Sandeep Sharma: ಧೋನಿ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸದಂತೆ ಸಂದೀಪ್ ಶರ್ಮಾ ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತೇ?

MS Dhoni, CSK vs RR IPL 2023: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಕೂಡ ಕೊನೆಯ ಓವರ್ ವರೆಗೂ ನಡೆದು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಸಂದೀಪ್ ಶರ್ಮಾ ಮತ್ತು ಎಂಎಸ್ ಧೋನಿ ಕಾಳಗ ರೋಚಕವಾಗಿತ್ತು.

Sandeep Sharma: ಧೋನಿ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸದಂತೆ ಸಂದೀಪ್ ಶರ್ಮಾ ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತೇ?
MS Dhoni ans Sudeep Sharma
Follow us
Vinay Bhat
|

Updated on:Apr 13, 2023 | 10:51 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ನಡೆದ ಬಹುತೇಕ ಎಲ್ಲ ಪಂದ್ಯಗಳು 20ನೇ ಓವರ್ ವರೆಗೂ ನಡೆಯುತ್ತಿದೆ. ಕೊನೆಯ ಓವರ್​ನಲ್ಲಿ ಗೆಲುವು ಕಾಣುತ್ತಿರುವುದು ಸಾಮಾನ್ಯವಾಗುತ್ತಿದೆ. ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಕೂಡ ಕೊನೆಯ ಓವರ್ ವರೆಗೂ ನಡೆದು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ 6 ಎಸೆತಗಳಲ್ಲಿ ಸಿಎಸ್​ಕೆ ಗೆಲುವಿಗೆ 21 ರನ್​ಗಳ ಅವಶ್ಯಕತೆಯಿತ್ತು. ಆರ್​ಆರ್ ಪರ ಸಂದೀಶ್ ಶರ್ಮಾ (Sandeep Sharma) ಬೌಲರ್ ಆಗಿದ್ದರು. ಕ್ರೀಸ್​ನಲ್ಲಿ ಫಿನಿಶರ್ ಖ್ಯಾತಿಯ ಎಂಎಸ್ ಧೋನಿ (MS Dhoni) ಮತ್ತು ರವೀಂದ್ರ ಜಡೇಜಾ ಇದ್ದರು.

ಸಂದೀಪ್ ಶರ್ಮಾ ಅವರ ಮೊದಲ ಎರಡು ಬಾಲ್ ವೈಡ್ ಆಯಿತು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ದ್ವಿತೀಯ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರು. ಮೂರನೇ ಎಸೆತದಲ್ಲೂ ಮತ್ತೊಂದು ಸಿಕ್ಸ್ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆಯತ್ತ ಕೊಂಡೊಯ್ಯಿದರು. ಕೊನೆಯ 3 ಬಾಲ್​ನಲ್ಲಿ 7 ರನ್​ಗಳು ಬೇಕಾಗಿದ್ದವು. 4ನೇ ಎಸೆತ ಮತ್ತು 5ನೇ ಎಸೆತದಲ್ಲಿ ತಲಾ ಒಂದೊಂದು ರನ್ ಬಂತಷ್ಟೆ. ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಂದೀಪ್ ಅದ್ಭುತ ಯಾರ್ಕರ್ ಮೂಲಕ ಧೋನಿ ಸಿಕ್ಸ್ ಸಿಡಿಸುವುದನ್ನು ತಡೆದರು. ಈ ಮೂಲಕ ಆರ್​ಆರ್ 3 ರನ್​ಗಳ ರೋಚಕ ಜಯ ಸಾಧಿಸಿತು.

ಇದನ್ನೂ ಓದಿ
Image
PBKS vs GT, IPL 2023: ಐಪಿಎಲ್​ನಲ್ಲಿಂದು ಪಂಜಾಬ್- ಗುಜರಾತ್ ನಡುವೆ ಹೈವೋಲ್ಟೇಜ್ ಪಂದ್ಯ
Image
CSK vs RR, IPL 2023: ಕೊನೆಯ ಬಾಲ್​ನಲ್ಲಿ ಸಿಕ್ಸ್ ಸಿಡಿಸಲು ಧೋನಿ ವಿಫಲ: ಚೆನ್ನೈ-ಆರ್​ಆರ್​ ಪಂದ್ಯದ ರೋಚಕ ಫೋಟೋ ನೋಡಿ
Image
IPL 2023 Points Table: ರಾಜಸ್ಥಾನ್​​ಗೆ ರೋಚಕ ಜಯ: ಹೊಸ ಪಾಯಿಂಟ್ಸ್​ ಟೇಬಲ್​ ಹೀಗಿದೆ
Image
IPL 2023: ಅನಗತ್ಯ ದಾಖಲೆ ಬರೆದ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್

IPL 2023: RCB 200 ರನ್​ ಬಾರಿಸಿದ್ರು ಗೆಲ್ಲಲ್ಲ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ..!

