IPL 2025: ಐಪಿಎಲ್ನಲ್ಲಿ 25 ಪಂದ್ಯಗಳು ಮುಕ್ತಾಯ: ಪ್ಲೇ ಆಫ್ ರೇಸ್‌ನಲ್ಲಿ 4 ತಂಡಗಳು, ಬಹುತೇಕ ಹೊರಬಿದ್ದ 3 ಟೀಮ್
IPL 2025 Playoff Scenario: ಐಪಿಎಲ್ ಪ್ಲೇಆಫ್ ತಲುಪಲು, ಒಂದು ತಂಡಕ್ಕೆ ಕನಿಷ್ಠ 14 ಅಂಕಗಳು ಬೇಕಾಗುತ್ತವೆ. ನಿಯಮದ ಪ್ರಕಾರ, ಯಾವುದೇ ತಂಡ 14 ಅಂಕಗಳೊಂದಿಗೆ ಪ್ಲೇಆಫ್ ತಲುಪಿದರೆ, ಅದು ನಾಲ್ಕನೇ ಸ್ಥಾನದಲ್ಲಿರುತ್ತದೆ. ಇದರೊಂದಿಗೆ, 14 ಅಂಕ ಗಳಿಸಿದರೆ ಅಲ್ಲಿ ರನ್ ರೇಟ್ ಪ್ರಮುಖ ಪಾತ್ರವಹಿಸುತ್ತದೆ. ಒಂದು ತಂಡ 16 ಅಂಕಗಳನ್ನು ಗಳಿಸಿದರೆ, ಆ ತಂಡವು ಪ್ಲೇಆಫ್‌ಗೆ ಪ್ರವೇಶವನ್ನು ಖಚಿತಪಡಿಸುತ್ತದೆ.

ಬೆಂಗಳೂರು (ಏ. 12): ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League) ಐತುವಿನ ಒಂದು ಭಾಗ ಈಗಾಗಲೇ ಮುಕ್ತಾಯಗೊಂಡಿದೆ. 18ನೇ ಋತುವಿನಲ್ಲಿ ಒಟ್ಟು 25 ಪಂದ್ಯಗಳನ್ನು ಈವರೆಗೆ ಆಡಲಾಗಿದೆ. ಈ ಪಂದ್ಯಗಳಲ್ಲಿ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಈ ಲೀಗ್‌ನ ಅತಿದೊಡ್ಡ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಸ್ಥಿತಿ ತೀರ ಕೆಟ್ಟದಾಗಿದೆ. ಸಿಎಸ್‌ಕೆ ಇದುವರೆಗೆ ಒಟ್ಟು 6 ಪಂದ್ಯಗಳನ್ನು ಆಡಿದ್ದು, ಕೇವಲ 1 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ. ಕೇವಲ 2 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ 8 ನೇ ಸ್ಥಾನದಲ್ಲಿದ್ದರೆ, ಕಳೆದ ಬಾರಿಯ ಫೈನಲಿಸ್ಟ್ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ನೇ ಸ್ಥಾನದಲ್ಲಿದೆ. ಈ ಸಂದರ್ಭ, ಇಲ್ಲಿಯವರೆಗೆ ನಡೆದ ಪಂದ್ಯಗಳ ನಂತರ ಪ್ಲೇಆಫ್ ರೇಸ್ನಲ್ಲಿರುವ ತಂಡಗಳು ಯಾವುವು ಎಂಬುದನ್ನು ನೋಡೋಣ.
