ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರನಿಗೆ ಒಂದು ವರ್ಷ ಬ್ಯಾನ್

ಶ್ರೀಲಂಕಾ ನಾಯಕ ದಸುನ್ ಶನಕಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಒಂದು ವರ್ಷದ ಬ್ಯಾನ್ ವಿಧಿಸಿದೆ. ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದೇ ಇದಕ್ಕೆ ಕಾರಣ. ಐಪಿಎಲ್‌ನಲ್ಲಿ ಪಿಎಸ್‌ಎಲ್‌ಗಿಂತ 800% ಹೆಚ್ಚು ಹಣ ಸಿಕ್ಕಿತ್ತು. ಹಣದ ಆಮಿಷಕ್ಕೆ ಒಳಗಾಗಿ ಪಿಎಸ್‌ಎಲ್ ತ್ಯಜಿಸಿದ್ದಕ್ಕೆ ಶನಕಗೆ ಶಿಕ್ಷೆಯಾಗಿದೆ.

ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರನಿಗೆ ಒಂದು ವರ್ಷ ಬ್ಯಾನ್
ಆರ್​​ಆರ್

Updated on: Apr 21, 2026 | 9:06 AM

ರಾಜಸ್ಥಾನ ರಾಯಲ್ಸ್​​ನ ಈ ಬಾರಿಯ ಐಪಿಎಲ್​​ನಲ್ಲಿ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಹೀಗಿರುವಾಗಲೇ ಈ ತಂಡದ ಸ್ಟಾರ್ ಆಟಗಾರನಿಗೆ ಒಂದು ವರ್ಷದ ಬ್ಯಾನ್ ಬಿಸಿ ತಟ್ಟಿದೆ. ಹಾಗಂತ ಈ ಬ್ಯಾನ್ ಹೇರಿರುವುದು ಬಿಸಿಸಿಐ ಅಲ್ಲ, ಬದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ಪಾಕಿಸ್ತಾನ ಸೂಪರ್ ಲೀಗ್ ಆಡುವ ಭರವಸೆ ನೀಡಿ ನಂತರ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಸೇರ್ಪಡೆ ಆಗಿದ್ದೇ ಈ ಬ್ಯಾನ್​​ಗೆ ಕಾರಣ. ಅಷ್ಟಕ್ಕೂ ಬ್ಯಾನ್​​ಗೆ ಒಳಗಾದ ಆಟಗಾರು ಯಾರು? ದಸುನ್ ಶಾನಕ .

ದಸುನ್ ಶಾನಕ ಅವರು ಶ್ರೀಲಂಕಾ ತಂಡದ ಕ್ಯಾಪ್ಟನ್. ಅವರನ್ನು ಈ ಬಾರಿ ಐಪಿಎಲ್​​ನ ಯಾವ ತಂಡವೂ ಹರಾಜಿನಲ್ಲಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಅವರು ಪಾಕಿಸ್ತಾನ ಸೂಪರ್ ಲೀಗ್ ಆಕ್ಷನ್​​ಗೆ ಹೆಸರು ನೋಂದಾಯಿಸಿದರು. ಅವರು ಲಾಹೋರ್ ತಂಡ ಸೇರಿದರು. 75 ಲಕ್ಷ ಪಾಕಿಸ್ತಾನಿ ರೂಪಾಯಿಗೆ (ಭಾರತದಲ್ಲಿ 25 ಲಕ್ಷ ರೂಪಾಯಿ) ಅವರನ್ನು ಖರೀದಿಸಲಾಯಿತು. ಇತ್ತ ಆರ್​​ಆರ್​ ತಂಡದಲ್ಲಿ ಸ್ಯಾಮ್ ಕರನ್ ಅವರು ಇಂಜೂರಿಯಿಂದ ಹೊರಗುಳಿದಿದ್ದರಿಂದ, ಅವರ ಬದಲಿಗೆ ದಸುನ್ ಅವರಿಗೆ ಆಫರ್ ನೀಡಲಾಯಿತು.

