ , ಫಾಹಿಮಾ ಖಾತುನ್ , ಮಾರುಫಾ ಅಕ್ತೆರ್.
ಇದನ್ನೂ ಓದಿ: Team India: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ
ಟೀಮ್ ಇಂಡಿಯಾ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ದೇವಿಕಾ ವೈದ್ಯ , ಅಮಂಜೋತ್ ಕೌರ್ , ಪೂಜಾ ವಸ್ತ್ರಾಕರ್ , ಮಿನ್ನು ಮಣಿ , ರಾಶಿ ಕನೋಜಿಯಾ.