25 ಪಂದ್ಯಗಳ ನಂತರ ಪ್ಲೇಆಫ್ ರೇಸ್‌ನಲ್ಲಿ ಯಾವ ತಂಡಗಳಿವೆ?:
ಐಪಿಎಲ್ ಪ್ಲೇಆಫ್ ತಲುಪಲು, ಒಂದು ತಂಡಕ್ಕೆ ಕನಿಷ್ಠ 14 ಅಂಕಗಳು ಬೇಕಾಗುತ್ತವೆ. ಯಾವುದೇ ತಂಡ 14 ಅಂಕಗಳೊಂದಿಗೆ ಪ್ಲೇಆಫ್ ತಲುಪಿದರೆ, ಅದು ನಾಲ್ಕನೇ ಸ್ಥಾನದಲ್ಲಿರುತ್ತದೆ. ಇದರೊಂದಿಗೆ, 12 ಅಂಕ ಪಡೆದ ತಂಡ ಕೂಡ ಪ್ಲೇ ಆಫ್ ತಲುಪಿದ ಇತಿಹಾಸವಿದೆ. ಆದರೆ, ಇಂತಹ ಸಂದರ್ಭದಲ್ಲಿ ಅಂಕಗಳ ಜೊತೆಗೆ ಅಲ್ಲಿ ರನ್ ರೇಟ್ ಪ್ರಮುಖ ಪಾತ್ರವಹಿಸುತ್ತದೆ. ಒಂದು ತಂಡ 16 ಅಂಕಗಳನ್ನು ಗಳಿಸಿದರೆ, ಆ ತಂಡವು ಪ್ಲೇಆಫ್‌ಗೆ ಪ್ರವೇಶವನ್ನು ಖಚಿತಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಸ್ತುತ ಪಾಯಿಂಟ್ಸ್ ಟೇಬಲ್ ಅನ್ನು ನೋಡಿದರೆ, ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.
ಗುಜರಾತ್ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕಗಳನ್ನು ಗಳಿಸಿದೆ. ಗುಜರಾತ್ ಟೈಟಾನ್ಸ್ ಪ್ಲೇಆಫ್ ತಲುಪಲು ಉಳಿದಿರುವ 9 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆದ್ದರೆ ಸಾಕು. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನಲ್ಲಿ ಇನ್ನೂ ಒಟ್ಟು 10 ಪಂದ್ಯಗಳನ್ನು ಆಡಬೇಕಾಗಿದೆ. ಇಲ್ಲಿಯವರೆಗೆ ತಂಡವು 4 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 8 ಅಂಕಗಳನ್ನು ಗಳಿಸಿದೆ. ಪ್ಲೇಆಫ್ ತಲುಪಲು ದೆಹಲಿ ತಂಡ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕು. ಇದಲ್ಲದೆ, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸಹ ಈ ರೇಸ್‌ನಲ್ಲಿವೆ.
CSK vs KKR: ನಾಚಿಕೆಗೇಡಿನ ಸೋಲು: ಪೋಸ್ಟ್ ಮ್ಯಾಚ್ನಲ್ಲಿ ಎಂಎಸ್ ಧೋನಿ ಏನು ಹೇಳಿದ್ರು ನೋಡಿ
ಸಿಎಸ್‌ಕೆ, ಮುಂಬೈ ಮತ್ತು ಸನ್‌ರೈಸರ್ಸ್ ಬಹುತೇಕ ಔಟ್:
ಪ್ಲೇಆಫ್ ರೇಸ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಹಿಂದುಳಿದಿರುವಂತೆ ತೋರುತ್ತಿದೆ. ಈ ಋತುವಿನಲ್ಲಿ ಸಿಎಸ್‌ಕೆ ಇನ್ನೂ 8 ಪಂದ್ಯಗಳನ್ನು ಆಡಬೇಕಾಗಿದೆ. ಪ್ಲೇ ಆಫ್ ಹಂತಕ್ಕೆ ತಲುಪಬೇಕಾದರೆ ಸಿಎಸ್‌ಕೆ ಉಳಿದ ಎಲ್ಲ ಪಂದ್ಯವನ್ನು ಗೆಲ್ಲಬೇಕಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್‌ನ ಪರಿಸ್ಥಿತಿಯೂ ಇದೇ ರೀತಿ ಇದೆ, ಎರಡೂ ತಂಡಗಳು ಇಲ್ಲಿಯವರೆಗೆ 5-5 ಪಂದ್ಯಗಳನ್ನು ಆಡಿದ್ದು, ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿವೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬೈ ಮತ್ತು ಸನ್‌ರೈಸರ್ಸ್ ಪ್ರತಿ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 am, Sat, 12 April 25