AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ವಿರಾಟ್ ಕೊಹ್ಲಿ ರಾಜೀನಾಮೆ: ಹಿಂದಿನ ತಪ್ಪುಗಳಿಂದ ಪಾಠ ಕಲಿತ ಬಿಸಿಸಿಐ

ಡಿಸೆಂಬರ್ 8 ರಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೆಸ್ಟ್ ತಂಡವನ್ನು ಘೋಷಿಸುವುದರೊಂದಿಗೆ ಕೊಹ್ಲಿಯನ್ನು ODI ನಾಯಕತ್ವದಿಂದ ತೆಗೆದುಹಾಕಿರುವುದು ಬಹಿರಂಗವಾಗಿತ್ತು.

Virat Kohli: ವಿರಾಟ್ ಕೊಹ್ಲಿ ರಾಜೀನಾಮೆ: ಹಿಂದಿನ ತಪ್ಪುಗಳಿಂದ ಪಾಠ ಕಲಿತ ಬಿಸಿಸಿಐ
BCCI
TV9 Web
| Updated By: ಝಾಹಿರ್ ಯೂಸುಫ್|

Updated on: Jan 15, 2022 | 10:40 PM

Share

ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಬೆನ್ನಲ್ಲೇ ರಾಜೀನಾಮೆ ನೀಡಿ ಕೊಹ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಇದರೊಂದಿಗೆ ಮೂರೂ ಮಾದರಿಯಲ್ಲಿ ಕೊಹ್ಲಿ ನಾಯಕತ್ವದ ಯುಗ ಅಂತ್ಯಗೊಂಡಿದೆ. ಭಾರತದ ಮಾಜಿ ನಾಯಕನ ಈ ಘೋಷಣೆಯ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಾರಿ ತಡಮಾಡದೆ ಕೊಹ್ಲಿ ಅವರ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿತು. ಮಂಡಳಿಯ ಕಾರ್ಯದರ್ಶಿ ಜಯ್ ಶಾ ಕೂಡ ಫಿಟ್ ಟೀಮ್ ಇಂಡಿಯಾವನ್ನು ಸಿದ್ಧಪಡಿಸಿದ್ದಕ್ಕಾಗಿ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಸುದೀರ್ಘ ಹೇಳಿಕೆ ನೀಡುವ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದರು. ಕೊಹ್ಲಿಯ ಘೋಷಣೆಯ 10 ನಿಮಿಷಗಳ ನಂತರ, ಬಿಸಿಸಿಐ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಕೊಹ್ಲಿಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿದೆ, “ಟೆಸ್ಟ್ ತಂಡವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಅದ್ಭುತ ನಾಯಕತ್ವಕ್ಕಾಗಿ ಬಿಸಿಸಿಐ ಅಭಿನಂದನೆಗಳು. ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು, ಇದರಲ್ಲಿ 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡರು. ನಿಮ್ಮೆಲ್ಲಾ ಕೊಡುಗೆಗಳಿಗೆ ಧನ್ಯವಾದಗಳು ಎಂದು ಬಿಸಿಸಿಐ ತಿಳಿಸಿದೆ.

ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ವೈಯಕ್ತಿಕ ಟ್ವಿಟ್ಟರ್ ಖಾತೆಯ ಮೂಲಕ ಕೊಹ್ಲಿಯ ಕೊಡುಗೆಗಾಗಿ ಧನ್ಯವಾದ ಹೇಳಿದ್ದಾರೆ. ಷಾ ತಮ್ಮ ಟ್ವೀಟ್‌ನಲ್ಲಿ, “ಭಾರತೀಯ ನಾಯಕನಾಗಿ ಅದ್ಭುತವಾದ ಸಾಧನೆಗಾಗಿ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ವಿರಾಟ್ ತಂಡವನ್ನು ಅದ್ಭುತವಾಗಿ ಫಿಟ್ ಆಗಿ ರೂಪಿಸಿದರು. ದೇಶ ಮತ್ತು ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಗೆಲುವುಗಳು ತುಂಬಾ ವಿಶೇಷ. ನಿಮಗೆ ಕೊಡುಗೆಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಪಾಠ ಕಲಿತ ಬಿಸಿಸಿಐ: ಈ ಹಿಂದೆ ವಿರಾಟ್ ಕೊಹ್ಲಿ ಸೆಪ್ಟೆಂಬರ್ 16 ರಂದು ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಿಸಿಸಿಐನಿಂದ ಹೇಳಿಕೆ ಬರಲು ಬಹಳ ಸಮಯ ತೆಗೆದುಕೊಂಡಿತು. ಬಿಸಿಸಿಐನ ನಡೆಯ ಬಗ್ಗೆ ಕೊಹ್ಲಿ ಅಭಿಮಾನಿಗಳಿಂದ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತು. ಇನ್ನು ಡಿಸೆಂಬರ್ 8 ರಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೆಸ್ಟ್ ತಂಡವನ್ನು ಘೋಷಿಸುವುದರೊಂದಿಗೆ ಕೊಹ್ಲಿಯನ್ನು ODI ನಾಯಕತ್ವದಿಂದ ತೆಗೆದುಹಾಕಿರುವುದು ಬಹಿರಂಗವಾಗಿತ್ತು. ಆ ಸಮಯದಲ್ಲಿ, ಪತ್ರಿಕಾ ಪ್ರಕಟಣೆಯಲ್ಲಿ ಟೆಸ್ಟ್ ತಂಡದ ಬಗ್ಗೆ ಮಾಹಿತಿ ನೀಡುವಾಗ, ಬಿಸಿಸಿಐ ಕೇವಲ ಒಂದು ಸಾಲಿನಲ್ಲಿ ರೋಹಿತ್ ಶರ್ಮಾ ಹೊಸ ODI ಮತ್ತು T20 ನಾಯಕ ಎಂದು ಬರೆದಿತ್ತು. ನಂತರ ಬಿಸಿಸಿಐ ಕೊಹ್ಲಿಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ. ಅಲ್ಲದೆ ನಾಯಕನಾಗಿ ಅವರು ನೀಡಿದ ಕೊಡುಗೆಗೆ ಧನ್ಯವಾದ ಹೇಳಲಿಲ್ಲ. ಇದರ ನಂತರ, ಬಿಸಿಸಿಐ ಈ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು. ನಂತರ ಮಂಡಳಿಯು ಸರಿಯಾಗಿ ಒಂದು ದಿನದ ನಂತರ ಕೊಹ್ಲಿಗೆ ಟ್ವೀಟ್ ಮೂಲಕ ಧನ್ಯವಾದಗಳನ್ನು ಅರ್ಪಿಸಿತು. ಈ ಟೀಕೆಗಳಿಂದ ಪಾಠ ಕಲಿತು ಈ ಬಾರಿ ಬಿಸಿಸಿಐ ತಕ್ಷಣವೇ ಪ್ರತಿಕ್ರಿಯಿಸಿರುವುದು ವಿಶೇಷ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(BCCI Congratulates Virat Kohli for Outstanding Tenure after he resigns from Captaincy)