AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs KKR: ನಾಚಿಕೆಗೇಡಿನ ಸೋಲು: ಪೋಸ್ಟ್ ಮ್ಯಾಚ್​ನಲ್ಲಿ ಎಂಎಸ್ ಧೋನಿ ಏನು ಹೇಳಿದ್ರು ನೋಡಿ

MS Dhoni post match presentation: ಕೆಕೆಆರ್ ವಿರುದ್ಧದ ಸೋಲಿನ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಸಮಯದಲ್ಲಿ ನಾಯಕ ಎಂಎಸ್ ಧೋನಿ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಕೆಲವು ಪಂದ್ಯಗಳಲ್ಲಿ ತಂಡವು ತನ್ನ ಘನತೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಬ್ಯಾಟಿಂಗ್ ಮಾಡುವಾಗ ತಮ್ಮ ತಂಡವು ಅಂದುಕೊಂಡಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂದು ಧೋನಿ ಒಪ್ಪಿಕೊಂಡಿದ್ದಾರೆ.

CSK vs KKR: ನಾಚಿಕೆಗೇಡಿನ ಸೋಲು: ಪೋಸ್ಟ್ ಮ್ಯಾಚ್​ನಲ್ಲಿ ಎಂಎಸ್ ಧೋನಿ ಏನು ಹೇಳಿದ್ರು ನೋಡಿ
Ms Dhoni Post Match Presentation
Vinay Bhat
|

Updated on: Apr 12, 2025 | 10:09 AM

Share

ಬೆಂಗಳೂರು (ಏ. 12): ಸುಮಾರು ಎರಡು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಎಂಎಸ್ ಧೋನಿ (Mahendra Singh Dhoni) ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಆದರೆ ತಂಡದ ಸ್ಥಿತಿ ಮಾತ್ರ ಬದಲಾಗಲಿಲ್ಲ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ನೀಡುತ್ತಿದ್ದ ಅದೇ ಪ್ರದರ್ಶನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಮುಂದುವರೆಯಿತು. ಮೊದಲ ಪಂದ್ಯ ಗೆದ್ದ ನಂತರ ಸಿಎಸ್​ಕೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಚೆನ್ನೈ ತಂಡವು ಐಪಿಎಲ್ 2025 ರಿಂದಲೂ ಹೊರಬೀಳುವ ಹಂತದಲ್ಲಿದೆ. ಕೆಕೆಆರ್ ವಿರುದ್ಧ 8 ವಿಕೆಟ್‌ಗಳ ಸೋಲಿನ ನಂತರ, ಎಂಎಸ್ ಧೋನಿ ತಮ್ಮ ತಂಡವು ತಮ್ಮ ತವರಿನಲ್ಲೇ ಏಕೆ ಕೆಟ್ಟದಾಗಿ ಪ್ರದರ್ಶನ ನೀಡಿತು ಎಂಬುದನ್ನು ವಿವರಿಸಿದ್ದಾರೆ.

ಕೆಕೆಆರ್ ವಿರುದ್ಧದ ಸೋಲಿನ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಸಮಯದಲ್ಲಿ ನಾಯಕ ಎಂಎಸ್ ಧೋನಿ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಕೆಲವು ಪಂದ್ಯಗಳಲ್ಲಿ ತಂಡವು ತನ್ನ ಘನತೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಬ್ಯಾಟಿಂಗ್ ಮಾಡುವಾಗ ತಮ್ಮ ತಂಡವು ಅಂದುಕೊಂಡಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂದು ಧೋನಿ ಒಪ್ಪಿಕೊಂಡಿದ್ದಾರೆ. ವಿಕೆಟ್‌ಗಳು ಬೇಗನೆ ಬಿದ್ದಾಗ, ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡಕ್ಕೆ ಒಂದೇ ಒಂದು ದೊಡ್ಡ ಜೊತೆಯಾಟ ಸಿಗಲಿಲ್ಲ. ಪವರ್ ಪ್ಲೇನಲ್ಲಿ ತಂಡವು ಕೇವಲ 31 ರನ್ ಗಳಿಸಲಷ್ಟೆ ಸಾಧ್ಯವಾಯಿತು ಎಂದು ಧೋನಿ ಹೇಳಿದರು.

ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾದರು:

ಆರಂಭಿಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದ ಧೋನಿ, ರಾಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಇಬ್ಬರೂ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು. ಆದರೆ ಈ ಪಂದ್ಯದಲ್ಲಿ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ ಅವರಿಗೂ ಯಶಸ್ಸು ಸಿಗಲಿಲ್ಲ. ಟಾಸ್ ಸೋತ ನಂತರ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಧೋನಿ ಸ್ವತಃ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಅವರು 4 ಎಸೆತಗಳನ್ನು ಆಡಿ ಕೇವಲ ಒಂದು ರನ್ ಗಳಿಸಿ ಔಟಾದರು. ಸುನಿಲ್ ನಾರಾಯಣ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ಅಂಪೈರ್ ನಿರ್ಧಾರದಿಂದ ಧೋನಿ ಸಂತೋಷವಾಗಲಿಲ್ಲ ಮತ್ತು ಅವರು ಡಿಆರ್​ಎಸ್ ಕೂಡ ತೆಗೆದುಕೊಂಡರು, ಆದರೆ ಥರ್ಡ್ ಅಂಪೈರ್ ಅವರನ್ನು ಔಟ್ ಎಂದು ಘೋಷಿಸಿದರು.

ಇದನ್ನೂ ಓದಿ
Image
ಧೋನಿಯನ್ನು ಇನ್​ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ರುತುರಾಜ್?
Image
ಧೋನಿ ನಾಯಕತ್ವದಲ್ಲಿ ಅತಿ ದೊಡ್ಡ ಸೋಲುಂಡ ಸಿಎಸ್​ಕೆ
Image
ಪಿಎಸ್​ಎಲ್ ಆಟಗಾರರು ತಂಗಿದ್ದ ಹೋಟೆಲ್​ನಲ್ಲಿ ಅಗ್ನಿ ಅವಘಡ
Image
ಪಾಕ್ ಸೂಪರ್ ಲೀಗ್​ನಿಂದ ಹೆಸರು ಹಿಂಪಡೆದ ಆಸೀಸ್ ಆಟಗಾರ

MS Dhoni: ಧೋನಿಯನ್ನು ಇನ್​ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ರುತುರಾಜ್?: ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆ

ಸಿಎಸ್‌ಕೆ 103 ರನ್ ಗಳಿಸಿತು:

ಇಡೀ ಸಿಎಸ್‌ಕೆ ತಂಡ ಒಟ್ಟಾಗಿ ಕೆಕೆಆರ್ ವಿರುದ್ಧ ಕೇವಲ 103 ರನ್ ಗಳಿಸಲು ಸಾಧ್ಯವಾಯಿತು. ಇದು ಚೆನ್ನೈನಲ್ಲಿ ತಂಡದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಕೆಕೆಆರ್ ಕೇವಲ 10.1 ಓವರ್‌ಗಳಲ್ಲಿ 107 ರನ್ ಗಳಿಸುವ ಮೂಲಕ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಋತುವಿನ ಉಳಿದ ಎಲ್ಲ ಪಂದ್ಯಗಳಿಗೆ ಧೋನಿ ತಂಡದ ನಾಯಕರಾಗಿ ಇರುತ್ತಾರೆ, ಆದರೆ ಮೇಲ್ನೋಟಕ್ಕೆ ತಂಡವು ಅಗ್ರ 4 ಸ್ಥಾನಗಳನ್ನು ತಲುಪುವ ಸಾಧ್ಯತೆಗಳು ತುಂಬಾ ಕಡಿಮೆ ಎಂಬಂತೆ ಕಾಣುತ್ತದೆ. ಮುಂದಿನ ಪಂದ್ಯದಲ್ಲಿ ತಂಡವು ಗೆಲುವಿನ ಹಾದಿಗೆ ಮರಳಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