ದಸುನ್ ಅವರು ಮರು ಯೋಚಿಸದೇ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅರ್ಧಕ್ಕೆ ಬಿಟ್ಟು, ಐಪಿಎಲ್ ಸೇರಿದರು. ಇದರಿಂದ ಸಿಟ್ಟಾಗಿರೋ ಪಾಕಿಸ್ತಾನ ಕ್ರಿಕೆಟ್ ಮಂಡಳಿ ದಸುನ್​ಗೆ ಒಂದು ವರ್ಷ ಬ್ಯಾನ್ ವಿಧಿಸಿದೆ. ಅಂದರೆ, 2027ರ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅವರು ಆಡುವಂತಿಲ್ಲ.

ಇನ್ನು, ದಸುನ್​​ಗೆ ಪಾಕಿಸ್ತಾನ ನೀಡುತ್ತಿದ್ದ ಹಣಕ್ಕಿಂತ 800 ಪರ್ಸೆಂಟ್ ಹೆಚ್ಚು ಹಣ ಐಪಿಎಲ್​​ನಿಂದ ಸಿಕ್ಕಿದೆ! ಹೌದು, ಆರ್​​ಆರ್​ ತಂಡ ದಸುನ್ ಅವರನ್ನು 2 ಕೋಟಿ ರೂಪಾಯಿ ಕೊಟ್ಟು ತೆಗೆದುಕೊಂಡಿದೆ. ಪಾಕಿಸ್ತಾನದ ಮೊತ್ತಕ್ಕೆ ಇದನ್ನು ಕನ್ವರ್ಟ್ ಮಾಡಿದರೆ 6 ಕೋಟಿ ರೂಪಾಯಿ ಆಗಲಿದೆ. ಪಾಕಿಸ್ತಾನ ಕ್ರಿಕೆಟ್ ಲೀಗ್​​​ನಿಂದ ಅವರಿಗೆ ಸಿಗುತ್ತಿದ್ದದು ಕೇವಲ 75 ಲಕ್ಷ ಪಾಕಿಸ್ತಾನಿ ರೂಪಾಯಿ.

Dasun

ದಸುನ್ ಅವರು ಈ ವಿಷಯವಾಗಿ ಕ್ಷಮೆ ಕೇಳಿದ್ದಾರೆ. ‘ಪಾಕಿಸ್ತಾನ ಸೂಪರ್ ಲೀಗ್​ನಿಂದ ಹಿಂದೆ ಸರಿಯುವ ನನ್ನ ನಿರ್ಧಾರಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಪಾಕ್ ಅಭಿಮಾನಿಗಳ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಈ ಲೀಗ್​ನಿಂದ ಹಿಂದೆ ಸರಿಯುವ ಸಮಯದಲ್ಲಿ ನನಗೆ ಬೇರೆ ಯಾವುದೇ ಪಂದ್ಯಾವಳಿಗೆ ಸೇರುವ ಉದ್ದೇಶವಿರಲಿಲ್ಲ. ನನಗೆ ಪಾಕಿಸ್ತಾನಿ ಅಭಿಮಾನಿಗಳ ಬಗ್ಗೆ ಅಪಾರ ಗೌರವವಿದೆ. ಮುಂದಿನ ದಿನಗಳಲ್ಲಿ ಅಲ್ಲಿಗೆ ಮರಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ದಸುನ್ ಶಾನಕ ಮಾಡಿದ ಸಣ್ಣ ತಪ್ಪಿನಿಂದ ಗೆದ್ದ ಟೀಮ್ ಇಂಡಿಯಾ

ವಿಚಿತ್ರ ಎಂದರೆ, ಈ ಮೊದಲು ಜಿಂಬ್ವಾಬ್ವೆ ಆಟಗಾರ ಮುಝರಬಾನಿ ಅವರು ಪಿಎಸ್​ಎಲ್​ ತೊರೆದು ಐಪಿಎಲ್ ಸೇರಿದ್ದರು. ಅವರಿಗೆ ಎರಡು ವರ್ಷ ಬ್ಯಾನ್ ಹೇರಲಾಗಿದೆ. ಇದೇ ತಪ್ಪು ಮಾಡಿದ ದಸುನ್​​ಗೆ ಏಕೆ ಒಂದು ವರ್ಷ ಶಿಕ್ಷೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us