IPL 2026: ಐಪಿಎಲ್ RAPP ಲಿಸ್ಟ್ ಪ್ರಕಟ: 1,307 ಆಟಗಾರರಿಗೆ ಸ್ಥಾನ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಸೀಸನ್ ಆರಂಭಕ್ಕೂ ಮುನ್ನ ರಿಜಿಸ್ಟರ್ ಅವೇಲೇಬಲ್ ಪ್ಲೇಯರ್ ಪೂಲ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 1307 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಂತೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಬದಲಿ ಆಟಗಾರರಾಗಿ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಿನಿ ಹರಾಜಿಗಾಗಿ ಬರೋಬ್ಬರಿ 1390 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದರು. ಈ 1390 ಆಟಗಾರರಲ್ಲಿ ಹರಾಜಿಗೆ ಆಯ್ಕೆಯಾಗಿದ್ದು ಕೇವಲ 359 ಆಟಗಾರರು ಮಾತ್ರ. ಇವರಲ್ಲಿ 77 ಆಟಗಾರರನ್ನು ಮಾತ್ರ ಖರೀದಿಸಲಾಗಿತ್ತು. ಅಂದರೆ ಬರೋಬ್ಬರಿ 1313 ಆಟಗಾರರು ಅವಕಾಶ ವಂಚಿತರಾಗಿದ್ದರು. ಇದೀಗ ಅವಕಾಶ ವಂಚಿತರಾದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದು ಕೂಡ RAPP ಲಿಸ್ಟ್ನಲ್ಲಿ ಎಂಬುದು ವಿಶೇಷ.
ಏನಿದು RAPP ಲಿಸ್ಟ್?
RAPP ಲಿಸ್ಟ್ ಎಂದರೆ ರಿಜಿಸ್ಟರ್ ಅವೇಲೇಬಲ್ ಪ್ಲೇಯರ್ ಪೂಲ್ (RAPP). ಐಪಿಎಲ್ಗಾಗಿ ನೋಂದಾಯಿತ ಲಭ್ಯವಿರುವ ಆಟಗಾರರ ಪಟ್ಟಿ. ಬದಲಿ ಆಟಗಾರರ ಆಯ್ಕೆಗಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಅಂದರೆ ಯಾವುದಾದರೂ ಆಟಗಾರರು ಐಪಿಎಲ್ನಿಂದ ಹೊರಗುಳಿದರೆ, RAPP ಲಿಸ್ಟ್ನಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಅವರು ಹರಾಜಿಗಾಗಿ ನೊಂದಾಯಿಸಿದ್ದ ಮೂಲ ಬೆಲೆಗಿಂತ ಕಡಿಮೆ ಪಾವತಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.
ಅದರಂತೆ ಇದೀಗ 1307 ಆಟಗಾರರ ಹೆಸರನ್ನು ಹೊಂದಿರುವ RAPP ಲಿಸ್ಟ್ ಅನ್ನು ಬಿಸಿಸಿಐ ಸಿದ್ಧಪಡಿಸಿದೆ. ಹೀಗಾಗಿ ಈ ಪಟ್ಟಿಯಲ್ಲಿರುವ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
RAPP ಲಿಸ್ಟ್ ನಿಯಮಗಳು:
- ಫ್ರಾಂಚೈಸಿಗಳು ಈ ನಿರ್ದಿಷ್ಟ ಪೂಲ್‌ನಿಂದ ಬದಲಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಉದಾಹರಣೆಗೆ, ಗಾಯಗೊಂಡ ತಂಡದ ಸದಸ್ಯರಿಗೆ ಬದಲಿಗೆ RAPP ಲಿಸ್ಟ್ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಬೇಕು.
- ಒಬ್ಬ ಆಟಗಾರನನ್ನು ಅವರ ಮೂಲ ಹರಾಜಿನ ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಸಹಿ ಮಾಡುವಂತಿಲ್ಲ. ಉದಾಹರಣೆಗೆ, ಸ್ಟೀವ್ ಸ್ಮಿತ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡುವಂತಿಲ್ಲ.
- RAPP ಲಿಸ್ಟ್ನಲ್ಲಿರುವ ಆಟಗಾರರನ್ನು ನೆಟ್ ಬೌಲರ್‌ಗಳಾಗಿ ನೇಮಿಸಿಕೊಳ್ಳಬಹುದು. ಆದರೆ ಬೇರೆ ಯಾವುದಾದರೂ ಫ್ರಾಂಚೈಸಿ ಆ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಲು ಬಯಸಿದರೆ ತಕ್ಷಣವೇ ಬಿಡುಗಡೆ ಮಾಡಬೇಕಾಗುತ್ತದೆ.
RAPP ಲಿಸ್ಟ್ನಲ್ಲಿ ಸ್ಥಾನ ಪಡೆದಿರುವ ಪ್ರಮುಖ ಆಟಗಾರರು:
- 2 ಕೋಟಿ ರೂ. ಮೂಲ ಬೆಲೆ: ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ರೀಸ್ ಟೋಪ್ಲಿ (ಇಂಗ್ಲೆಂಡ್), ಮತ್ತು ಜೇಮೀ ಸ್ಮಿತ್ (ಇಂಗ್ಲೆಂಡ್).
- 1.5 ಕೋಟಿ ರೂ. ಮೂಲ ಬೆಲೆ: ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಮತ್ತು ಟಿಮ್ ಸೈಫರ್ಟ್ (ನ್ಯೂಝಿಲೆಂಡ್).
- 1 ಕೋಟಿ ರೂ. ಮೂಲ ಬೆಲೆ: ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಫಝಲ್ಹಕ್ ಫಾರೂಕಿ (ಅಫ್ಘಾನಿಸ್ತಾನ್).
ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್
RAPP ಲಿಸ್ಟ್ನಲ್ಲಿರುವ ಭಾರತದ ಪ್ರಮುಖ ಆಟಗಾರರು:
- ಉಮೇಶ್ ಯಾದವ್ , ನವದೀಪ್ ಸೈನಿ , ಚೇತನ್ ಸಕರಿಯಾ, ಸಂದೀಪ್ ವಾರಿಯರ್, ಮಾಯಾಂಕ್ ಅಗರ್ವಾಲ್ , ದೀಪಕ್ ಹೂಡಾ , ಕೆ.ಎಸ್. ಭರತ್, ಯಶ್ ಧುಲ್, ಅಭಿನವ್ ಮನೋಹರ್, ಅಥರ್ವ ಟೈಡೆ, ಮನನ್ ವೋಹ್ರಾ, ಮಹಿಪಾಲ್ ಲೋಮ್ರೋರ್ , ಕಮಲೇಶ್ ನಾಗರಕೋಟಿ ಮತ್ತು ರಾಜವರ್ಧನ್ ಹಂಗರ್ಗೇಕರ್.