ಪಂದ್ಯ ಮುಗಿದ ಬಳಿಕ ಮಾತನಾಡಿದ ಸಂದೀಪ್ ಶರ್ಮಾ, ”ನಾನು ಕೊನೆಯ ಓವರ್​ನಲ್ಲಿ ಯಾರ್ಕರ್ ಹಾಕಬೇಕೆಂಬ ತೀರ್ಮಾನ ಮಾಡಿದ್ದೆ. ಇದಕ್ಕಾಗಿ ನೆಟ್​ನಲ್ಲಿ ಶ್ರಮಪಟ್ಟು ಅಭ್ಯಾಸ ನಡೆಸಿದ್ದೆ. ಇಲ್ಲಿ ಲೆಗ್-ಸೈಡ್ ದೊಡ್ಡದಿದೆ. ಆದರೆ, ನಾನು ನನ್ನ ಲೆಂತ್ ತಪ್ಪಿದೆ, ಎರಡು ಲೋ ಫುಲ್​ಟಾಸ್ ಹಾಕಿದೆ, ಅದಕ್ಕೆ ಧೋನಿ ಸಿಕ್ಸರ್ ಹೊಡೆದರು. ಬಳಿಕ ನಾನು ಆ್ಯಂಗಲ್​ನಲ್ಲಿ ಬದಲಾವಣೆ ಮಾಡಿದೆ. ಅದು ಚೆನ್ನಾಗಿ ಕೆಲಸ ಮಾಡಿತು. ವಿಕೆಟ್ ಮೇಲೆ ಬೌಲ್ ಮಾಡಿದ್ದೇನೆ. ಅವರ ಬ್ಯಾಟ್​ಗೆ ಸಿಗದಂತೆ ಚೆಂಡು ಹಾಕಿದೆ,” ಎಂದು ಹೇಳಿದ್ದಾರೆ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಸಿಎಸ್​ಕೆ ನಾಯಕ ಎಂಎಸ್ ಧೋನಿ, ”ಮಧ್ಯಮ ಓವರ್​ನಲ್ಲಿ ನಾವು ಕಡಿಮೆ ರನ್ ಗಳಿಸಿದೆವು, ಸ್ಟ್ರೈಕ್ ಬದಲಾವಣೆ ಮಾಡಬೇಕಿತ್ತು. ನಮ್ಮ ಬೌಲರ್​ಗಳು ನೀಡಿದ ಪ್ರದರ್ಶನದಿಂದ ಖುಷಿ ಆಗಿದೆ. ನಾನು ಬ್ಯಾಟಿಂಗ್ ಮಾಡುವಾಗ ಬೌಲರ್​ಗಳು ಯಾವಾಗ ತಪ್ಪು ಎಸೆತವನ್ನು ಹಾಕುತ್ತಾರೆಂದು ಕಾಯುತ್ತಾ ಇರುತ್ತೇನೆ. ನಿಮ್ಮ ಬಲಕ್ಕೆ ತಕ್ಕಂತೆ ನೀವು ಬ್ಯಾಟಿಂಗ್ ಮಾಡಬೇಕು. ನನ್ನ ಬಲ ನೇರವಾಗಿ ಹೊಡೆಯುವುದು. ಇದು ನನ್ನ 200ನೇ ಪಂದ್ಯ ಎಂಬುದು ನನಗೆ ನಿಜಕ್ಕೂ ತಿಳಿದಿಲ್ಲ. ಸಾಧನೆ ಬಗ್ಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ. ಕೊನೆಯಲ್ಲಿ ನೀವು ಹೇಗೆ ಪ್ರದರ್ಶನ ನೀಡಿದ್ದೀರಿ ಮತ್ತು ಫಲಿತಾಂಶ ಏನಾಗಿದೆ ಎಂಬುದಷ್ಟೆ ಮುಖ್ಯ,” ಎಂಬುದು ಧೋನಿ ಮಾತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Thu, 13 April 23