ನಿಜಕ್ಕೂ ಗಾಯಗೊಂಡಿದ್ದಾರಾ? ಫುಟ್​ಬಾಲ್ ಆಡ್ತಿದ್ದಾರೆ CSK ನಾಯಕ ರುತುರಾಜ್ ಗಾಯಕ್ವಾಡ್

IPL 2025 CSK vs KKR: ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 10.1 ಓವರ್​ಗಳಲ್ಲಿ 107 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನಿಜಕ್ಕೂ ಗಾಯಗೊಂಡಿದ್ದಾರಾ? ಫುಟ್​ಬಾಲ್ ಆಡ್ತಿದ್ದಾರೆ CSK ನಾಯಕ ರುತುರಾಜ್ ಗಾಯಕ್ವಾಡ್
Ruturaj Gaikwad

Updated on: Apr 12, 2025 | 11:55 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳ ನಡುವೆ ಸಿಎಸ್​ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಸಹ ಗಾಯಗೊಂಡಿದ್ದಾರೆ. ಮೊಣಕೈ ಮೂಳೆ ಮುರಿತಕ್ಕೊಳಗಾಗಿರುವ ಕಾರಣ ಅವರು ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ರುತುರಾಜ್ ಗಾಯಕ್ವಾಡ್ ಫುಟ್​ಬಾಲ್ ಆಟ:

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯದ ಕಾರಣ ಐಪಿಎಲ್​ನಿಂದ ಹೊರಗುಳಿದಿರುವ ರುತುರಾಜ್ ಗಾಯಕ್ವಾಡ್ (Ruturaj Gaikwad) ಚೆಪಾಕ್​ ಮೈದಾನದಲ್ಲಿ ಫುಟ್​ಬಾಲ್ ಆಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅದು ಸಹ ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಎಂಬುದೇ ಅಚ್ಚರಿ.

ಇದರ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ ಅವರ ಗಾಯದ ಬಗ್ಗೆ ಪ್ರಶ್ನೆಗಳೆದ್ದಿವೆ. ಏಕೆಂದರೆ ಮೊಣಕೈ ಮೂಳೆ ಮುರಿತಕ್ಕೊಳಗಿದ್ದರೆ ಸಿಎಸ್​ಕೆ ತಂಡದ ನಾಯಕ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಅಥವಾ ತನ್ನ ಮೊಣಕೈಗೆ ಚಿಕಿತ್ಸೆ ಪಡೆಯುತ್ತಿರಬೇಕಿತ್ತು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಇದಾಗ್ಯೂ ರುತುರಾಜ್ ಗಾಯಕ್ವಾಡ್ ಸಿಎಸ್​ಕೆ ತಂಡದ ಅಭ್ಯಾಸದ ವೇಳೆ ಫುಟ್​ಬಾಲ್ ಆಡುತ್ತಿರುವುದು ಕಂಡು ಬಂದಿರುವುದೇ ಅಚ್ಚರಿ. ಹೀಗಾಗಿಯೇ ಇದೀಗ ರುತುರಾಜ್ ಅವರ ಗಾಯದ ಬಗ್ಗೆ ಅಭಿಮಾನಿಗಳು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ರುತುರಾಜ್ ಗಾಯಕ್ವಾಡ್ ಫುಟ್​ಬಾಲ್ ಆಡುತ್ತಿರುವ ವಿಡಿಯೋ:

ಒಟ್ಟಿನಲ್ಲಿ ಗಾಯಗೊಂಡ ಬಳಿಕ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಕಾಣಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್, ಇದೀಗ ಫುಟ್​ಬಾಲ್ ಆಡುವ ಮೂಲಕ ಹೊಸ ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಸಿಎಸ್​ಕೆ ಏನು ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತೆ ಸೋತ ಸಿಎಸ್​ಕೆ:

ರುತುರಾಜ್ ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವ ಮಹೇಂದ್ರ ಸಿಂಗ್ ಧೋನಿ ಕೂಡ ಸೋಲಿನ ರುಚಿ ನೀಡಿದ್ದಾರೆ. ಚೆಪಾಕ್​ನಲ್ಲಿ ನಡೆದ ಐಪಿಎಲ್​ನ 25ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಆಟಗಾರನ ಬ್ಯಾನ್ ಮಾಡಿದ ಪಾಕಿಸ್ತಾನ್

ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 10.1 ಓವರ್​ಗಳಲ್ಲಿ 107 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.